NEWSರಾಜಕೀಯ

ಸಿದ್ದರಾಮಯ್ಯ ಚಿಕ್ಕನಾಯಕನಹಳ್ಳಿಯಲ್ಲಿ ಸ್ಪರ್ಧಿಸಲಿ: ಮಾಜಿ ಶಾಸಕ ಕೆಎನ್ಆರ್‌

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ತುಮಕೂರು: ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೂ 23 ತಿಂಗಳು ಇದೆ. ಕೊನೆಯ 6 ತಿಂಗಳಲ್ಲಿ ಯಾರು, ಎಲ್ಲಿಂದ ಸ್ಪರ್ಧೆ ಎಂಬುದು ತೀರ್ಮಾನವಾಗಲಿದೆ. ಕಡೆಯಲ್ಲಿ ಏನುಬೇಕಾದರು ಆಗಬಹುದು ಎಂದು ವಿಶ್ಲೇಷಿಸಿರುವ ಮಾಜಿ ಶಾಸಕ ಕೆ.ಎನ್. ರಾಜಣ್ಣ, ತಮ್ಮ ಪ್ರಕಾರ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಸ್ಪರ್ಧೆ ಮಾಡಲ್ಲ, ಅಲ್ಲಿ ಕೆಲಸ ಮಾಡಿದ್ದಾರೆ. ಜತೆಗೆ ಬಾದಾಮಿಗೆ ಹೋಗಿ ಬರುವುದಕ್ಕೆ ಅವರಿಗೆ ಸಮಯದ ತೊಂದರೆಯಾಗುತ್ತಿದೆ. ಹೀಗಾಗಿ ತಾವೂ ಕೂಡ ಸಿದ್ದರಾಮಯ್ಯ ಅವರು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎಂದು ಬಯಸುತ್ತಿರುವುದಾಗಿ ಹೇಳಿದ್ದಾರೆ.

ಇನ್ನು ಮುಂದಿನ ವಿಧಾನಸಭೆ ಚುನಾವಣೆ ಸ್ಪರ್ಧೆ ವಿಚಾರವಾಗಿ ಮಾತನಾಡಿದ ರಾಜಣ್ಣ, ಸಿದ್ದರಾಮಯ್ಯ ಕೋಲಾರಕ್ಕೆ ಹೋಗಬೇಕು ಅನ್ನೋ ಆಯ್ಕೆಯಿದೆ. ಜಮೀರ್ ಪಾಷಾ ಅವರದ್ದೂ ಒಂದು ಆಯ್ಕೆಯಿದೆ. ತುಮಕೂರು ಸಹ ಒಂದು ಆಯ್ಕೆಯಿದೆ ಎಂದು ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿಯೂ ಮಾತನಾಡಿ, ಜಿ.ಟಿ. ದೇವೇಗೌಡ ಕಾಂಗ್ರೆಸ್ ಗೆ ಬರ್ತಾರೆ, ಚಾಮುಂಡೇಶ್ವರಿಯಲ್ಲಿ ಅವರೇ ನಿಲ್ತಾರೆ. ಚುನಾವಣೆ 6 ತಿಂಗಳು ಇದ್ದಂತೆ ಬರುತ್ತಾರೆ ಎಂದು ಒಂದು ಹೊಸಬಾಂಬ್‌ ಕೂಟ ಸಿಡಿಸಿದರು.

ಸಚಿವನಾದ ಬಳಿಕ ಮುಂದಿನ ಎಲೆಕ್ಷನ್‌ಗೆ ನಿಲ್ಲೋದಿಲ್ಲ- ರಾಜಣ್ಣ
ಕಾಂಗ್ರೆಸ್ ನಲ್ಲಿ ಮುಂದೆ ಯಾರು ಬೇಕಾದ್ರೂ ಮುಖ್ಯಮಂತ್ರಿ ಆಗಲಿ. ನನಗೆ ಮಾತ್ರ ಸಚಿವ ಸ್ಥಾನ ಕೊಡಬೇಕು, ಇಲ್ಲದಿದ್ರೆ ರಾಜೀನಾಮೆ ನೀಡುತ್ತೇನೆ. ನಾನು ಬಾಂಬೆಗೆಲ್ಲಾ ಹೋಗಲ್ಲ, ನಮ್ಮ ಕ್ಷೇತ್ರದಲ್ಲೇ ಇರ್ತೇನೆ.‌ ಎಲ್ಲಾ ಮುಖಂಡರಿಗೂ ಮನದಟ್ಟು ಮಾಡಿದ್ದೇನೆ. ಸಚಿವ ಸ್ಥಾನ ಸಿಕ್ಕ ಮೇಲೆ ಮತ್ತೆ ಮುಂದಿನ ಎಲೆಕ್ಷನ್‌ಗೆ ನಿಲ್ಲೋದಿಲ್ಲ, ಇದೇ ಕೊನೆ‌ ಎಲೆಕ್ಷನ್ ಎದು ತುಮಕೂರಿನಲ್ಲಿ ರಾಜಣ್ಣ ಹೇಳಿದರು.

ವಿಜಯೇಂದ್ರನೇ ಚೀಫ್ ಮಿನಿಸ್ಟರ್ ಅನುಮಾನವಿಲ್ಲ
ವಯಸ್ಸಾಗಿದೆ ಎಂಬ ಕಾರಣವೊಡ್ಡಿ ಯಡಿಯೂರಪ್ಪ ಬದಲಾವಣೆ ಸರಿಯಲ್ಲ.‌ ಸುಭದ್ರವಾದ ಸರ್ಕಾರವಿದ್ದರೆ ಕೆಲಸವಾಗುತ್ತದೆ. ಅಭದ್ರತೆ ಸರ್ಕಾರ ಬಂದರೆ ಕೆಲಸ ಕಾರ್ಯವಾಗುವುದಿಲ್ಲ. ಜನರಿಗೆ ತೊಂದರೆಯಾಗಲಿದೆ.‌ ಬದಲಾವಣೆ ಮಾಡೋದು ಅವರ ಪಕ್ಷದ ವಿಚಾರ ಎಂದು ಯಡಿಯೂರಪ್ಪ ಬಗ್ಗೆ ರಾಜಣ್ಣ ಮೃಧು ಧೋರಣೆ ತೋರಿದರಾದರೂ ಅದಕ್ಕೆ ಕಾರಣ ಏನು ಎಂಬುದು ತಕ್ಷಣವೇ ಅವರ ಮಾತಿನಲ್ಲೇ ವ್ಯಕ್ತವಾಯಿತು.

ಸಿಎಂ ಯಡಿಯೂರಪ್ಪ ನಾಮ್​ ಕೇ ವಾಸ್ತೆ. ಎಲ್ಲ ನಡೆಸೋದು ವಿಜಯೇಂದ್ರ. ವಿಜಯೇಂದ್ರನೇ ಸರ್ಕಾರ ವಿಜಯೇಂದ್ರನೇ ಚೀಫ್ ಮಿನಿಸ್ಟರ್.‌ ಇದರಲ್ಲಿ ಯಾವುದೇ ಅನುಮಾನವಿಲ್ಲ. ವಿಜಯೇಂದ್ರ ಶಾಡೋ ಆಫ್ ಚೀಫ್ ಮಿನಿಸ್ಟರ್. ಯಡಿಯೂರಪ್ಪ ಇದ್ರೆ ಒಳ್ಳೇದು, ಕಾಂಗ್ರೆಸ್​ ಪಕ್ಷಕ್ಕೇ ಹೆಚ್ಚು ಲಾಭ. ಇನ್ ಎಫೆಕ್ಟಿವ್ ಸಿಎಂ ಇದ್ದರೆ ವಿರೋಧ ಪಕ್ಷಕ್ಕೇ ಒಳ್ಳೆಯದು ಅಲ್ವಾ? ಎಂದು ನಗೆಯಾಡುತ್ತಾ ರಾಜಣ್ಣ ಪ್ರಶ್ನಿಸಿದರು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು