ವಿಜಯಪಥ ಸಮಗ್ರ ಸುದ್ದಿ
ಕೇರಳ: ಪ್ರೀತಿಸಿದವರನ್ನು ಪಡೆಯಲು ಅದೇಷ್ಟೋ ಪ್ರೇಮಿಗಳು ಪಾಲಕರನ್ನು ಒಪ್ಪಿಸಲಾಗದೇ ತಮ್ಮ ಪ್ರಾಣವನ್ನು ಕಳೆದುಕೊಂಡಿರುವುದನ್ನು ಈಗಲೂ ಕಳೆದುಕೊಳ್ಳುತ್ತಿರುವವರನ್ನು ನಾವು ನೋಡುತ್ತಲೇ ಇರುತ್ತೇವೆ. ಇದರ ನಡುವೆ ಒಂದು ಸತ್ಯ ಘಟನೆ ನಡೆದಿರುವುದು ಈಗ ನಮ್ಮೆದುರಿಗಿದೆ.
ಅದು! ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅವರಿಬ್ಬರ ಪ್ರೀತಿಗೆ ಧರ್ಮ ಅಡ್ಡಿಯಾಗಿತ್ತು. ಬೇರೆಯಾಗಿ ಬದುಕೋದಕ್ಕೆ ಸಾಧ್ಯವೇ ಇಲ್ಲ ಅನ್ನಿಸಿದಾಗ ತನ್ನು ಪ್ರಿಯತಮೆಯನ್ನು ಸುಮಾರು 11 ವರ್ಷಗಳ ಕಾಲ ತನ್ನ ಮನೆಯ ಸಣ್ಣ ಕೋಣೆಯಲ್ಲಿ ಬಚ್ಚಿಟ್ಟಿದ್ದ. ಆದ್ರೀಗ 11 ವರ್ಷಗಳ ಬಳಿಕ ಮಗಳು ಪಕ್ಕದ ಮನೆಯಲ್ಲೇ ಪತ್ತೆಯಾಗಿದ್ದಾಳೆ. ಇದು ಪಾಲಕರಿಗೆ ಶಾಕ್ ನೀಡಿದೆ.
ಹೌದು, ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಯಲೂರಿನ ನಿವಾಸಿಯಾಗಿರು 18 ವರ್ಷದ ಸಂಜಿತಾ ತನ್ನ ಮನೆ ಪಕ್ಕದ ರೆಹಮಾನ್ ಎಂಬಾತನನ್ನು ಪ್ರೀತಿಸುತ್ತಿದ್ದಾಳೆ. ಆದರೆ ಪ್ರೀತಿಯ ವಿಚಾರ ಮನೆಯಲ್ಲಿ ತಿಳಿದರೆ ಮದುವೆಗೆ ವಿರೋಧ ಮಾಡುತ್ತಾರೆ ಅಂತ ಭಾವಿಸಿದ ಅಂದಿನ ಈ ಯುವ ಪ್ರೇಮಿಗಳು ಹೇಗಾದ್ರೂ ಮಾಡಿ ಒಂದಾಗಲೇ ಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಸುಮಾರು 11 ವರ್ಷದ ಹಿಂದೆ ಸಂಜಿತಾ ಒಂದು ದಿನ ನಾಪತ್ತೆಯಾಗಿದ್ದಳು. ಮನೆ ಮಂದಿಯೆಲ್ಲ ಎಲ್ಲ ಕಡೆ ಹುಡುಕಾಡಿದ್ದರೂ ಸಂಜಿತಾ ಮಾತ್ರ ಪತ್ತೆಯಾಗಲೇ ಇಲ್ಲ. ಕೊನೆಗೆ ಪಾಲಕರು ಆಕೆ ಯಾರ ಜೊತೆಯೋ ಓಡಿ ಹೋಗಿರಬಹುದು ಎಂದು ಭಾವಿಸಿ ಸುಮ್ಮನಾಗಿದ್ದಾರೆ. ಆದರೆ 11 ವರ್ಷವಾದವಾರು ಪಕ್ಕದ ಮನೆಯ ಯುವಕ ರೆಹಮಾನ್ ನನ್ನು ಸಂಜಿತಾ ಪ್ರೀತಿಸುತ್ತಿರೋ ವಿಚಾರ ಗೊತ್ತೇ ಆಗಿಲ್ಲ.
ಜತೆಗೆ ಸಂಜಿತಾ ಆಕೆಯ ಪಾಲಕರ ಮನೆ ಪಕ್ಕದಲ್ಲಿಯೇ ಇರೋ ರೆಹಮಾನ್ ಮನೆಯ ಸಣ್ಣ ಕೋಣೆಯಲ್ಲಿ ಬಂಧಿಯಾಗಿದ್ದರೂ ತಿಳಿಯಲಿಲ್ಲ. ಇಂಥ ಪ್ರೀತಿಯ ಪ್ರಿಯತಮೆಯನ್ನು ಕಳೆದುಕೊಳ್ಳಲು ಇಷ್ಟವಿಲ್ಲದ ರೆಹಮಾನ್ ಆಕೆಯನ್ನು ತಾನು ವಾಸಿಸುತ್ತಿದ್ದ ಮನೆಯಲ್ಲಿಯೇ ಬಚ್ಚಿಟ್ಟಿದ್ದಾನೆ. ಇನ್ನು ಬೆಳಗ್ಗೆದ್ದು ಪೈಂಟರ್ ಕೆಲಸಕ್ಕೆ ತೆರಳುತ್ತಿದ್ದ ರೆಹಮಾನ್ ಸಂಜೆ ಮನೆಗೆ ವಾಪಸಾಗುತ್ತಿದ್ದ. ರೆಹಮಾನ್ ತಾಯಿ ಹಾಗೂ ಅಣ್ಣ ಅದೇ ಮನೆಯಲ್ಲಿ ಇದ್ದರೂ ಸಂಜಿತಾ ಇರೋ ವಿಚಾರ ಗೊತ್ತೇ ಇರಲಿಲ್ಲ. ರೆಹಮಾನ್ ಸಿಡುಕು ಸ್ವಭಾವದವನಾಗಿರೋ ಕಾರಣಕ್ಕೆ ಯಾರೂ ಕೂಡ ಆತನ ರೂಮ್ ಗೆ ಹೋಗುತ್ತಲೇ ಇರಲಿಲ್ಲ. ನಿತ್ಯವೂ ಕೆಲಸಕ್ಕೆ ಹೋಗುವಾಗ ರೂಮ್ ಲಾಕ್ ಮಾಡಿಕೊಂಡು ಹೋಗುತ್ತಿದ್ದ.
ತಾಯಿ ಹಾಗೂ ಅಣ್ಣ ಕೆಲಸಕ್ಕೆ ಹೋದರೆ ಸಂಜೆಯೇ ಮನೆಗೆ ಬರೋದು. ಹೀಗಾಗಿ ಸಂಜಿತಾ ಕಿಟಕಿ ಸರಿಸಿ ಮನೆಯೊಳಗೆ ಬಂದು ತನ್ನ ನಿತ್ಯ ಕರ್ಮಗಳನ್ನು ಪೂರೈಸುತ್ತಿದ್ದಳು, ಸುಮಾರು 11 ವರ್ಷಗಳ ಕಾಲ ಇಬ್ಬರ ಪ್ರಣಯ ಸಣ್ಣ ರೂಮಿನಲ್ಲಿಯೇ ನಡೆಯುತ್ತಿದ್ದರೂ ಕೂಡ ಲೋಕದ ಕಣ್ಣಿಗೆ ಕಾಣಿಸಲೇ ಇಲ್ಲಾ. ಇನ್ನು ಸಂಜಿತಾ ತನ್ನ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿ ರೋ ರೆಹಮಾನ್ ಮನೆಯಲ್ಲಿರೋ ವಿಷಯ ಗೊತ್ತೇ ಆಗಿರಲಿಲ್ಲ. ಇದೀಗ ಸಂಜಿತಾಗೆ 29 ವರ್ಷವಾಗಿದ್ದು, ರೆಹಮಾಗೆ 34 ವರ್ಷ.
ಈ ನಡುವೆ ಕಳೆದ ಮೂರು ತಿಂಗಳಿನ ಹಿಂದೆ ರೆಹಮಾನ್ ನಾಪತ್ತೆಯಾಗಿದ್ದ. ಈ ಕುರಿತು ರೆಹಮಾನ್ ಪಾಲಕರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರೆಹಮಾನ್ ಹುಡುಕೋದಕ್ಕೆ ಹೊರಟಾಗ ರೆಹಮಾನ್ ಜೊತೆ ಸಂಜಿತಾ ಪತ್ತೆಯಾಗಿದ್ದಾಲೆ. ಸಂಜಿತಾಳ ನೋಡಿದ ಪಾಲಕರಿಗೆ ಅರೆ ಕ್ಷಣ ಶಾಕ್ ಆಗಿತ್ತು. ಪ್ರೇಮಿಗಳು ಪೊಲೀಸರ ಮುಂದೆ ತಮ್ಮ ಅಪರೂಪದ ಪ್ರೇಮ ಕಥೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಇದೀಗ ಪೊಲೀಸರು ಇಬ್ಬರನ್ನೂ ನ್ಯಾಯಾಧೀಶರ ಮುಂದೆ ತಂದು ನಿಲ್ಲಿಸಿದ್ದು, 11 ವರ್ಷಗಳ ಕಾಲ ನಡೆದ ವಿಚಾರಗಳನ್ನು ನ್ಯಾಯಾಧೀಶರ ಮುಂದೆ ತಿಳಿಸಿರುವ ಸಂಜಿತಾ ತಾನು ರೆಹಮಾನ್ ನನ್ನು ಮದುವೆಯಾಗಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾಳೆ.
ಇನ್ನು ಈ ಪ್ರೇಮಿಗಳ ರೋಚಕ ಸತ್ಯ ಕಥೆಯನ್ನು ಕೇಳಿತ್ತಿದ್ದಂತೆಯೇ ನ್ಯಾಯಾಲಯದಲ್ಲಿದ್ದವರು ಶಾಕ್ ಜತೆಗೆಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 11 ವರ್ಷಗಳ ಕಾಲ ಕೊಠಡಿಯನ್ನೇ ಪ್ರಪಂಚವನ್ನಾಗಿಸಿಕೊಂಡು ಬದುಕುತ್ತಿದ್ದ ಸಂಜಿತಾ ಪ್ರೀತಿ ಕಂಡು ನಿಬ್ಬೆರಗಾಗಿದ್ದಾರೆ.