Please assign a menu to the primary menu location under menu

Breaking NewsNEWSಲೇಖನಗಳು

ಇದೇ ಮೇ 26ರಂದು ರಕ್ತ ಚಂದ್ರ ಗ್ರಹಣ: ಸಂಪೂರ್ಣವಾಗಿ ತೆರೆಮರೆಗೆ ಸರಿಯುವುದೇ ಕೊರೊನಾ !

ವಿಜಯಪಥ ಸಮಗ್ರ ಸುದ್ದಿ

ಗೋಳದಲ್ಲಿ ಇದೇ ತಿಂಗಳ 26 ರಂದು ನಭೋ ಮಂಡಲದಲ್ಲಿ ಒಂದು ಕೌತುಕ ನಡೆಯಲಿದೆ. ಈ ಕೌತುದಿಂದ ಯಾವ ರಾಶಿ, ನಕ್ಷತ್ರದವರಿಗೆ ಶುಭ ತರಲಿದೆ ಎಂಬುದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮನಗೂ ಇದೆ.

ಹೌದು! ರಕ್ತ ಚಂದ್ರ ಗ್ರಹಣದ ಎಫೆಕ್ಟ್ ಇದೇ ಮೇ 26 ರಂದು ಆಗದೆ. ರಕ್ತ ಚಂದ್ರಗ್ರಹಣ ಆಗಸದಲ್ಲಿ ಗೋಚರಿಸಲಿದ್ದು, ಯಾವ ರಾಶಿಯ ಮೇಲೆ ಹೆಚ್ಚು ಪರಿಣಾಮವನ್ನು ಉಂಟು ಮಾಡುತ್ತದೆ ಹಾಗೂ ಗ್ರಹಣ ಕಾಲದಲ್ಲಿ ಪಾಲಿಸಬೇಕಾದ ಆಚರಣೆ ನಿಯಮಗಳೇನು ಎಂಬುದರ ಬಗ್ಗೆ ನೋಡೋಣ ಬನ್ನಿ..

ಸೂರ್ಯ, ಚಂದ್ರ ಮತ್ತು ಭೂಮಿಯು ಒಂದೇ ರೇಖೆಯಲ್ಲಿ ಬಂದಾಗ ಸಂಪೂರ್ಣ ಚಂದ್ರಗ್ರಹಣಗಳ ವಿದ್ಯಮಾನವು ನಡೆಯುತ್ತದೆ. ಸಂಪೂರ್ಣ ಚಂದ್ರಗ್ರಹಣದ ಸಮಯದಲ್ಲಿ, ಭೂಮಿಯು ಚಂದ್ರ ಮತ್ತು ಸೂರ್ಯನ ನಡುವೆ ಇರುತ್ತದೆ ಮತ್ತು ಆದ್ದರಿಂದ ಚಂದ್ರನನ್ನು ಸೂರ್ಯನ ಬೆಳಕಿನಿಂದ ಕೆಲ ಕಾಲ ಮರೆಮಾಚುತ್ತದೆ.

ಅಂದಹಾಗೆ ಈ ವರ್ಷದ ಮೊದಲ ಸಂಪೂರ್ಣ ಚಂದ್ರಗ್ರಹಣ ಮೇ 26 ರಂದು ವಿಶ್ವದ ಹಲವು ಪ್ರದೇಶಗಳಲ್ಲಿ ಗೋಚರವಾಗಲಿದೆ. ಅತ್ಯಂತ ಸುಂದರವಾದ ಕಾಸ್ಮಿಕ್ ವಿದ್ಯಮಾನವೆಂದು ಪರಿಗಣಿಸಲ್ಪಟ್ಟ ಈ ಸಂಪೂರ್ಣ ಚಂದ್ರ ಗ್ರಹಣವನ್ನು ಬ್ಲಡ್ ಮೂನ್ ಎಂದೂ ಕರೆಯುತ್ತಾರೆ. ಏಕೆಂದರೆ ಭೂಮಿಯ ಸೂರ್ಯೋದಯ ಮತ್ತು ಸೂರ್ಯಾಸ್ತಗಳಿಂದ ಚಂದ್ರನ ಮುಖದ ಮೇಲೆ (ಗ್ರಹಣ ಮಧ್ಯದಲ್ಲಿ) ಚದುರಿದ ಬೆಳಕು ಬೀಳುವುದರಿಂದ ಸ್ವಲ್ಪ ಕೆಂಪು-ಕಿತ್ತಳೆ ಬಣ್ಣದಲ್ಲಿ ಚಂದ್ರ ಕಾಣುತ್ತಾನೆ. ಈ ವಿದ್ಯಮಾನದ ಸಮಯದಲ್ಲಿ, ಚಂದ್ರನ ಬಣ್ಣವು ಧೂಳಿನ ಕಣಗಳು ಮತ್ತು ಅದರ ಮೇಲ್ಮೈಯನ್ನು ತಲುಪುವ ಬಣ್ಣಗಳ ವಿಭಿನ್ನ ತರಂಗಾಂತರಗಳನ್ನು ಅವಲಂಬಿಸಿರುತ್ತದೆ.

ರಕ್ತ ಚಂದ್ರ ಗ್ರಹಣ ಅಥವಾ ಬ್ಲಡ್ ಮೂನ್ ಸಮಯದಲ್ಲಿ, ಭೂಮಿಯ ವಾತಾವರಣದ ಅಂಚುಗಳಿಂದ ಬೆಳಕು ಚಂದ್ರನ ಮೇಲ್ಮೈಯನ್ನು ತಲುಪುತ್ತದೆ ಎಂದು ನಾಸಾ ಹೇಳಿದೆ. “ಭೂಮಿಯ ವಾತಾವರಣದಿಂದ ಬರುವ ಗಾಳಿಯ ಅಣುಗಳು ಹೆಚ್ಚಿನ ನೀಲಿ ಬೆಳಕನ್ನು ಹರಡುತ್ತವೆ. ಉಳಿದ ಬೆಳಕು ಚಂದ್ರನ ಮೇಲ್ಮೈಯಲ್ಲಿ ಕೆಂಪು ಹೊಳಪಿನೊಂದಿಗೆ ಪ್ರತಿಫಲಿಸುತ್ತದೆ, ಇದರಿಂದಾಗಿ ರಾತ್ರಿಯ ಆಕಾಶದಲ್ಲಿ ಚಂದ್ರನು ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ” ಎಂದು ನಾಸಾ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಒಟ್ಟು ಚಂದ್ರಗ್ರಹಣದ ಸಮಯದಲ್ಲಿ, ಭೂಮಿಯು ಚಂದ್ರ ಮತ್ತು ಸೂರ್ಯನ ನಡುವೆ ಇರುತ್ತದೆ ಆದ್ದರಿಂದ ಚಂದ್ರನನ್ನು ಸೂರ್ಯನ ಬೆಳಕಿನಿಂದ ಮರೆಮಾಡುತ್ತದೆ. ಸೂರ್ಯ, ಚಂದ್ರ ಮತ್ತು ಭೂಮಿಯು ಸರಳ ರೇಖೆಯಲ್ಲಿ ಜೋಡಿಸಿದಾಗ, ಒಟ್ಟು ಚಂದ್ರಗ್ರಹಣಗಳ ವಿದ್ಯಮಾನವು ನಡೆಯುತ್ತದೆ. ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಪ್ರಕಾರ, ಒಟ್ಟು ಚಂದ್ರ ಗ್ರಹಣ ಅಥವಾ ರಕ್ತ ಚಂದ್ರನಲ್ಲಿ, ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತದೆ. ಸೂರ್ಯನು ಕಿರಣಗಳನ್ನು ಚಂದ್ರನನ್ನು ತಲುಪದಂತೆ ಭೂಮಿಯು ತಡೆಯುತ್ತದೆ. ಈ ವಿದ್ಯಮಾನವು ಹುಣ್ಣಿಮೆಯಂದು ಮಾತ್ರ ನಡೆಯುತ್ತದೆ ಮತ್ತು ಸೂರ್ಯಗ್ರಹಣಕ್ಕಿಂತ ಭಿನ್ನವಾಗಿ ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಬಹುದು.

ಆಕಾಶವು ಮೋಡ ಅಲ್ಲಲ್ಲಿ ಮೋಡ ರಹಿತವಾಗಿದ್ದರೆ, ಆಸ್ಟ್ರೇಲಿಯ, ನ್ಯೂಜಿಲೆಂಡ್, ಪಶ್ಚಿಮ ಯುನೈಟೆಡ್ ಸ್ಟೇಟ್ಸ್, ದಕ್ಷಿಣ ಅಮೆರಿಕ, ಹಿಂದೂ ಮಹಾಸಾಗರ, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಮಹಾಸಾಗರ ಮತ್ತು ಆಗ್ನೇಯ ಏಷ್ಯಾದ ಕೆಲವು ಭಾಗಗಳಲ್ಲಿ ವಾಸಿಸುವ ಜನರು ಈ ನಭೋಮಮಡಲದ ಕೌತುಕವನ್ನು ಮೇ 26 ರಂದು ಕಣ್ಣುತುಂಬಿಕೊಳ್ಳಬಹುದು.

ಇದರಿಂದ ಮೀನ ರಾಶಿಯವರಿಗೆ ಶುಭವಾಗಲಿದ್ದು, ಅವರು ಮಾಡುವ ಎಲ್ಲಾ ಕಾರ್ಯಗಳು ಕೈಗೂಡಲಿವೆ. ಉಳಿದಂತೆ ವೃಷಭ ರಾಶಿಯವರಿಗೆ ಒಳ್ಳೇ ಕಾಲ ಬರಲಿದ್ದು, ಅವರ ಆಲೋಚನೆಗೆ ತಕ್ಕ ಪ್ರತಿಫಲ ಸಿಗಲಿದೆ. ಇಷ್ಟೇ ಅಲ್ಲ ಎಲ್ಲಾ 12 ರಾಶಿಗಳಿಗೂ ಅಶುಭಕ್ಕಿಂತ ಶುಭವನ್ನೇ ಈ ರಕ್ತ ಚಂದ್ರ ಗ್ರಹಣ ಹೊತ್ತು ತರುತ್ತಿರುವುದು ವಿಶ್ವದ ಮಾನವ ಕುಲಕ್ಕೆ ಅಂಟಿರುವ ಕೊರೊನಾ ಎಂಬ ಮಹಾಮಾರಿಯೂ ಸಂಪೂರ್ಣವಾಗಿ ತೆರೆ ಮರೆಗೆ ಸರಿಯಲಿದೆ ಎಂದೇ ಜ್ಯೋತಿಷಿಗಳು ಹೇಳುತ್ತಿದ್ದಾರೆ.

Leave a Reply

error: Content is protected !!
LATEST
KSRTC: ಸರಿ ಸಮಾನ ವೇತನಕ್ಕಾಗಿ ಮತ್ತೊಮ್ಮೆ ನಾಲ್ಕೂ ನಿಗಮಗಳ ಸಂಚಾರ ಮೇಲ್ವಿಚಾರಕ ಸಿಬ್ಬಂದಿಗಳ ಒತ್ತಾಯ ಸಾರಿಗೆ ಅಧಿಕಾರಿಗಳು-ನೌಕರರ ಬೇಡಿಕೆಯಂತೆ ಸರಿ ಸಮಾನ ವೇತನ ಕೊಡಿ: BMS ತಾಕೀತು NWKRTC: ಹುಬ್ಬಳ್ಳಿ-ಧಾರವಾಡ ಹೈಕೋರ್ಟ್‌ ನಡುವೆ ಹೊಸ ಬಸ್‌ಗಳ ಸಂಚಾರ- ವಕೀಲರ ಮನವಿ ಸ್ಪಂದಿಸಿದ ಅಧಿಕಾರಿಗಳು ಡಿ.1ರಂದು ಲಾಲ್‌ಬಾಗ್‌ನಲ್ಲಿ ಇಪಿಎಸ್ ಪಿಂಚಿಣಿದಾರರ 83ನೇ ತಿಂಗಳ ಸಭೆ ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..!