NEWSನಮ್ಮರಾಜ್ಯಸಿನಿಪಥ

ಸ್ಯಾಂಡಲ್‌ವುಡ್ ಒತ್ತಡಕ್ಕೆ ಮಣಿದ ಸರ್ಕಾರ : ಥಿಯೇಟರ್ ಭರ್ತಿಗೆ ಒಪ್ಪಿಗೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಿನಿಸುದ್ದಿ
ಬೆಂಗಳೂರು: ಸ್ಯಾಂಡಲ್‌ವುಡ್ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಥಿಯೇಟರ್ ಸಂಪೂರ್ಣ ಭರ್ತಿಗೆ ಅವಕಾಶ ನೀಡಲು ಒಪ್ಪಿಗೆ ಸೂಚಿಸಿದೆ.

ಮಂಗಳವಾರ ರಾಜ್ಯ ಸರ್ಕಾರ ಥಿಯೇಟರ್ ಈ ಹಿಂದೆ ಶೇ.50ರಷ್ಟು ಆಸನ ಭರ್ತಿಗೆ ನೀಡಿದ್ದ ಅವಕಾಶವನ್ನೇ ಮುಂದುವರಿಸುವುದಾಗಿ ಆದೇಶಿಸಿತ್ತು. ಈ ಆದೇಶದ ವಿರುದ್ಧ ಇಂದು ಸ್ಯಾಂಡಲ್‌ವುಡ್ ತಾರೆಯರು ತಮ್ಮ ಆಕ್ರೋಶ ಹೊರಹಾಕಿದ್ದರು. ಸಭೆ-ಸಮಾರಂಭ, ಮಾರುಕಟ್ಟೆ, ಬಸ್ ಗಳಲ್ಲಿನ ಜನದಟ್ಟನೆಗೆ ಅಂಕುಶ ಹಾಕದೆ ಬರೀ ಥಿಯೇಟರ್ ಗಳ ಮೇಲೆ ಯಾಕೆ ಎಂದು ಪ್ರಶ್ನಿಸಿದ್ದರು.

ಎಲ್ಲೆಡೆ ಕೋವಿಡ್​ ಮಾರ್ಗಸೂಚಿ ಸಡಿಲಗೊಳಿಸಿರುವ ವೇಳೆ ಸಿನಿಮಾ ಥಿಯೇಟರ್​ಗೆ ಮಾತ್ರ ಆಸನಗಳ ಭರ್ತಿಗೆ ನಿರ್ಬಂಧ ಹೇರಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸ್ಯಾಂಡಲ್​ವುಡ್​ ಮಂದಿ ಗರಂ ಆಗಿದ್ದರು.

ಈ ಕುರಿತು ಹಿರಿಯ ನಟ ಶಿವರಾಜ್​ ಕುಮಾರ್​​, ತಾರಾ ಸೇರಿದಂತೆ ಫಿಲ್ಮ್​ ಛೇಂಬರ್​ನ ಕೆಲ ಸದಸ್ಯರು ಆರೋಗ್ಯ ಸಚಿವ ಕೆ ಸುಧಾಕರ್​ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಚಲನಚಿತ್ರರಂಗ ಕಳೆದ 10 ತಿಂಗಳಲ್ಲಿ ಎಲ್ಲ ರಂಗಗಳಂತೆ ನಷ್ಟ ಅನುಭವಿಸಿದೆ. ಶೇ. 50ರಷ್ಟು ಅವಕಾಶ ನೀಡಿದರೆ ಪರಭಾಷಾ ಚಿತ್ರಗಳ ಹಾವಳಿ ಹೆಚ್ಚಾಗುತ್ತದೆ . ಈ ಹಿನ್ನಲೆ ರಾಜ್ಯದಲ್ಲಿಯೂ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶ ಮಾಡಿಕೊಡಬೇಕು ಎಂದು ಅಹವಾಲು ಮುಂದಿಟ್ಟರು.

ಫಿಲ್ಮ್​ ಚೇಂಬರ್​ ವಾದಕ್ಕೆ ಮಣಿದ ಸರ್ಕಾರ ನಾಲ್ಕು ವಾರಗಳವರೆಗೆ ಶೇ. 100 ರಷ್ಟು ಆಸನ ಭರ್ತಿಗೆ ಅವಕಾಶ ನೀಡಿದೆ. ಬಳಿಕ ಕೊರೊನಾ ಸೋಂಕಿನ ಪ್ರಕರಣದ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದೆ.

ಈ ಸಂಬಂಧ ಇಂದು ಮಾತನಾಡಿದ ಸಚಿವ ಸುಧಾಕರ್, ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಒಪ್ಪಿಗೆ ನೀಡಲಾಗಿದೆ. ಸುಮಾರು 1 ಲಕ್ಷ ಮಂದಿ ಚಿತ್ರರಂಗದ ಮೇಲೆ ಅವಲಂಬಿತರಾಗಿದ್ದಾರೆ. ಚಿತ್ರರಂಗದ ಬೇಡಿಕೆ ಮೇರೆಗೆ ಮುಂದಿನ ನಾಲ್ಕು ವಾರಗಳ ಅವಧಿಗೆ ಸಂಪೂರ್ಣ ಆಸನ ಭರ್ತಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಅಭಿಮಾನಿಗಳ ಮೇಲೆ ನಮ್ಮ ಭರವಸೆ
​ಇನ್ನು ಈ ಕುರಿತು ಮಾತನಾಡಿದ ನಟ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​, ತಾಂತ್ರಿಕ ಸಲಹಾ ಸಮಿತಿ ಬಳಿ ನಮ್ಮ ಸಮಸ್ಯೆ ಹೇಳಿದ್ದೇವೆ. ಸಿನಿಮಾ ಥಿಯೇಟರ್​ಗೆ ಮಾತ್ರ ಶೇ.50ರಷ್ಟು ಆಸನ ನೀಡಲಾಗಿದ್ದು, ಶೇ. 100 ರಷ್ಟು ಯಾವ ಉದ್ದೇಶದಿಂದ ಕೇಳುತ್ತಿದ್ದೇವೆ ಎಂಬುದರ ವಿವರಣೆ ನೀಡಿದ್ದೇವೆ. ಸರ್ಕಾರ ಇದಕ್ಕೆ ಒಪ್ಪಿದ್ದು, ನಾಲ್ಕು ವಾರಗಳ ಕಾಲವಕಾಶ ನೀಡಿದೆ.

ಅಲ್ಲದೇ ಸ್ಯಾನಿಟೈಸ್, ಮಾಸ್ಕ್ ಬಗ್ಗೆ ಸೂಚಿಸಿದ್ದಾರೆ‌. ನಮ್ಮ ಅಭಿಮಾನಿಗಳು ಸಹಕರಿಸುತ್ತಾರೆ. ನಾಲ್ಕು ವಾರ ಅನ್ನೋದು ನಮಗೆ ಬಹಳ ಚಿಕ್ಕದು. ನಮ್ಮ ಮೇಲೆ ಸರ್ಕಾರ ಭರವಸೆ ಇಟ್ಟಿದೆ, ನಾವು ಅಭಿಮಾನಿಗಳ ಮೇಲೆ ಭರವಸೆ ಇಟ್ಟಿದ್ದೇವೆ. ನಮ್ಮ ಬೇಡಿಕೆಗೆ ಮಣಿದು ಮಾರ್ಗಸೂಚಿ ಬದಲಾಯಿಸಿದ ಸಿಎಂ ಅವರಿಗೂ ಧನ್ಯವಾದ ಅರ್ಪಿಸುತ್ತೇವೆ ಎಂದರು.

Leave a Reply

error: Content is protected !!
LATEST
ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು? 8ಕಿಮೀ BMTC ಬಸ್‌ ಹಿಂಬಾಲಿಸಿಕೊಂಡು ಬಂದು ಚಾಲಕನ ಮೇಲೆ ಹಲ್ಲೆಮಾಡಿ ಪೊಲೀಸರ ಅತಿಥಿಯಾದ ಬೈಕ್‌ ಸವಾರ ಸರಿ ಸಮಾನ ವೇತನಕ್ಕೆ ಅಡ್ಡಗಾಲು ಹಾಕುವುದನ್ನು ಈಗಲಾದರೂ ಬಿಡಿ- ಸಾರಿಗೆ ಅಧಿಕಾರಿಗಳು-ನೌಕರರ ಆಗ್ರಹ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗಹಾಕಿ ವಸೂಲಿ ಮಾಡಿ: ತುಷಾರ್ ಗಿರಿನಾಥ್ ಅಂಗನವಾಡಿ ನೌಕರರ ಸರ್ಕಾರಿ ನೌಕರರಾಗಿ ಪರಿಗಣಿಸಿ: ಹೈಕೋರ್ಟ್ ತೀರ್ಪಿನಿಂದ ಕರ್ನಾಟಕದ ಅಂಗನವಾಡಿ ನೌಕರರಿಗೂ ಬಲ ವೀರವನಿತೆ ಒನಕೆ ಓಬವ್ವ ಜಯಂತಿ: ಮಹಿಳೆಯರು ಶೌರ್ಯ, ಧೈರ್ಯ ಬೆಳೆಸಿಕೊಳ್ಳಿ-ಸಚಿವ ಮುನಿಯಪ್ಪ ಮೈಸೂರಿನಲ್ಲಿ ಸಚಿವರಿಗೆ ಕಪಾಳ ಮೋಕ್ಷ: ಎಚ್‌ಡಿಕೆ ಆರೋಪ ಸುಳ್ಳು ಎಂದ ಡಿಸಿಎಂ ಶಿವಕುಮಾರ್‌ ಮುಡಾ ಪ್ರಕರಣದ ಹೈಕೋರ್ಟ್‌ ತೀರ್ಪಿನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಸಚಿವ ಜಮೀರ್‌ ವಿರುದ್ಧ ಕ್ರಮಕ್ಕೆ ರಾಜ್ಯಾಪಾಲರ ಸೂಚನ...