ವಿಜಯಪಥ ಸಮಗ್ರ ಸುದ್ದಿ
ಉಡುಪಿ: ಕೊರೊನಾ ಮಹಾಮಾರಿ ಶ್ರೀಮಂತ – ಬಡವರೆನ್ನದೆ ಎಲ್ಲರಿಗೂ ಕಾಡಿದೆ. ದುಡಿದು ತಿನ್ನುವ ಕೈಗಳಿಗೆ , ಬಡ ಜನರಿಗೆ ಭಾರೀ ಕಷ್ಟ ನೀಡಿದೆ. ಇದನ್ನು ಮನಗಂಡ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ದೈವ ನರ್ತಕರು, ಸಹಾಯಕರು ಮತ್ತು ಸೇವಕರ ಕುಟುಂಬಕ್ಕೆ ಆಹಾರ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮರೆದಿದ್ದಾರೆ.
ತುಳುನಾಡಿನ ಪ್ರಮುಖ ಸಂಪ್ರದಾಯವಾದ ಭೂತರಾಧನೆ ಮಾಡುವುದಕ್ಕೆ ತೊಂದರೆಯಾಗಿದ್ದು, ತುಳುನಾಡಿನಲ್ಲಿ ಸದ್ಯ ಕೊರೊನಾ ಹಿನ್ನೆಲೆಯಲ್ಲಿ ಎಲ್ಲಿಯೂ ದೈವಾರಾಧನೆ ನಡೆಯುತ್ತಿಲ್ಲ.
ಈ ಹಿನ್ನೆಲೆಯಲ್ಲಿ ದೈವ ನರ್ತನ ಕಾರ್ಯವನ್ನು ಮಾಡುವ ಹಾಗೂ ದೈವದ ಚಾಕರಿ ಮಾಡುವ ಹಿರಿಯಡ್ಕ ಪರಿಸರದ ಸುಮಾರು 20 ಕುಟುಂಬಗಳಿಗೆ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಲಾ 10 KG ಅಕ್ಕಿ ಹಾಗೂ ಒಂದು ಸಾವಿರ ರೂಪಾಯಿ ಮೌಲ್ಯದ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಕೊರೊನಾ ಮಹಾಮಾರಿಯಿಂದ ನೇಮೋತ್ಸವ ನಡೆಯುವ ಈ ಸಮಯದಲ್ಲಿ ನೇಮೋತ್ಸವವಿಲ್ಲದೆ ಅದನ್ನೇ ನಂಬುತ್ತಿರುವ ಕುಟುಂಬಗಳು ಬಹಳ ಕಷ್ಟದಲ್ಲಿವೆ. ಹಾಗಾಗಿ ಅವರ ಕಷ್ಟದ ಸಮಯದಲ್ಲಿ ಅವರು ನೇಮ ಕಟ್ಟುವ ಮನೆಯವರು ಅವರೊಂದಿಗಿದ್ದು ಅವರ ಕಷ್ಟದಲ್ಲಿ ಭಾಗಿಗಳಾಗಬೇಕೆಂದು ಆಶಿಸಿ ಟ್ರಸ್ಟ್ ನ ಅಧ್ಯಕ್ಷ ಅನಂತ ಇನ್ನಂಜೆ ಆಹಾರ ಕಿಟ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಕಾರ್ಯದರ್ಶಿಗಳಾದ ಅನಿಲ್ ಆಚಾರ್ಯ ಓಂತಿಬೆಟ್ಟು , ಪುನೀತ್ ಕುಲಾಲ್ ಮಜೂರು , ವಿಕಾಸ್ ದೇವಾಡಿಗ ಮಜೂರು , ಶಿವು ಮಜೂರು ಮತ್ತಿತರರು ಇದ್ದರು.