ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು ಗ್ರಾಮಾಂತರ: ಕೊರೊನಾ ಸಾಂಕ್ರಾಮಣದ ಮಧ್ಯೆ ಇಪಿಎಫ್ಒ (ಪ್ರಾವಿಡೆಂಟ್ ಫಂಡ್) ಖಾತೆದಾರರಿಗೆ ಕೇಂದ್ರ ಸರ್ಕಾರದ ಭವಿಷ್ಯನಿಧಿ ಇಲಾಖೆಯು ಇಪಿಎಫ್ಒ ಮೊತ್ತವನ್ನು ಏರಿಕೆ ಮಾಡಿ ಆದೇಶ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.
ನೌಕರರ ಡೆಪಾಸಿಟ್ ಲಿಂಕ್ಡ್ ಇನ್ಸುರೆನ್ಸ್ಗೆ (ಇಡಿಎಲ್ಐ) ಈ ಆದೇಶ ಸಂಬಂಧಿಸಿದ್ದಾಗಿದ್ದು, ಒಂದು ವೇಳೆ ಇಪಿಎಫ್ಒ ಖಾತೆದಾರರು ಮೃತಪಟ್ಟರೆ, ಖಾತೆದಾರರ ಸಾವಿನ ನಂತರ ಸಿಗುವ ಕನಿಷ್ಠ ಮೊತ್ತವನ್ನು ರೂ. 2.5 ಲಕ್ಷ ಮತ್ತು ಗರಿಷ್ಠ ಮೊತ್ತವನ್ನು ರೂ. 7 ಲಕ್ಷಗೆ ಹೆಚ್ಚಿಸಿದ್ದು, ಈ ಹಿಂದೆ ಕನಿಷ್ಠ ಮೊತ್ತ ರೂ. 2 ಲಕ್ಷ ಮತ್ತು ಗರಿಷ್ಠ ಮೊತ್ತ ರೂ 6 ಲಕ್ಷದ ವರೆಗೆ ನಿಗದಿಪಡಿಸಲಾಗಿತ್ತು.
ಮೃತ ನೌಕರರ ಕುಟುಂಬದ ವಾರಸುದಾರರು ನಮೂನೆ-51ಎಫ್ರಲ್ಲಿ ಸಂಬಂಧಿಸಿದ ಉದ್ಯೋಗದಾತರಿಂದ ದಾಖಲೆಗಳನ್ನು ದೃಢೀಕರಿಸಿ, ಕಾರ್ಯವ್ಯಾಪ್ತಿ ಇಪಿಎಫ್ ಆಯುಕ್ತರಿಗೆ ಅರ್ಜಿ ಸಲ್ಲಿಸಬಹುದು.
ಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರು ಒಂದು ವೇಳೆ ಮೃತಪಟ್ಟಲ್ಲಿ ಅವರ ಕುಟುಂಬದ ವಾರಸುದಾರರು ಈ ಪ್ರಯೋಜನ ಪಡೆಯಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.