NEWSದೇಶ-ವಿದೇಶ

ವಂಚನೆ ಪ್ರಕರಣ: ಮಹಾತ್ಮ ಗಾಂಧೀಜಿ ಮರಿಮೊಮ್ಮಗಳು ಆಶೀಶ್ ಲತಾಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಜೋಹಾನ್ಸ್‌ಬರ್ಗ್: ವಂಚನೆ ಆರೋಪದ ಸುಳಿಗೆ ಸಿಲುಕಿರುವ ಮಹಾತ್ಮ ಗಾಂಧೀಜಿಯವರ 56 ವರ್ಷದ ಮರಿಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದ ಡರ್ಬನ್​ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಇಳಾ ಗಾಂಧಿ ಹಾಗೂ ಮೆವಾ ರಾಮ್​ಗೋವಿಂದ್ ಪುತ್ರಿಯಾದ ಆಶೀಶ್ ಲತಾ ಅವರನ್ನು ನ್ಯಾಯಾಲಯ ಸೋಮವಾರ ತಪ್ಪಿತಸ್ಥೆ ಪರಿಗಣಿಸಿದೆ.

ದಕ್ಷಿಣ ಆಫ್ರಿಕಾದ ಉದ್ಯಮಿಯೊಬ್ಬರಿಗೆ 6.2 ಮಿಲಿಯನ್ ರಾಂಡ್ (ದಕ್ಷಿಣ ಆಫ್ರಿಕಾ ಕರೆನ್ಸಿ; 1 ರಾಂಡ್ = 5.38 ರೂಪಾಯಿ) ವಂಚಿಸಿರುವ ಆರೋಪ ಮಹಾತ್ಮ ಗಾಂಧೀಜಿಯವರ ಮರಿಮೊಮ್ಮಗಳು ಆಶೀಶ್ ಲತಾ ರಾಮ್​ಗೋಬಿನ್ ಅವರ ಮೇಲಿದ್ದು, ಸೋಮವಾರ ಈ ಬಗ್ಗೆ ತೀರ್ಪು ಪ್ರಕಟಿಸಿರುವ ನ್ಯಾಯಾಲಯ ಜೈಲು ಶಿಕ್ಷೆಗೆ ಅವರನ್ನು ಗುರಿಯಾಗಿಸಿದೆ.

ಇಳಾ ಗಾಂಧಿ ಹಾಗೂ ಮೆವಾ ರಾಮ್​ಗೋವಿಂದ್ ಪುತ್ರಿಯಾದ ಆಶೀಶ್ ಲತಾ ವಿರುದ್ಧ ವಂಚನೆ ಪ್ರಕರಣ 2015ರಲ್ಲಿ ದಾಖಲಾಗಿತ್ತು. ಉದ್ಯಮಿ ಎಸ್. ಆರ್. ಮಹಾರಾಜ್​ ಎನ್ನುವವರಿಂದ 6.2 ಮಿಲಿಯನ್ ರಾಂಡ್ ಪಡೆದಿದ್ದು ನಂತರ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ, ಅವರು ಹಣ ಯಾವ ಕಾರಣಕ್ಕೆ ಅವಶ್ಯವಿದೆ ಎಂದು ಹೇಳಿದ್ದರೋ ಅದು ಕೂಡಾ ಸುಳ್ಳು ಎಂದು ಸಾಬೀತಾಗಿದ್ದು ಆಶೀಶ್​ ಲತಾ ತೋರಿಸಿದ್ದ ದಾಖಲೆಗಳೆಲ್ಲವೂ ನಕಲಿ ಎನ್ನುವುದು ತಿಳಿದುಬಂದಿದೆ.

ದಕ್ಷಿಣ ಆಫ್ರಿಕಾದ ನೆಟ್​ಕೇರ್​ ಎಂಬ ಸಂಸ್ಥೆಯೊಂದಿಗೆ ಕೆಲ ವ್ಯವಹಾರಗಳಿವೆ. ಆ ಸಂಸ್ಥೆಗಾಗಿ 3 ಕಂಟೈನರ್​ ಲೆನಿನ್ ತರಿಸಿದ್ದೇನೆ. ಆದರೆ, ಆರ್ಥಿಕವಾಗಿ ಕೆಲ ಕಷ್ಟಗಳು ಎದುರಾಗಿರುವುದರಿಂದ ವಸ್ತುಗಳನ್ನು ಇಳಿಸಿಕೊಳ್ಳಲು ಹಣದ ಸಹಾಯ ಬೇಕು. ತುರ್ತಾಗಿ 6.2ಮಿಲಿಯನ್​ ರಾಂಡ್ ಬೇಕಿದ್ದು, ನಿಮಗೆ ಸೂಕ್ತ ಮೊತ್ತದೊಂದಿಗೆ ಅದನ್ನು ಹಿಂತಿರುಗಿಸಲಾಗುವುದು ಎಂದು ಉದ್ಯಮಿ ಎಸ್​ ಆರ್ ಮಹಾರಾಜ್​ ಅವರಿಗೆ ಭರವಸೆ ನೀಡಿ ನೆಟ್​ಕೇರ್ ಸಂಸ್ಥೆಯ ದಾಖಲೆಗಳನ್ನು ತೋರಿಸಿದ್ದರು.

ಆಶೀಶ್​ ಲತಾ ಅವರ ಕೌಟುಂಬಿಕ ಹಿನ್ನೆಲೆ ಹಾಗೂ ನೆಟ್​ಕೇರ್​ ದಾಖಲೆಗಳನ್ನು ಗಮನಿಸಿದ ಉದ್ಯಮಿ ಮಹಾರಾಜ್​ ಸಹಾಯಕ್ಕೆ ಒಪ್ಪಿ, ಲಿಖಿತ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿ ಸಾಲ ನೀಡಿದ್ದರು. ಆದರೆ, ನಂತರದಲ್ಲಿ ಆಶೀಶ್​ ಲತಾ ಅವರಿಗೂ ನೆಟ್​ಕೇರ್ ಸಂಸ್ಥೆಗೂ ಯಾವುದೇ ವ್ಯವಹಾರಗಳಿಲ್ಲ. ಅವರು ತೋರಿಸಿದ ದಾಖಲೆಗಳು ನಕಲಿ ಎನ್ನುವ ವಿಚಾರ ಬಹಿರಂಗವಾಗಿತ್ತು. ಅದಾದ ಬೆನ್ನಲ್ಲೇ ಮಹಾರಾಜ್​ ಕಾನೂನಿನ ಮೊರೆ ಹೋಗಿ ಆಶೀಶ್ ಲತಾ ವಿರುದ್ಧ ದೂರು ದಾಖಲಿಸಿದ್ದರು.

ವಿಚಾರಣೆ ವೇಳೆ ಮಹಾತ್ಮಾ ಗಾಂಧೀಜಿ ಅವರ ಮರಿಮೊಮ್ಮಗಳು ತಪ್ಪಿತಸ್ಥೆ ಎನ್ನುವುದು ಕಂಡು ಬಂದ ಕಾರಣ ಇದೀಗ ದಕ್ಷಿಣ ಆಫ್ರಿಕಾದ ಡರ್ಬನ್​ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕುಟುಂಬದ ಹಿರಿತನ, ನಂಬಿಕೆಗಳನ್ನೇ ಬಂಡವಾಳವಾಗಿಸಿಕೊಂಡು ಮೋಸವೆಸಗಿದ​ ಲತಾ ಅವರು ಕಾನೂನಿನ ಅಡಿಯಲ್ಲಿ ಅಪರಾಧಿ ಎನ್ನುವುದು ಸಾಬೀತಾದಂತಾಗಿದೆ.

Leave a Reply

error: Content is protected !!
LATEST
2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಹಾಸನಾಂಬೆ ದರ್ಶನ ಅಂತ್ಯ-ಹರಿದು ಬಂತ್ತು ₹9 ಕೋಟಿಗೂ ಅಧಿಕ ಆದಾಯ ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ