NEWSದೇಶ-ವಿದೇಶನಮ್ಮರಾಜ್ಯ

ವೃದ್ಧ ದಂಪತಿ ದಾರಿ ತಪ್ಪಿಸಿದ ಭಾರತೀಯ ರೈಲ್ವೆಗೆ 3 ಲಕ್ಷ ರೂ.ದಂಡ: 11 ವರ್ಷದ ಬಳಿಕ ತೀರ್ಪು ನೀಡಿದ ನ್ಯಾಯಾಲಯ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಳಗಾವಿ: ಟಿಕೆಟ್‌ ಇದ್ದರು ರೈಲಿನಿಂದ ವೃದ್ಧ ದಂಪತಿ ದಾರಿ ತಪ್ಪಿಸಿ ಬೇರೆ ಸ್ಥಳದಲ್ಲಿ ಇಳಿಯುವಂತೆ ಮಾಡಿದ್ದಕ್ಕೆ ರೈಲ್ವೆ ಇಲಾಖೆಗೆ 3 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಆ ದಂಡ ರೂಪದ ಹಣವನ್ನು ಸಂತ್ರಸ್ತ ಕುಟುಂಬಕ್ಕೆ ನೀಡಬೇಕು. ಜೊತೆಗೆ 2,500 ರೂಪಾಯಿ ದಾವೆ ವೆಚ್ಚವನ್ನು ಸಹ ಭಾರತೀಯ ರೈಲ್ವೆ ಸರಿದೂಗಿಸಿ ಕೊಡಬೇಕು ಎಂದು ಕರ್ನಾಟಕ ನ್ಯಾಯಾಲಯ ಆದೇಶಿಸಿದೆ.

ಸುಮಾರು 11 ವರ್ಷಗಳ ಸುದೀರ್ಘ ಹೋರಾಟದ ಬಳಿಕ ಸಂತ್ರಸ್ತ ದಂಪತಿಗೆ ಈ ಮೂಲಕ ಕರ್ನಾಟಕ ನ್ಯಾಯಾಲಯ ನ್ಯಾಯ ಒದಗಿಸಿಕೊಟ್ಟಿದೆ.

ಏನಿದು ಪ್ರಕರಣ?:
2010ರಲ್ಲಿ ಈ ವೃದ್ಧ ದಂಪತಿ ಸೋಲಾಪುರದಿಂದ ಬೆಳಗಾವಿಗೆ 3 ಟಯರ್‌ ಎಸಿ ಟಿಕೆಟ್​ ಖರೀದಿ ಮಾಡಿದ್ದರು. ದಂಪತಿಯ ಪೈಕಿ ಒಬ್ಬರು ವಿಶೇಷ ಚೇತನರಾಗಿದ್ದರು. ಈ ವೃದ್ಧ ದಂಪತಿ ತಮ್ಮ ಬರ್ತ್​​ಗೆ ನಿಗದಿಯಾಗಿದ್ದ ಕೋಟಾ ಅಡಿಯಲ್ಲಿ ಸೀಟನ್ನು ಕಾಯ್ದಿರಿಸಿದ್ದರು. ಆದರೆ ಟಿಕೆಟ್​ ಪರೀಕ್ಷಕರು ಅವರಿಗೆ ಕಾಯ್ದಿರಿಸಲಾಗಿದ್ದ ಕೆಳಗಿನ ಬರ್ತ್​ ನೀಡಲು ನಿರಾಕರಿಸಿದ್ದಾರೆ.

ಅಲ್ಲದೆ ಅವರು ವೃದ್ಧ ದಂಪತಿ ಮತ್ತು ವಿಶೇಷ ಚೇತನ ಎನ್ನುವ ಸಾಮಾನ್ಯ ಕಾಳಜಿಯನ್ನು ಸಹ ಮರೆತಿದ್ದಾರೆ. ಕಂಪಾರ್ಟ್​ಮೆಂಟ್​ನಲ್ಲಿ ಆರು ಲೋವರ್​ ಬರ್ತ್​ ಸೀಟುಗಳು ಖಾಲಿ ಇದ್ದರೂ ಸಹ ಟಿಕೆಟ್​ ಪರೀಕ್ಷಕರು ಸೀಟು ಕೊಡಲು ನಿರಾಕರಣೆ ಮಾಡಿದ್ದಾರೆ. ಅಸಹಾಯಕ ವೃದ್ಧ ದಂಪತಿ ಅಂತಹ ಪರಿಸ್ಥಿಯಲ್ಲಿ ಏನು ಮಾಡಬೇಕು? ಯಾರ ನೆರವಿಗೆ ಹೋಗಬೇಕು? ಎನ್ನುವುದು ತಿಳಿಯದೇ ಆತಂಕಕ್ಕೆ ಒಳಗಾಗಿದ್ದಾರೆ.

ದಂಪತಿ ಸರಿಯಾದ ನಿಯಮ ಪಾಲಿಸಿದ್ದರೂ ಸಹ ವೃದ್ಧ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಸಹ ಟಿಕೆಟ್​ ಪರೀಕ್ಷಕರನ್ನು ಪರಿ ಪರಿಯಾಗಿ ಮತ್ತೆ ಮತ್ತೆ ಕೇಳಿಕೊಂಡಿದ್ದಾರೆ. ಎಷ್ಟೇ ಪ್ರಯತ್ನಪಟ್ಟರೂ ಟಿಕೆಟ್​ ಪರೀಕ್ಷಕರ ಮನಸ್ಸು ಕರಗಲಿಲ್ಲ. ಅಧಿಕಾರದ ಗತ್ತಿನಲ್ಲಿ ಮಾನವೀಯತೆಯನ್ನು ಮರೆತಂತೆ ವರ್ತಿಸಿರುವುದು ಈ ಘಟನೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ.

ಜತೆಗೆ ವಯಸ್ಸಾದವರಿಗೆ ನೆರವಾಗುವುದು ಮಾನವೀಯತೆ, ಎಷ್ಟೋ ಸಂದರ್ಭಗಳಲ್ಲಿ ಸರ್ಕಾರಿ ಅಧಿಕಾರಿಗಳು ವೃದ್ಧರಿಗೆ ನೆರವಾಗುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಆದರೆ ಇಲ್ಲಿ ಪರಿಸ್ಥಿತಿ ವಿಭಿನ್ನವಾಗಿದ್ದು, ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತು.

ಇಷ್ಟಾದ ನಂತರ ರೈಲ್ವೆ ಸಿಬ್ಬಂದಿಯೊಬ್ಬರು ಈ ವೃದ್ಧ ದಂಪತಿಯ ದಾರಿಯನ್ನು ತಪ್ಪಿಸಿದ್ದಾರೆ. ವೃದ್ಧ ದಂಪತಿ ಇಳಿಯಬೇಕಿದ್ದ ನಿಲ್ದಾಣದಿಂದ 100 ಕಿಲೋ ಮೀಟರ್​​ ದೂರದಲ್ಲಿ ತಪ್ಪು ರೈಲ್ವೆ ನಿಲ್ದಾಣದಲ್ಲಿ ಇಳಿಸಿದ್ದಾರೆ. ಈ ಘಟನೆಯಿಂದ ಏನು ಮಾಡಬೇಕೆಂದು ತೋಚದ ದಂಪತಿ ಕಂಗಾಲಾಗಿದ್ದಾರೆ.

ಇನ್ನೊಂದು ಕಡೆ ಈ ವೃದ್ಧದಂಪತಿಯನ್ನು ಕರೆದುಕೊಂಡು ಹೋಗಲು ಅವರ ಮಗ ಬೀರೂರಿನ ಬಳಿ ಕಾದು ಸುಸ್ತಾಗಿದ್ದಾರೆ. ಕಡೆಗೆ ವೃದ್ಧ ದಂಪತಿ ಮತ್ತು ಮಗ ಒಂದಾಗಿದ್ದಾರೆ. ಆ ನಂತರ ಅವರ ಮಗ ಭಾರತೀಯ ರೈಲ್ವೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಎರಡು ಕಡೆಯಿಂದ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಕೊನೆಗೆ ವೃದ್ಧ ದಂಪತಿ ಅನುಭವಿಸಿದ ಯಾತನೆ ಮತ್ತು ನೋವನ್ನು ಪರಿಗಣಿಸಿ ರೈಲ್ವೆ ಇಲಾಖೆಗೆ ದಂಡ ವಿಧಿಸಿ ತೀರ್ಪು ನೀಡಿದೆ.

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...