ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜಧಾನಿಯಲ್ಲಿ 20 ಆಸ್ಪತ್ರೆಗಳನ್ನು ಸುತ್ತಿದರೂ ಬೆಡ್, ವೆಂಟಿಲೇಟರ್ ಸಿಗದಿದ್ದರಿಂದ ಸಿಟ್ಟಿಗೆದ್ದ ರೋಗಿಯ ಕಡೆಯವರು ಆಂಬುಲೆನ್ಸ್ ಸಹಿತ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿ ಮುಂದೆ ಪ್ರತಿಭಟಿಸಿದ ಘಟನೆ ಇಂದು ನಡೆಯಿತು.
ಇಂದು ಉಸಿರಾಟದ ತೊಂದರೆಯಾಗಿದ್ದರಿಂದ ಆಂಬುಲೆನ್ಸ್ನಲ್ಲಿ ರಾಜರಾಜೇಶ್ವರಿ, ಬಿಜಿಎಸ್ ಸೇರಿ ಹಲವು ಆಸ್ಪತ್ರೆಗಳನ್ನು ಸುತ್ತಿದ್ದಾರೆ. ಆದರೆ ಎಲ್ಲಿಯೂ ಬೆಡ್ ಸಿಗದಿದ್ದರಿಂದ ಕೊನೆಗೆ ತನ್ನ ಪತಿಯ ಪ್ರಾಣ ಉಳಿಸಿಕೊಳ್ಳಲು ಬೇರೆ ದಾರಿಯಿಲ್ಲದೆ ಸಿಎಂ ನಿವಾಸದ ಮುಂದೆ ಪ್ರತಿಭಟನೆ ಮಾಡಿದರು.
ಹಣ ಎಷ್ಟು ಖರ್ಚಾದರೂ ಸರಿಯೆ ನಾವು ಖರ್ಚು ಮಾಡುತ್ತೇವೆ. ಆದರೆ ನಮಗೆ ಬೆಡ್ ಕೊಡಿಸಿ, ನಮ್ಮ ಭಾವನ ಪ್ರಾಣ ಉಳಿಸಿ ಎಂದು ತನ್ನ ತಂಗಿಯ ಗಂಡನನ್ನು ಉಳಿಸಿಕೊಳ್ಳಲು ಆ ಸಹೋದರ ಅಂಗಲಾಚುತ್ತಿದ್ದ ದೃಶ್ಯ ಮನಕಲುಕುವಂತಿತ್ತು.
ಇದರಿಂದ ಕೂಡಲೇ ಎಚ್ಚೆತ್ತ ಸರ್ಕಾರ ಅವರಿಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿದೆ. ಸದ್ಯ ಈಗ ಅವರು ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ.
ಇದರಿಂದ 20 ಆಸ್ಪತ್ರೆ ಸುತ್ತಿದರೂ ಪ್ರಯೋಜವಾಗಲಿಲ್ಲ ಎಂದು ಕುಟುಂಬದವರು ಅಸಾಹಯಕವಾಗಿ ನುಡಿಯುತ್ತಿದ್ದಾರೆ. ಇನ್ನು ಮೃತರ ಪತ್ನಿ ಮತ್ತು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.
ಇತ್ತ ಸರ್ಕಾರ ಆಕ್ಸಿಜನ್ ಕೊರತೆ ಇಲ್ಲ, ಬೆಡ್ ಕೊರತೆ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಇನ್ನೊಂದೆಡೆ ಕೊರೊನಾ ಸೋಂಕಿತರ ಅಂಕೆ ಸಂಖ್ಯೆಯನ್ನುಮರೆ ಮಾಚಿ ಸುಳ್ಳು ಲೆಕ್ಕ ಕೊಡುತ್ತಿದೆ ಎಂದು ವೈದ್ಯರೆ ಹೇಳುತ್ತಿದ್ದಾರೆ. ಇಷ್ಟಾದರೂ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಕೊಡಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸಾಮಾನ್ಯರು ಹಿಡಿ ಶಾಪ ಹಾಕುತ್ತಿದ್ದಾರೆ.