ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಚಿನ್ನಾಭರಣಗಳನ್ನು ಗಿರವಿಯಿಟ್ಟು ಸಾಲ ಪಡೆದವರಿಗೆ ರಾಜ್ಯ ವರ್ತಕರ ಒಕ್ಕೂಟ ಸಿಹಿ ಸುದ್ದಿ ನೀಡಲು ಮುಂದಾಗಿದೆ.
ಹೌದು! ಕೊರೊನಾ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದರುವುದರಿಂದ ಚಿನ್ನಾಭರಣಗಳನ್ನು ಗಿರವಿ ಇಟ್ಟು ಸಾಲಪಡೆದವರಿಗೆ ಎರಡರಿಂದ ಮೂರು ತಿಂಗಳ ಬಡ್ಡಿ ಮನ್ನಾ ಮಾಡಲು ಚಿಂತನೆ ನಡೆಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ಒಂದು ಗ್ರಾಂ ಚಿನ್ನಕ್ಕೆ ಶೇ. 75ರಷ್ಟು ಸಾಲ ನೀಡಲಾಗುತ್ತದೆ. ವರ್ಷಕ್ಕೆ ಏ.8.5 ರಿಂದ ಶೇ.14ರವರೆಗೆ ಬಡ್ಡಿಯನ್ನು ಗ್ರಾಹಕರಿಗೆ ವಿಧಿಸಲಾಗುತ್ತಿದೆ. ಈಗ ಕೊರೊನಾ ಸಂಕಷ್ಟದಲ್ಲಿ ತಮ್ಮ ಗ್ರಾಹಕರಿಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಸ್ವಲ್ಪಮಟ್ಟಿಗೆ ತಗ್ಗಿಸುವ ನಿಟ್ಟಿನಲ್ಲಿ ಒಕ್ಕೂಟ ಮುಂದಾಗಿದೆ.
ಇದರಿಂದ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳು ವಿವಿಧ ಕಾರಣಕ್ಕಾಗಿ ಚಿನ್ನಾಭರಣಗಳ ಮೇಲೆ ಮಾಡಿರುವ ಸಾಲದ ಮೇಲಿನ 2-3 ತಿಂಗಳ ಬಡ್ಡಿಯನ್ನು ಮನ್ನಾ ಮಾಡುವುದರಿಂದ ಸ್ವಲ್ಪಮಟ್ಟಿಗೆ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂದು ಒಕ್ಕೂಟ ಈಗಾಗಲೇ ಚಿಂತನೆ ನಡೆಸಿದ್ದು ಶೀಘ್ರದಲ್ಲೇ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದೆ.