NEWSರಾಜಕೀಯ

ಕೋವಿಡ್ ಸಂಕಷ್ಟದಲ್ಲಿ ಆಮ್ ಆದ್ಮಿ ಪಕ್ಷದ ಸಾರ್ಥಕ ಸೇವೆ: ಪೃಥ್ವಿ ರೆಡ್ಡಿ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮಹಾಮಾರಿಯ ಎರಡನೇ ಅಲೆ ಆರಂಭವಾದಾಗ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆರೋಗ್ಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿತ್ತು . ಈ ಸಂಕಷ್ಟದ ಸಮಯದಲ್ಲಿ ಆಮ್ ಆದ್ಮಿ ಪಕ್ಷ ರಾಜ್ಯದ ಜನತೆಯ ಸೇವೆಗಾಗಿ ಏಪ್ರಿಲ್ 29ರಂದು ರಂದು ವೈದ್ಯಕೀಯ ನೆರವು, ಮಾರ್ಗದರ್ಶನ ನೀಡಲು ಸಹಾಯವಾಣಿ- 7292022063 ಆರಂಭಿಸಿತು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ತಿಳಿಸಿದರು.

ಪಕ್ಷದ ಮಾಧ್ಯಮ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ ಸಂದರ್ಭದಲ್ಲಿ ರಾಜ್ಯ ಸರಕಾರ ತನ್ನ ಜವಾಬ್ದಾರಿಯನ್ನು ನಿಭಾಯಿಸಲು ವಿಫಲವಾಗಿತ್ತು. ಪ್ರಮುಖ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ನಿದ್ದೆಗೆ ಜಾರಿದ್ದವು. ಈ ವೇಳೆ 46 ನುರಿತ ವೈದ್ಯರು, 12 ಮನೋವೈದ್ಯರು, ಕರೆ ಸ್ವೀಕರಿಸಲು 60 ಕಾರ್ಯಕರ್ತರನ್ನು ಈ ಸಹಾಯವಾಣಿ ತಂಡ ಹೊಂದಿತ್ತು ಎಂದು ಹೇಳಿದರು.

ಜನಸ್ನೇಹಿ ಅಭಿಯಾನ
ಪ್ರಮುಖವಾಗಿ ಈ ಕೆಳಗಿನ ಸೇವೆಗಳನ್ನು ಕೇವಲ ಫೋನ್ ಕರೆ ಮುಖಾಂತರ ಪಡೆಯುವಂತಾಗಲು ಮತ್ತು ಬೆಂಗಳೂರಿನಲ್ಲಿ ಬೆಡ್ ಕೊರತೆಯನ್ನು ನಿಯಂತ್ರಿಸಲು ಹೋಂ ಐಸೋಲೇಶನ್ ರೋಗಿಗಳಿಗೆ ನೆರವಾಗಲು ಸೋಂಕಿನ ವಿರುದ್ಧ ಹೋರಾಟ ಎಂಬ ಜನಸ್ನೇಹಿ ಅಭಿಯಾನವನ್ನು ಆರಂಭಿಸಿತು. ಈ ಅಭಿಯಾನದ ಮೂಲಕ ದಿನದ 24 ಗಂಟೆಯೂ ರೋಗಿಗಳಿಗೆ ಉಚಿತ ಆಕ್ಸಿಮೀಟರ್ ವಿತರಣೆ, ವೈದ್ಯಕೀಯ ನೆರವು, ಕೌನ್ಸಿಲಿಂಗ್, ಹೋಂ ಐಸೋಲೇಶನ್ ನೆರವು ನೀಡಲಾಯಿತು ಎಂದು ತಿಳಿಸಿದರು.

ಸಹಾಯವಾಣಿಗೆ ವ್ಯಾಪಕ ಸ್ಪಂದನೆ
ಆಮ್ ಆದ್ಮಿ ಪಕ್ಷದ ಈ ಸಹಾಯವಾಣಿಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಕಳೆದ ಒಂದು ತಿಂಗಳಿನಲ್ಲಿ ಸುಮಾರು 3254 ಉಚಿತ ಆಕ್ಸಿಮೀಟರ್ ವಿತರಣೆ, 16,000 ರೋಗಿಗಳಿಗೆ ಹೋಂ ಐಸೋಲೇಶನ್ ನೆರವು, ಪ್ರತಿದಿನ 112ಕ್ಕೂ ಹೆಚ್ಚು ಹೋಂ ಐಸೋಲೇಶನ್ ರೋಗಿಗಳಿಗೆ ಆಹಾರ ಒದಗಿಸುವಿಕೆ, 1300 ರೋಗಿಗಳಿಗೆ ಮನೋವೈದ್ಯರಿಂದ ಕೌನ್ಸಿಲಿಂಗ್, 3,00,000 ಕ್ಕೂ ಅಧಿಕ ಮಾಸ್ಕ್ ವಿತರಣೆ ಮಾಡಲಾಗಿದೆ. ಅಪಾರ್ಟ್ಮೆಂಟ್‌ಗಳು , ವಸತಿ ಸಮುಚ್ಚಯಗಳು, ಮನೆಗಳು ಹಾಗೂ ಅನಾಥಾಶ್ರಮಗಳು, ವೃದ್ಧಾಶ್ರಮಗಳು, ಕಛೇರಿಗಳು, ಪೊಲೀಸ್ ಠಾಣೆಗಳು, ಪೊಲೀಸ್ ಚೌಕಿಗಳು ಸೇರಿದಂತೆ 18,000 ಕ್ಕೂ ಹೆಚ್ಚು ಕಡೆ ಸಾನಿಟೈಶೇಷನ್ ಮಾಡಲಾಗಿದೆ. 1400 ಐಸಿಯೂ ಬೆಡ್ ಗಳ, 900 ಆಕ್ಸಿಜನ್ ಸಿಲಿಂಡರ್ ಗಳ, 200 ಕ್ಕೂ ಹೆಚ್ಚು ಪ್ಲಾಸ್ಮಾ ದಾನಿಗಳ, 260 ಕ್ಕೂ ಹೆಚ್ಚು ರೋಗಿಗಳಿಗೆ ರಕ್ತದ ನೆರವು ನೀಡಲಾಗಿದೆ.

ಲಾಕ್`ಡೌನ್ ಘೋಷಣೆಯಾದ ದಿನದಿಂದಲೂ ಪ್ರತಿನಿತ್ಯ 20,000 ಜನರಿಗೆ ಊಟ ಒದಗಿಸಲಾಗಿದೆ. ಸುಮಾರು 60,000 ಕುಟುಂಬಗಳಿಗೆ ದಿನಸಿ ಕಿಟ್ ಒದಗಿಸಲಾಗಿದೆ. 120 ಅಧಿಕ ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ರಾಜ್ಯದ ವಿವಿಧೆಡೆ ಒದಗಿಸಲಾಗಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಒಬ್ಬನೇ ಒಬ್ಬ ಶಾಸಕರಿಲ್ಲದೇ ಹೋದರೂ ಪಕ್ಷ ತನ್ನ ಜವಾಬ್ದಾರಿಯನ್ನು ಅರಿತು ಈ ಸಂಕಷ್ಟದ ಸಮಯದಲ್ಲಿ ಜನರ ನಡುವೆ ನಿಂತು, ಜನಪರವಾಗಿ ಕೆಲಸ ಮಾಡಿದೆ. ಆಡಳಿತದಲ್ಲಿರುವ ಬಿಜೆಪಿ ತನ್ನ ಒಳಜಗಳ, ಅತ್ಯಂತ ಕಳಪೆ ಕೋವಿಡ್ ನಿವರ್ಹಣೆ ಮೂಲಕ ಜನರ ಪ್ರಾಣ ಹಿಂಡಿದರೆ, ವಿಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಜವಾಬ್ದಾರಿ ಮರೆತು ನಿದ್ದೆಗೆ ಜಾರಿವೆ. ಆಮ್ ಆದ್ಮಿ ಪಕ್ಷದ ಅಸಂಖ್ಯೆ ಕಾರ್ಯಕರ್ತರು ಮತ್ತು ಮುಖಂಡರ ಅವಿರತವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೇ ಜನರ ನಡುವೆ ಕೆಲಸ ಮಾಡುತ್ತಿದ್ದಾರೆ. ಕಾಯಾ -ವಾಚಾ -ಮನಸಾ ಈ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಪೃಥ್ವಿ ರೆಡ್ಡಿ ತಿಳಿಸಿದರು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು