ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ರಾಜ್ಯಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಗುಲಾಬ್ ನಬಿ ಆಜಾದ್ ಅವರ ಪರಿಷತ್ ಸದಸ್ಯತ್ವ ಸ್ಥಾನದ ಅವಧಿ ಮುಕ್ತಾಯವಾಗಿದ್ದು ಅವರಿಗೆ ವಿದಾಯ ಹೇಳುವಾಗ ಪ್ರಧಾನಿ ನರೇಂದ್ರ ಮೋದಿ ಭಾವುಕರಾದರು.
ಇಂದು ರಾಜ್ಯ ಸಭೆಯಲ್ಲಿ ಮಾತನಾಡಿದ ಅವರು, ಭಯೋತ್ಪಾದಕ ದಾಳಿಯಿಂದಾಗಿ ಗುಜರಾತ್‌ನ ಜನರು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗೆ ಸಿಲುಕಿಕೊಂಡಾಗ ಆಜಾದ್ ಮತ್ತು ಪ್ರಣವ್ ಮುಖರ್ಜಿಯವರ ಪ್ರಯತ್ನಗಳನ್ನು ನಾನು ಎಂದಿಗೂ ಮರೆಯುವುದಿಲ್ಲ. ತಮ್ಮ ಕುಟುಂಬದ ಸದಸ್ಯರೇ ಸಿಲುಕಿಕೊಂಡಿದ್ದಾರೆ ಎಂಬುವಷ್ಟು ಚಡಪಡಿಸಿ ಗುಜರಾತ್ ಜನರನ್ನು ರಕ್ಷಿಸುವಲ್ಲಿ ಅವಿರತ ಶ್ರಮಿಸಿದ್ದರು ಎಂದು ಆಜಾದ್ ಅವರನ್ನು ಹಾಡಿ ಹೊಗಳಿದರು.
ಗುಲಾಮ್ ನಬಿ ಆಜಾದ್ ಅವರನ್ನು ನಾನು ಹಲವು ವರ್ಷಗಳಿಂದ ನೋಡಿದ್ದೇನೆ. ನಾವು ಇಬ್ಬರೂ ಒಟ್ಟಿಗೆ ಮುಖ್ಯಮಂತ್ರಿಗಳಾಗಿದ್ದವರು. ನಾನು ಸಿಎಂ ಆಗುವ ಮೊದಲೇ ಅವರನ್ನು ಸಂಪರ್ಕಿಸಿದ್ದೆ ಆ ವೇಳೆಗಾಗಲೇ ಅವರು ರಾಜಕಾರಣದಲ್ಲಿ ಸಕ್ರಿಯರಾಗಿದ್ದರು. ಅವರ ಸಲಹೆಗಳನ್ನು ನಾನು ಪಡೆದು ಕಾರ್ಯನಿರ್ವಹಿಸಿದ್ದೇನೆ ಎಂದು ತಿಳಿಸಿದರು.
ತೋಟಗಾರಿಕೆ ಬಗ್ಗೆ ಗುಲಾಬ್ ನಬಿ ಆಜಾದ್ ಅವರಿಗೆ ಅಪಾರ ಕಾಳಜಿ ಇದೆ. ಇನ್ನು ಇದಕ್ಕೂ ಮೊದಲು ಜಮ್ಮು ಮತ್ತು ಕಾಶ್ಮೀರ ಚುನಾವಣೆ ಗೆಲ್ಲಲು ಅವರ ಪಾತ್ರವನ್ನು ಹೊಗಳಿದರು. ನಾವು ನಿಜವಾದ ಸ್ನೇಹಿತರು. ಅಧಿಕಾರದಲ್ಲಿ ಎಲ್ಲವನ್ನೂ ಹೇಗೆ ನಿರ್ವಹಿಸಬೇಕು ಎಂಬುದನ್ನು ಅವರನ್ನು ನೋಡಿ ನಾವು ಕಲಿಯಬೇಕು ಎಂದು ಪ್ರಶಂಸಿಸಿದರು.
ಇಂದು ನಾಲ್ವರು ಸಂಸದರು ನಿವೃತ್ತಿಯಾಗುತ್ತಿದ್ದು ಅವರಿಗೆ ಬೀಳ್ಕೊಡಲಾಯಿತು.