CrimeNEWSನಮ್ಮಜಿಲ್ಲೆ

ಇಬ್ಬರು ರಸ್ತೆ ದರೋಡೆಕೊರರ ಬಂಧನ: ಬೈಕ್‌, ನಗದು ಮೊಬೈಲ್‌ ವಶ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಮೈಸೂರು : ವಿವಿಧ 13 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಕಳ್ಳರನ್ನು ಬಂಧಿಸಿರುವ ಮೇಟಗಳ್ಳಿ ಪೊಲೀಸರು. 20 ಸಾವಿರ ರೂ. ನಗದು, 1 ಬೈಕ್, 2 ಮೊಬೈಲ್ ವಶ ಪಡಿಸಿಕೊಂಡಿದ್ದಾರೆ.

ಕೆಸರೆ ನಿವಾಸಿಗಳಾದ ಜಮೀಲ್ ಖಾನ್ (28), ಶಂಕರ್ (42) ಎಂಬ ಆರೋಪಿಗಳೆ ಬಂಧಿತರು. 12 ರಾಬರಿ, ಎಕ್ಸ್‌ಟಾರ್ಷನ್ ಮತ್ತು ಒಂದು ಬೈಕ್ ಕಳ್ಳತನದ ಪ್ರಕರಣ ದಾಖಲಾಗಿದೆ.

ಫೆ.22ರಂದು ವಿಜಯನಗರದ ವ್ಯಕ್ತಿಯೊಬ್ಬರು ಕಾರ್ಯನಿಮಿತ್ತ ಪಾಂಡವಪುರಕ್ಕೆ ಕಾರಿನಲ್ಲಿ ಹೋಗುತ್ತಿರುವಾಗ ಬೆಂಗಳೂರು-ಮೈಸೂರು ರಸ್ತೆಯ ಸಿದ್ದಲಿಂಗಪುರದ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ಕಾರನ್ನು ಸೈಡಿಗೆ ನಿಲ್ಲಿಸಲು ಹೇಳಿದ್ದಾರೆ, ಒಬ್ಬಾತ ನೀವು ನಮ್ಮ ಬೈಕಿಗೆ ಹಿಟ್ ಅಂಡ್ ರನ್ ಮಾಡಿ ಬಂದಿದ್ದು ನಮ್ಮ ಬೈಕಿನಲ್ಲಿ ಹಿಂದೆ ಕುಳಿತವನಿಗೆ ಕಾಲು ಮುರಿದು ಹೋಗಿದೆ ಎಂದು ಸುಳ್ಳು ಹೇಳಿದ್ದರು.

ನಂತರ ಆತನನ್ನು ನೀವು ಕೂಡಲೇ  ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಅಥವಾ ಹಣ ಕೊಡಿ ನಾವು ಚಿಕಿತ್ಸೆ ಪಡೆದುಕೊಳ್ಳುತ್ತೇವೆ. ಇಲ್ಲವಾದರೆ, ನಿಮ್ಮ ಮೇಲೆ ಈಗಲೇ ಪೊಲೀಸರಿಗೆ ಹಿಟ್ ಅಂಡ್ ರನ್ ಕೇಸ್ ಕೊಟ್ಟು ಒಳಗೆ ಹಾಕಿಸುತ್ತೇವೆಂದು ಅಡ್ಡಗಟ್ಟಿ ಬಾಯಿಗೆ ಬಂದಂತೆ ಬೈಯ್ದು ಬೆದರಿಕೆ ಒಡ್ಡಿದ್ದರು.

ಹೆದರಿದ ವ್ಯಕ್ತಿ ಗೂಗಲ್ ಪೇ ಮೂಲಕ ಕಳ್ಳರ ಖಾತೆಗೆ 19 ಸಾವಿರ ರೂ. ಕಳುಹಿಸುತ್ತಾರೆ. ಆನಂತರ ವ್ಯಕ್ತಿಯನ್ನು ಆರೋಪಿಗಳು ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ಮಾಹಿತಿ ಮೇರೆಗೆ ಮಾ.17ರಂದು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಮ್ಮ ಟಿ.ವಿ.ಎಸ್ ಪ್ಲೇಮ್ ಎಂಬ ಮೋಟರ್ ಬೈಕಿನಲ್ಲಿ ಸಿದ್ದಲಿಂಗಪುರದ ಬಳಿ ಹೋಗುತ್ತಿದ್ದ ಕಾರಿನ ಹಿಂಭಾಗದ ಡೋರ್‌ಗೆ ಕಾರು ಚಾಲಕನಿಗೆ ಗೊತ್ತಾಗದಂತೆ ಜೋರಾಗಿ ಹೊಡೆದು ಇದನ್ನೇ ಅಪಘಾತವೆಂದು ಭಾವಿಸುವಂತೆ ಮಾಡಿ ಆತನಿಂದ ಹೆದರಿಸಿ ಹಣ ಸುಲಿಗೆ ಮಾಡಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳು 2017 ರಿಂದ ಇಲ್ಲಿಯವರೆಗೆ ಮೈಸೂರು ನಗರದ ಕುವೆಂಪುನಗರ, ವಿ.ವಿ ಪುರಂ, ಜಯಲಕ್ಷ್ಮೀಪುರಂ, ಸರಸ್ವತಿ ಪುರಂ, ನರಸಿಂಹರಾಜ ಪೊಲೀಸ್ ಠಾಣೆಗಳಲ್ಲಿ ಮತ್ತು ಇಲವಾಲ ಪೊಲೀಸ್ ಠಾಣೆ, ಮದ್ದೂರು ಪೊಲೀಸ್ ಠಾಣೆ, ಶ್ರೀರಂಗಪಟ್ಟಣ ಗ್ರಾಮಾಂತರ ಹಾಗೂ ಟೌನ್ ಠಾಣೆಗಳಲ್ಲಿ ಬೆಂಗಳೂರಿನ ಚಾಮರಾಜ ಪೇಟೆ ಮತ್ತು ಕುಂಬಳಗೋಡು ಪೊಲೀಸ್ ಠಾಣೆಗಳಲ್ಲಿ ಮತ್ತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ತಲಾ 1 ರಂತೆ ಒಟ್ಟು 12 ರಾಬರಿ, ಎಕ್ಸ್‌ಟಾರ್ಷನ್ ಮತ್ತು ಒಂದು ಬೈಕ್ ಕಳ್ಳತನದ ಪ್ರಕರಣಗಳು ದಾಖಲಾಗಿವೆ.

ಡಿಸಿಪಿಗಳಾದ ಡಾ.ಎ.ಎನ್. ಪ್ರಕಾಶ್‌ಗೌಡ, ಗೀತಪ್ರಸನ್ನ, ನರಸಿಂಹರಾಜ ವಿಭಾಗದ ಎ.ಸಿ.ಪಿ ಶಿವಶಂಕರ್ ರವರ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಠಾಣೆಯ ಇನ್ಸ್‌ಪೆಕ್ಟರ್ ಎ.ಮಲ್ಲೇಶ್, ಪಿ.ಎಸ್.ಐಗಳಾದ ವಿಶ್ವನಾಥ್, ನಾಗರಾಜ ನಾಯಕ್ ಮತ್ತು ಎ.ಎಸ್.ಐ ಪೊನ್ನಪ್ಪ, ಮಹದೇವ್ ಸಿಬ್ಬಂದಿಯವರಾದ ದಿವಾಕರ್, ಪ್ರಶಾಂತ್, ಬಸವರಾಜು, ಲಿಖಿತ್, ಆಶಾ ಇದ್ದರು.

Leave a Reply

error: Content is protected !!
LATEST
KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ