ವಿಜಯಪಥ ಸಮಗ್ರ ಸುದ್ದಿ
ದಿಸ್ಪುರ್: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಿಣಿ ಸಮ್ಮಾನ್ ಯೋಜನೆ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ. ಕೊಡಲಾಗುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಘೋಷಣೆ ಮಾಡಿದ್ದಾರೆ.
ಅಸ್ಸಾಂನಲ್ಲಿ ಭರ್ಜರಿಯಾಗಿ ಚುನಾವಣೆ ಪ್ರಚಾರ ಆರಂಭಿಸಿರುವ ಅವರು ಇಂದು ಎಸ್ಟೇಟುಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಮಿಕರೊಂದಿಗೆ ಸಮಯ ಕಳೆದಿದ್ದಾರೆ. ಈ ವೇಳೆ ಗೃಹಿಣಿ ಸಂಯೋಜನೆ ಮೂಲಕ ಗೃಹಿಣಿಯರಿಗೆ ಪ್ರತಿ ತಿಂಗಳು 2000 ರೂ. ಮತ್ತು ಟೀ ತೋಟದಲ್ಲಿ ಸೊಪ್ಪು ಬಿಡಿಸುವ ಮಹಿಳೆಯರಿಗೆ ಪ್ರತಿದಿನ 365 ರೂ. ನೀಡುತ್ತೇವೆ. ಜತೆಗೆ 5ಲಕ್ಷ ಹೊಸ ಸರ್ಕಾರಿ ಕೆಲಸಗಳನ್ನು ಸೃಷ್ಟಿಸುತ್ತಿವೆ ಎಂದು ಹೇಳಿದರು.
ಈ ಎಲ್ಲಾ ಹೇಳಿಕೆಗಳು ಕೇವಲ ಆಶ್ವಾಸನೆಗಳಲ, ಭರವಸೆಗಳು. ಅಲ್ಲದೆ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಹೇಳಿಕೆಗಳನ್ನು ಈಡೇರಿಸುತ್ತೇವೆ ಎಂದು ಹೇಳುವ ಮೂಲಕ ಜನರಲ್ಲಿ ಕಾಂಗ್ರೆಸ್ ಪರ ಒಲವು ಮೂಡಿಸುತ್ತಿದ್ದಾರೆ.
ಅಸ್ಸಾಂನಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಇಂದು ಬೆಳಗ್ಗೆ ಸಹ ಪ್ರಿಯಾಂಕಾ ಗಾಂಧಿ ವಾದ್ರಾ ಟೀ ಎಲೆಗಳನ್ನು ಕಿತ್ತಿದ್ದಾರೆ. ಆ ಫೋಟೋಗಳನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು ಸಕ್ಕತ್ತು ವೈರಲ್ ಆಗುತ್ತಿದೆ.
ಅಸ್ಸಾಂನಲ್ಲಿ ಚುನಾವಣಾ ಪ್ರಚಾರದಲ್ಲಿರುವ ಪ್ರಿಯಾಂಕಾ ವಾದ್ರಾ ಪ್ರಚಾರದ ಅಂಗವಾಗಿ ಆದಿವಾಸಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಅಲ್ಲದೆ ಚಹಾ ತೋಟ ಕಾರ್ಮಿಕರ ಜೀವನದ ಸತ್ಯ ಮತ್ತು ಸರಳತೆ ಇಂದ ಕೂಡಿದೆ ಮತ್ತು ಅವರ ಶ್ರಮ ದೇಶಕ್ಕೆ ಅಮೂಲ್ಯವಾಗಿದೆ ಎಂದು ಹೇಳಿದ್ದಾರೆ.
ಅವರೊಂದಿಗೆ ಕುಳಿತುಕೊಳ್ಳುವುದು ಅವರ ಕೆಲಸ ಕುಟುಂಬದ ಯೋಗಕ್ಷೇಮ ಮತ್ತು ಅವರ ಜೀವನದ ಕಷ್ಟಗಳ ಅನುಭವವನ್ನು ತಿಳಿದುಕೊಂಡೆ ಅವರಿಂದ ನನಗೆ ದೊರೆತ ಪ್ರೀತಿ ಮತ್ತು ಅನ್ಯೂನ್ಯತೆಯನ್ನು ನಾನು ಮರೆಯುವುದಿಲ್ಲ ಎಂದು ಬರೆದುಕೊಂಡಿರುವ ಅವರು, ಸುಂದರ ಕ್ಷಣಗಳ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ತೋಟದಲ್ಲಿ ಮಹಿಳಾ ಕಾರ್ಮಿಕರಿಂದ ಚಹಾ ಎಲೆಗಳನ್ನು ಬಿಡಿಸಿದ್ದಾರೆ ಎಂದು ಬರೆದುಕೊಂಡು ಕಾಂಗ್ರೆಸ್ ಅಧಿಕೃತ ಖಾತೆಯಲ್ಲಿ ಪ್ರಿಯಾಂಕಾ ಅವರ ಟೀ ಎಲೆ ಬಿಡಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದೆ.
ಅಸ್ಸಾಂನಲ್ಲಿ ಮಾರ್ಚ್ 27ರಿಂದ ಚುನಾವಣೆ ಆರಂಭವಾಗಲಿದ್ದು ಪ್ರಿಯಾಂಕಗಾಂಧಿ ಎರಡು ದಿನಗಳ ಕಾಲ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆ 3 ಹಂತಗಳಲ್ಲಿ ನಡೆಯಲಿದೆ.