NEWSನಮ್ಮಜಿಲ್ಲೆನಮ್ಮರಾಜ್ಯರಾಜಕೀಯ

ಸಾರ್ವಜನಿಕರ ತೆರಿಗೆ ಹಣ ಲೂಟಿಗೆ ಮುಂದಾದ ಸರ್ಕಾರ…!?

ಕೊರೊನಾ ಸಂಕಷ್ಟದಲ್ಲೂ 13.40 ಕೋಟಿ ರೂ. ವೆಚ್ಚದಲ್ಲಿ 60 ಕಾರುಗಳ ಖರೀದಿಗೆ ಅಸ್ತು

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಸಂಕಷ್ಟದ ಈ ಸಮಯದಲ್ಲೇ 60 ಹೊಸ ಕಾರುಗಳ ಖರೀದಿಗೆ ಮುಂದಾಗಿದ್ದಾಗಿ ಅವುಗಳಿಗೆ 13.40 ಕೋಟಿ ರೂ. ವೆಚ್ಚ ಮಾಡಲು ಸರ್ಕಾರ ಮುಂದಾಗಿದೆ.

ಈ ಹಿಂದೆ ಸಚಿವರು ಸಂಸದ ಕಾರು ಖರೀದಿಗೆ ಇದ್ದ 22 ಲಕ್ಷ ರೂ. ಬದಲಿಗೆ 23 ಲಕ್ಷ ರೂ. ಖರೀದಿ ವೆಚ್ಚ ಹೆಚ್ಚಿಕೊಂಡು ಈ ಕಾರುಗಳ ಖರೀದಿಗೆ ಮುಂದಾಗುವ ಮೂಲಕ ಸರ್ಕಾರ ಸಾರ್ವಜನಿಕರ ತೆರಿಗೆ ಹಣವನ್ನು ದುಂದುವೆಚ್ಚ ಮಾಡುವ ಮೂಲಕ ಖರ್ಚು ಮಾಡುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈಗ 23 ಲಕ್ಷ ರೂ. ಖರೀದಿ ದರ ಏರಿಸಿ ಕೊಂಡು 32 ಸಚಿವರಿಗೆ ಮತ್ತು 28 ಸಂಸದರಿಗೆ ಕಾರು ಕೊಳ್ಳಲು ಮುಂದಾಗಿರುವು ನಿಜಕ್ಕೂ ಕೊರೊನಾ ಈ ಪರಿಸ್ಥಿತಿಯಲ್ಲಿ ದುರಾದೃಷ್ಟಕರ ಸಂಗತಿ ಎಂದು ಜನ ಪ್ರತಿನಿಧಿಗಳು ಮತ್ತು ಸರ್ಕಾರ ನಡೆಯನ್ನು ಜನರು ಖಂಡಿಸಿದ್ದಾರೆ.

ಸಾಮಾನ್ಯ ಜನರು ಇರುವ ವಾಹನಗಳನ್ನು ಓಡಿಸಲಾಗಷ್ಟು ವಿಷಮ ಪರಿಸ್ಥಿತಿಗೆ ಪೆಟ್ರೋಲ್‌ ಡೀಸೆಲ್‌ ದರ ಏರಿಸುವ ಮೂಲಕ ಜನರನ್ನು ದೂಡಿರುವ ಸರ್ಕಾರ. ಪೆಟ್ರೋಲ್‌ ಡೀಸೆಲ್‌ ದರ ಇಳಿಕೆ ಮಾಡಿ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ರಾಜ್ಯದ ಜನರ ಕಷ್ಟವನ್ನು ಆಲಿಸಲು ಇವರ ಬಳಿ ಸಮಯವಿಲ್ಲ. ಆದರೆ ಐಶಾರಾಮಿ ಜೀವನ ನಡೆಸಲು. ಸಚಿವರು ಹೊಸ ಕಾರು ಖರೀದಿಸಿ ಸ್ವ ಹಿತಕ್ಕೆ ಜನರ ತೆರಿಗೆ ಹಣ ಉಪಯೋಗಿಸಿಕೊಳ್ಳಲು ಮುಂದಾಗಿರುವುದು, ಈ ರೀತಿ ಮಾಡುವುದಕ್ಕೆ ಸ್ವಲ್ಪವು ಇವರಿಗೆ ನಾಚಿಕೆ ಆಗೊದಿಲ್ಲವಾ ಎಂದು ಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ.

ಪೆಟ್ರೋಲ್‌ ಬೆಲೆ ಕಡಿಮೆ ಮಾಡಿ ಎಂದು ಜನರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಈ ನಡುವೆ ಈಗಿರುವ ಕಾರುಗಳನ್ನು 2-3ವರ್ಷದ ಹಿಂದೆ ಖರೀದಿಸಲಾಗಿದೆ. ಅವು ಇಷ್ಟು ಬೇಗ  ಹಳೆಯದಾಗಿ ಹೋಗಿವೆಯಾ? ನಾಚಿಕೆ ಆಗೊದಿಲ್ವಾ ನಿಮ್ಮ ಜನ್ಮಕ್ಕೆ. ಜನರ ಸಮಸ್ಯೆಗೆ ಸ್ಪಂದಿಸಬೇಕಾದ ನೀವು ನಿಮ್ಮ ಸ್ವ ಹಿತಕ್ಕಾಗಿ ಈ ರೀತಿ ನಡೆ ಅನುಸರಿಸುವುದು ಸರಿನಾ ಎಂದು ಕಿಡಿಕಾರುತ್ತಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು