ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ತಾಲೂಕಿನ ರಾಮನಾಥತುಂಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಮಾಳಮ್ಮ ಅಧ್ಯಕ್ಷರಾಗಿ, ಅನ್ವರ್ ಷರೀಫ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ತಾಲೂಕಿನ ರಾಮನಾಥತುಂಗ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ-ಅಗೆ ಮೀಸಲಾಗಿತ್ತು. ಈ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಾಳಮ್ಮ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಪುಷ್ಪಲತಾ ನಾಮಪತ್ರ ಸಲ್ಲಿಸಿದ್ದರು.
ಮಾಳಮ್ಮ 11 ಮತಪಡೆದು ಆಯ್ಕೆಯಾದರೆ ಪುಷ್ಪಲತಾ 6 ಮತಪಡೆದು ಪರಾಭವಗೊಂಡರು, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅನ್ವರ್‌ಷರೀಫ್ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಪ್ರದೀಪ ಸ್ಪರ್ಧಿಸಿದ್ದು ಅನ್ವರ್‌ಷರೀಫ್ 11 ಮತಪಡೆದು ಆಯ್ಕೆಯಾದರೆ ಪ್ರದೀಪ್ 6 ಮತಗಳನ್ನು ಪಡೆದು ಪರಾಭವಗೊಂಡರು ಎಂದು ಚುನಾವಣಾಧಿಕಾರಿ ಬಿಇಒ ವೈ.ಕೆ.ತಿಮ್ಮೇಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಕೌಸಲ್ಯಲೋಕೇಶ್, ತಾ.ಪಂ.ಸದಸ್ಯೆ ಶಿವಮ್ಮ, ಗ್ರಾ.ಪಂ.ಸದಸ್ಯರಾದ ಆರ್.ಎ.ಮಂಜಪ್ಪ, ಕವಿತ, ಲತಾ, ರಂಗೇಗೌಡ, ಮಹದೇವಮ್ಮ, ಲಕ್ಷಮಮ್ಮ, ಆರ್.ಎಸ್.ಹರೀಶ್, ಶೋಭಾ, ಕೆ.ಕೆ.ಹರೀಶ್, ಜಯಮ್ಮ, ಎಸ್.ಆರ್.ಮಹೇಶ್, ಕೆ.ಪ್ರೇಮಸ್ವಾಮಿಗೌಡ, ಕೆ.ಕುಮಾರ್, ಮುಖಂಡರಾದ ಮಾಜಿ ಎಪಿಎಂಸಿ ಅಧ್ಯಕ್ಷ ಆರ್.ಪಿ.ರೇವಣ್ಣ, ಮಾಜಿ ಸದಸ್ಯ ಸುರೇಶ್, ವಡ್ಡರಕೇರಿ ಮುತ್ತುರಾಜ್, ಶಫಿಅಹಮ್ಮದ್, ಎಸ್.ಜಿ.ವೆಂಕಟೇಶ್, ನೂರಅಹಮ್ಮದ್, ಅಹಮ್ಮದ್‌ಜಾನ್, ಸೇರಿದಂತೆ ಮತ್ತಿತರರು ಇದ್ದರು.