NEWSನಮ್ಮಜಿಲ್ಲೆನಮ್ಮರಾಜ್ಯ

ಇಂದು ಸಾರಿಗೆ ನೌಕರರ ವೇತನ ಸಂಬಂಧ ಕರೆದಿದ್ದ ರಾಜೀ ಸಂಧಾನ ಸಭೆ ಮತ್ತೆ ವಿಫಲ!

 ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯೂ 01-01-24 ರಿಂದ ವೇತನ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪುನರ್‌ ಉಚ್ಚರಿಸಿದೆ.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಇಂದು ನಡೆದ ಸರ್ಕಾರಿ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯೊಂದಿಗೆ ನಾಲ್ಕೂ ಸಾರಿಗೆ ನಿಗಮಗಳ ಆಡಳಿತ ಮಂಡಳಿಯ ರಾಜೀ ಸಂಧಾನ ಸಭೆ ಮತ್ತೆ ವಿಫಲಗೊಂಡಿದ್ದು, ಜುಲೈ 15ಕ್ಕೆ ಮುಂದೂಡಲಾಗಿದೆ.

ಇಂದು ಜೂನ್‌ 30.06ರ ಬೆಳಗ್ಗೆ ಬೆಂಗಳೂರಿನ ಕಾರ್ಮಿಕರ ಭವನದಲ್ಲಿ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಕೆಎಸ್‌ಆರ್‌ಟಿಸಿ ಆಡಳಿತ ವರ್ಗ ಮತ್ತು ಜಂಟಿ ಕ್ರಿಯಾ ಸಮಿತಿಯ ನಡುವೆ ರಾಜೀ ಸಂಧಾನ ಸಭೆ ನಡೆಯಿತು. ಆಡಳಿತ ವರ್ಗದ ಪರವಾಗಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿಗಳು ಹಾಗೂ ಮುಖ್ಯ ಕಾನೂನು ಅಧಿಕಾರಿಗಳು ಭಾಗವಹಿಸಿದ್ದರು.

ಈ ಸಭೆಯಲ್ಲಿ ಜಂಟಿ ಕ್ರಿಯಾ ಸಮಿತಿಯ ಎಲ್ಲ ಐದು ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಆದರೆ ಈ ಸಭೆಯೂ ಕೂಡ ವಿಫಲಗೊಂಡಿದ್ದು, ನೌಕರರಿಗೆ ಸಿಗಬೇಕಿರುವ ನ್ಯಾಯಯುತ ವೃತನ ಹಾಗೂ ಸೌಲಭ್ಯಗಳು ಮರೀಚಿಕೆಯಾಗಿಯೇ ಉಳಿದಿವೆ.

ಇನ್ನು ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಆಡಳಿತ ವರ್ಗ ವಿನಾಕಾರಣ ವಿಳಂಬ ಮಾಡುತ್ತಿರುವುದನ್ನು ಖಂಡಿಸಿದ ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಆಡಳಿತ ವರ್ಗವು ಜಂಟಿ ಕ್ರಿಯಾ ಸಮಿತಿಯ ಜತೆ ಕೂಡಲೇ ಸಭೆ ನಡೆಸಿ ಅವುಗಳನ್ನು ಇತ್ಯರ್ಥಪಡಿಸಬೇಕೆಂದು ಮತ್ತು ಸರ್ಕಾರದ ಜತೆ ಮಾತುಕತೆ ಏರ್ಪಡಿಸಲು ಮುಂದಾಗಬೇಕೆಂದು ಜಂಟಿ ಕ್ರಿಯಾ ಸಮಿತಿ ಒತ್ತಾಯಿಸಿದೆ.

ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯೂ 01-01-24 ರಿಂದ ವೇತನ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪುನರ್‌ ಉಚ್ಚರಿಸಿದೆ.

ಜತೆಗೆ ಸರ್ಕಾರ ಹೊರಡಿಸಿರುವ ಏಕಪಕ್ಷೀಯ ಆದೇಶಗಳನ್ನು ನಮ್ಮ ಬೇಡಿಕೆಗೆ ಅನುಸಾರವಾಗಿ ಮಾರ್ಪಡಿಸಬೇಕು. ಅಂದರೆ ಈಗ ಶೇ.12.5ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದು, ಅದನ್ನು ಮಾರ್ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಶ್ರಮವಹಿಸಿ ದುಡಿಯುತ್ತಿರುವ ಸಾರಿಗೆ ನೌಕರರ ಸಂಕಷ್ಟ, ವೇದನೆಗಳನ್ನು ಮತ್ತು ಇನ್ನೂ ಹಲವು ಗಂಭೀರ ವಿಷಯಗಳ ಬಗ್ಗೆ ಗಟ್ಟಿ ದನಿ ಎತ್ತಲಾಗಿದ್ದು, ನಾವು ಸದಾ ನಿಮ್ಮ ಬೇಡಿಕೆಗಳ ಈಡೇರಿಕೆಗೆ ಟೊಂಕಕಟ್ಟಿ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.

ಪ್ರಮುಖವಾಗಿ ಸಂಸ್ಥೆಯ ಸಿ & ಡಿ ನಿಯಮ-22 ರ ಅಡಿಯಲ್ಲಿ ಕಾರ್ಮಿಕರಿಗೆ ನೀಡಲಾಗಿರುವ ಆಪಾದನಾ ಪತ್ರಗಳನ್ನು (ಚಾರ್ಜ್ ಶೀಟ್) ಆಡಳಿತ ವರ್ಗ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಈ ಯಾವುದಕ್ಕೂ ನಾಲ್ಕೂ ನಿಗಮಗಳ ಆಡಳಿತ ಮಂಡಿಳಿ ಮತ್ತು ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಡುವೆ ಹೊಂದಾಣಿಕೆ ಬಾರದ ಹಿನ್ನೆಲೆಯಲ್ಲಿ ಇಂದಿನ ಸಭೆ ವಿಫಲವಾಗಿದ್ದು, ಜುಲೈ 15ಕ್ಕೆ ಹೋಗಿದೆ.

ಈ ಎಲ್ಲದರ ನಡುವೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿರುವ ಕಾರ್ಮಿಕ ಆಯುಕ್ತರು ಎಲ್ಲ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಜಂಟಿ ಕ್ರಿಯಾ ಸಮಿತಿಯ ಜತೆ ಮಾತುಕತೆ ನಡೆಸಿ ಶೀಘ್ರದಲ್ಲಿ ಬೇಡಿಕೆಗಳನ್ನು ಇತ್ಯರ್ಥಪಡಿಸಲು ಆಡಳಿತ ವರ್ಗದ ಈ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಹಾಗೆಯೇ 21.05.2026ರ ಉಚ್ಚ ನ್ಯಾಯಾಲಯದ ಆದೇಶ ಇನ್ನೂ ಚಾಲ್ತಿಯಲ್ಲಿ ಇರುವುದರಿಂದ ಮುಖ್ಯಮಂತ್ರಿಗಳಿಗೆ ಹಾಗೂ ಸಾರಿಗೆ ಸಚಿವರಿಗೆ ಜಂಟಿ ಕ್ರಿಯಾ ಸಮಿತಿಯ ಬೇಡಿಕೆಗಳ ಬಗ್ಗೆ ಆಡಳಿತ ವರ್ಗ ತಿಳಿವಳಿಕೆ ನೀಡಿ ಮಾತುಕತೆ ನಡೆಸುವಂತೆ ಸಭೆ ಕರೆಯಲು ಅನುವು ಮಾಡಿಕೊಡುವಂತೆ ಕೂಡ ತಿಳಿಸಿದ್ದಾರೆ ಈ ಸಾರಿಗೆ ನೌಕರರ ವಿಷಯದಲ್ಲಿ ಹಲ್ಲುಕಿತ್ತ ಹಾವಿನಂತಿರುವ ಕಾರ್ಮಿಕ ಆಯುಕ್ತರು.

ಇಂದಿನ ಸಭೆಯಲ್ಲಿ ಕೆ.ಎಸ್.ಆರ್.ಟಿ.ಸಿ.ಸ್ಟಾಫ್ ಅಂಡ್ ವರ್ಕಸ್್ರ ಫೆಡರೇಷನ್ (ಎ.ಐ.ಟಿ.ಯು.ಸಿ), ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್ (ಸಿ.ಐ.ಟಿ.ಯು), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ.ಜಾ/ಪ.ಪಂ.ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ವಿಶ್ವ ಕಾರ್ಮಿಕರ ಕೂಟ (ನೋಂ) ಸಾರಿಗೆ ನಿಗಮಗಳ ನೌಕರರ ವಲಯದ ಎಲ್ಲ ಪದಾಧಿಕಾರಿಗಳು ಇದ್ದರು.

Deva
the authorDeva

Leave a Reply

error: Content is protected !!
Latest news
ಇಂದು ಸಾರಿಗೆ ನೌಕರರ ವೇತನ ಸಂಬಂಧ ಕರೆದಿದ್ದ ರಾಜೀ ಸಂಧಾನ ಸಭೆ ಮತ್ತೆ ವಿಫಲ! 2028ರ ವೇಳೆಗೆ ಮಾದಕ ವಸ್ತು- ನಶೆ ಮುಕ್ತ ಕರ್ನಾಟಕವೇ ನಮ್ಮ ಗುರಿ: ಸಿಎಂ ಡಿಕೆಶಿ ಕೊರಟಗೆರೆ: ಸರ್ಕಾರಿ ಬಸ್‌ನಲ್ಲಿ ಪುಟ್ಟ ಮಗು ಅಸ್ವಸ್ಥ- ಪ್ರಾಣ ಉಳಿಸಲು ಆಸ್ಪತ್ರೆಗೆ ಬಸ್‌ ತೆಗೆದುಕೊಂಡು ಹೋದ ಚಾಲಕ ಶರಣ... ನಾಳೆಯಿಂದ ಜಾರಿಗೆ ಬರುವಂತೆ ಪೆಟ್ರೋಲ್- ಡೀಸೆಲ್ ಮಾರಾಟದ ಎಲ್ಲ ನಿರ್ಬಂಧಗಳ ತೆರವುಗೊಳಿಸಿ ಕೇಂದ್ರ ಸರ್ಕಾರ ಆದೇಶ SIR ಪೂರ್ಣಗೊಂಡ ಬಳಿಕವೇ ಗೃಹಲಕ್ಷ್ಮೀ ಯೋಜನೆಯ ಪರಿಷ್ಕರಣೆ- ಮತದಾರರ ಪಟ್ಟೀಲಿ ಮನೆ ಯಜಮಾನಿ ಹೆಸರು ಕಡ್ಡಾಯ! ಓದಿನ ನೆಪದಲ್ಲಿ ಮಹಾನಗರಗಳ ಮಾಯಾಲೋಕಕ್ಕೆ ಬಂದು ಹಾದಿ ತಪ್ಪುತ್ತಿರುವ ಯುವತಿಯರು! KSRTC ಬಸ್ ಟೈಯರ್ ಸ್ಫೋಟ: ನಿವೃತ್ತ ಶಿಕ್ಷಕಿ ಸೇರಿ ಇಬ್ಬರು ಸ್ಥಳದಲ್ಲೇ ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ- ಆಸ್ಪತ್ರ... 308 ಗ್ರಾಂ ಮಾದಕ ದ್ರವ್ಯ ವಶ: ಇಬ್ಬರು ಯುವತಿಯರು ಸೇರಿ ಏಳು ಮಂದಿ ಬಂಧನ ಗೃಹಜ್ಯೋತಿ ಯೋಜನೆ ದುರ್ಬಳಕೆ ತಡೆಗಾಗಿ ಮತ್ತೆ ಅರ್ಜಿ: ಸಿಎಂ ಡಿಕೆಶಿ ಅಧಿಕೃತ ಘೋಷಣೆ ರಾಜ್ಯಾದ್ಯಂತ ನಾಳೆಯಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ: ಮನೆಗೆ ಬರುವ ಬಿಎಲ್ಒಗಳಿಗೆ ಸಹಕರಿಸಲು ಡಿಸಿಗಳು ಕರೆ