Please assign a menu to the primary menu location under menu

CrimeNEWSರಾಜಕೀಯ

ಇಂದು ಸಂಜೆ ಸಿನಿಮಾ ತೋರಿಸ್ತೀನಿ ಎಂದ ಜಾರಕಿಹೊಳಿ: ಆದರೆ, ಅದು ಯಾರದ್ದು ! ?

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಒಂದು ರೀತಿಯ ಹೊಲಸು ಹುಟ್ಟಿಸುವಂತಿರುವ ಸಾಸಲೀಲೆ ಸಿಡಿ ಪ್ರಕರಣ ನಾಡಿನ ಜನತೆಗೆ ಒಂದು ರೀತಿಯ ಮನರಂಜನೆ ಮತ್ತು ಮುಜುಗರದ ಸಂಗತಿಯಾಗಿದ್ದು, ಬಹುತೇಕರು ಈ ಸಿಡಿ ಸದ್ದು ಯಾವಾಗು ಮುಗಿಯುತ್ತದೋ ಎಂದು ಬೇಸರದಿಂದಲೇ ಪ್ರತಿಕ್ರಿಸುತ್ತಿದ್ದಾರೆ.

ಈ ನಡುವೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಲೈಗಿಂಕ ಕಿರುಕುಳದ ಸಿಡಿ ಪ್ರಕರಣಕ್ಕೆ ಮುಕ್ತಿ ಸಿಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಈ ನಡುವೆ ಇದು ಮತ್ತೆ ಮತ್ತೆ ಹೊಸ ರೂಪವನ್ನು ಪಡೆದುಕೊಳ್ಳುತ್ತಿದ್ದು, ಬೇರೆ ಬೇರೆ ಆಯಾಮಗಳಲ್ಲಿ ನಿಶಬ್ಧವಾಗುವ ಬದಲಿಗೆ ಸ್ಫೋಟಗೊಳ್ಳುತ್ತಿದೆ. ಇದು ಒಂದು ರೀತಿಯ ಚ್ಯುಯಿಂಗ್‌ ಗಮ್‌ ರೀತಿಯಾಗಿದೆ.

ಇನ್ನು ಅವರ ಆಟ ಮುಗಿಯಿತು ಇನ್ನೇನಿದ್ದರೂ ನಮ್ಮ ಆಟ ಶುರು ಎಂದು ಹೇಳಿರುವ ರಮೇಶ್ ಜಾರಕಿಹೊಳಿ ಉರಿಯವ ಬೆಂಕಿಗೆ ಇನ್ನಷ್ಟು ಪೆಟ್ರೋಲ್‌ ಹಾಕುತ್ತಿದ್ದಾರೇನೋ ಎನಿಸುತ್ತಿದೆ. ಇಂಥ ಪ್ರಕರಣಗಳನ್ನು ತಾಳ್ಮೆಯಿಂದ ಪರಿಹರಿಸಿಕೊಳ್ಳುವ ಬದಲಿಗೆ ಸಾಮಾನ್ಯರಿಗಿಂತಲು ಕೆಳಮಟ್ಟಕ್ಕೆ ಇಳಿದು ಒಂದು ರೀತಿ ಸಮಾಜಕ್ಕೆ ಮಾರಕವಾಗುವ ರೀತಿಯಲ್ಲಿ ಮಾಧ್ಯಗಳ ಮುಂದೆ ಬಂದು ಹೇಳಿಕೆ ನೀಡುತ್ತಿದ್ದಾರೆ.

ಇವರ ಈ ನಡೆ ಇಡೀ ರಾಜ್ಯದವನ್ನು ದೇಶ, ವಿದೇಶದಲ್ಲಿ ಬೆತ್ತಲಾಗಿಸುತ್ತಿದೆ ಎಂಬ ಸಾಮಾನ್ಯ ಜ್ಞಾನವು ಇಲ್ಲವಾಗಿರುವುದು ಒಬ್ಬ ಮಾಜಿ ಮಂತ್ರಿಯ ತಪ್ಪುಗಳನ್ನು ಸಾಬೀತು ಮಾಡುತ್ತಿದೆಯೇನೋ ಎನಿಸುತ್ತಿದೆ.

ಅಂದಹಾಗೆ! ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೂಡ ಆಡಿಯೋ-ವಿಡಿಯೋ ಸಮರ ಮುಂದುವರೆಯಲಿದೆ. ಇಂದು (ಶನಿವಾರ) ಸಂಜೆ 4 ಗಂಟೆ ಬಳಿಕ ಸಿನಿಮಾ ತೋರಿಸ್ತೀನಿ ಎಂದು ಶುಕ್ರವಾರ ರಮೇಶ್ ಜಾರಕಿಹೊಳಿ ವಿರೋಧಿಗಳನ್ನು ಎಚ್ಚರಿಸಿದ್ದರು. ಆದರೆ, ಅದು ಯಾವ ಸಿನಿಮಾ, ಯಾರದ್ದು ಎಂಬುದನ್ನು ಬಹಿರಂಗಪಡಿಸಲಿಲ್ಲ.

ನಿನ್ನೆ ಸಂತ್ರಸ್ತ ಯುವತಿ ಮೂರನೇ ವಿಡಿಯೋ ಬಿಡುಗಡೆ ಮಾಡುವ ಜೊತೆಗೆ ತನ್ನ ವಕೀಲ ಜಗದೀಶ್ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ಕೇಸ್ ದಾಖಲಿಸಿದ್ದರು. ಈ ಸಮಯದಲ್ಲಿ ಆ ಯುವತಿ ತಂದೆ ತಾಯಿ ಜೊತೆ ಮಾತನಾಡಿದ್ದಾರೆ ಎನ್ನಲಾದ ಹಾಗೂ ಡಿಕೆಶಿ ಹೆಸರು ಪ್ರಸ್ತಾಪಿಸಿದ್ದಾರೆ ಎನ್ನಲಾದ ಆ ಆಡಿಯೋ ಸಾಮಾಜಿ ಜಾಲತಾಣಗಳಲ್ಲಿ ಹರಿದಾಡಿ ಮತ್ತಷ್ಟು ಸಂಚಲನ ಮೂಡಿಸಿತ್ತು.

ಜತೆಗೆ ಶನಿವಾರ ಬೆಳ್ಳಂಬೆಳಗ್ಗೆ ನಾಲ್ಕನೇ ವಿಡಿಯೋ ಬಿಡುಗಡೆ ಮಾಡಿರುವ ಯುವತಿ, ರಮೇಶ್ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯಬೇಕು ಅನಿಸುತ್ತಿದೆ ಎಂದಿದ್ದಾಳೆ. ಇನ್ನು ಈ ನಡುವೆ ಅವರ ಆಟ ಮುಗಿಯಿತು ಇನ್ನೇನಿದ್ದರು ನಮ್ಮ ಆಟ ಶುರು ಎಂದು ರಮೇಶ್‌ ಹೇಳಿದ್ದಾರೆ.

ಯುವತಿಯು ನಿನ್ನೆ ಮೂರನೇ ವಿಡಿಯೋ ಬಿಡುಗಡೆ ಮಾಡಿದ ಬೆನ್ನಲ್ಲೇ ಮುಂದೆ ನಮ್ಮ ಆಟ ಶುರು ಅಂತ ರಮೇಶ್‌ ಹೇಳಿದ್ದರು. ಡಿಕೆಶಿ ತನ್ನ ಸ್ನೇಹಿತ ಅಂತಾನೆ ಸುದ್ದಿಗಾರರ ಮುಂದೆ ಕಾಲೆಳೆದಿದ್ದಾರೆ.

ಷಡ್ಯಂತ್ರ ಮಾಡಿದವರನ್ನು ಜೈಲಿಗೆ ಕಳುಹಿಸುವವರೆಗೂ ಬಿಡುವುದಿಲ್ಲ ಎಂದೂ ಸವಾಲು ಹಾಕಿದ್ದರು. ಹೀಗೆ ಹೇಳಿದವರು ಒಂದು ಗಂಟೆಯಲ್ಲೇ ಯುವತಿ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. ಅದರಲ್ಲಿ ಯುವತಿಯ ವಿಡಿಯೋಸ್ ನಕಲಿ ಅಂತ ಹೇಳಿದ್ದು ಉಲ್ಲೇಖವಾಗಿದೆ. ಈ ನಡುವೆ ಇಂದು ಸಂಜೆ ಯಾರಿಗೆ ಕಾದಿದೆ ಆಪತ್ತು ಎಂಬ ಕುತೂಹಲ ಹೆಚ್ಚಾಗಿದೆ. ಉತ್ತರಕ್ಕಾಗಿ ಸಂಜೆವರೆಗೆ ಕಾಯಲೇ ಬೇಕಿದೆ.

Leave a Reply

error: Content is protected !!
LATEST
ಕನಿಷ್ಠ ಪಿಂಚಣಿ ಶೀಘ್ರ ಜಾರಿ: ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಭರವಸೆ ಸಾರಿಗೆ ನೌಕರರ ಕಾರ್ಮಿಕರು ಎಂದು ಸಂಬೋಧಿಸದಿದ್ದರೆ ಜಂಟಿಯವರಿಗೆ ತಿಂದದ್ದು ಜೀರ್ಣವಾಗುವುದಿಲ್ಲವೇ: ಒಕ್ಕೂಟ ಕಿಡಿ ಸರ್ಕಾರಿ ವಾಹನ ಚಾಲಕರಿಗೆ ಕನಿಷ್ಠ ವೇತನ ₹34,100 ನಿಗದಿಗೊಳಿಸಿ ಸರ್ಕಾರ ಆದೇಶ ಇಂದಿನಿಂದ ನಿವೃತ್ತ ಸಾರಿಗೆ ನೌಕರರಿಗೆ ಉಪಧನ, ನಿವೃತ್ತಿ ಗಳಿಕೆ ರಜೆ ನಗದೀಕರಣ ಪಾವತಿಗೆ ಎಂಡಿ ಆದೇಶ BMTC: ಡಿ.24ರಂದು ನೌಕರರಿಗೆ 7 ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಪಾವತಿಗೆ ಎಂಡಿ ಆದೇಶ KKRTC ಸಂಸ್ಥೆಯ ಸಿಬ್ಬಂದಿಗಳಿಗೆ ಉಚಿತ ಒಂದು ಕೋಟಿ ರೂ. ಅಪಘಾತ ವಿಮೆ ಜತೆಗೆ ನೌಕರರಿಗೆ ಸಿಗುವ ಇತರ ಸೌಲಭ್ಯಗಳು KKRTC: ನಗದು ರಹಿತ ಚಿಕಿತ್ಸೆಗಾಗಿ ಸಿಬ್ಬಂದಿಗಳ ವೈಯಕ್ತಿಕ, ಅವಲಂಬಿತರ ಮಾಹಿತಿ ಸಂಗ್ರಹಿಸಿ- ಅಧಿಕಾರಿಗಳಿಗೆ ಆದೇಶ ಹೈಕೋರ್ಟ್‌ ಆದೇಶದ ಬೆನ್ನಲ್ಲೇ ದಾವಣಗೆರೆಯಲ್ಲಿ ಪೊಲೀಸರಿಂದ ಸಿ.ಟಿ.ರವಿ ಬಿಡುಗಡೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ: ಮಂಡ್ಯಕ್ಕೆ ಆಗಮಿಸಿದ ಸಮ್ಮೇಳನಾಧ್ಯಕ್ಷರಿಗೆ ಸ್ವಾಗತ ಉತ್ತಮ ಆಡಳಿತ ಸಪ್ತಾಹ: ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಿದ ಡಿಸಿ