ವಿಜಯಪಥ ಸಮಗ್ರ ಸುದ್ದಿ
ಗಾಜೀಪುರ: ಗಂಗಾ ನದಿಯಲ್ಲಿ ಮರದ ಡಬ್ಬದಲ್ಲಿ ನವಜಾತ ಹೆಣ್ಣು ಶಿಶುವೊಂದು ತೇಲಿ ಬಂದಿದೆ.
ಉತ್ತರ ಪ್ರದೇಶದ ಗಾಜೀಪುರದ ಬಳಿ ಗಂಗಾ ನದಿಯಲ್ಲಿ ತೇಲಿ ಬರುತ್ತಿದ್ದ ಮರದ ಬಾಕ್ಸ್ ಕಂಡ ಸ್ಥಳೀಯ ಮೀನುಗಾರ ಗುಲ್ಲು ಚೌಧರಿ ಎಂಬುವರು ಬಾಕ್ಸ್ ಹಿಡಿದು ಅದರ ಮುಚ್ಚಳವನ್ನು ತೆರೆದು ನೋಡಿದಾಗ ಅವರಿಗೆ ಅಚ್ಚರಿಯೇ ಕಾದಿತ್ತು. ಅಲ್ಲಿ ನವಜಾತ ಶಿಶು ಇರುವುದು ಕಂಡು ಕೆಲ ಕಾಲ ಏನು ಮಾಡುವುದ ಎಂದು ತೋಚದಂತ್ತಾಗಿದ್ದಾರೆ.
ಆ ಬಾಕ್ಸ್ ನಲ್ಲಿ ಮಗು ಮಾತ್ರವಲ್ಲದೆ ಒಂದು ಕಾಗದ ಇತ್ತು. ಜತೆಗೆ ದುರ್ಗಾ ಮಾತೆಯ ಚಿತ್ರ, ಜಾತಕ ಮತ್ತು ಅಗರಬತ್ತಿಯ ತುಂಡುಗಳು ಸಹ ಇದ್ದವು.
ಮರದ ಬಾಕ್ಸ್‌ನಲ್ಲಿ ಶಿಶುವನ್ನಿರಿಸಿ ಗಂಗೆ ನದಿಗೆ ತೇಲಿ ಬಿಡಲಾಗಿದ್ದು, ಗಂಗೆಯ ಮಗಳು ಎಂದು ಆ ಕಾಗದದಲ್ಲಿ ಬರೆದಿಡಲಾಗಿತ್ತು. ಆ ಮಗುವನ್ನು ಮೀನುಗಾರ ಚೌಧರಿ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರಿಗೆ ಚೌಧರಿ ಮನೆಗೆ ಆಗಮಿಸಿ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ದದ್ರಿ ಘಾಟ್ ನಲ್ಲಿದ್ದಾಗ ಗುಲ್ಲು ಚೌಧರಿಗೆ ಮಗು ಅಳುವಿನ ಶಬ್ದ ಕೇಳಿಸಿದೆ. ಆ ವೇಳೆ ಆ ಶಬ್ದ ಎಲ್ಲಿಂದ ಬರುತ್ತಿದೆ ಎಂದು ಆತ ಗಮನಿಸಿದಾಗ ಬಾಕ್ಸ್ ಬಳಿ ಬರುತ್ತಿರುವುದು ಗೊತ್ತಾಗಿದೆ. ಬಳಿಕ ಆ ಬಾಕ್ಸ್ ತೆರೆದು ನೋಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚೌಧರಿಯ ಈ ಮಾನವೀಯತೆ ನಡೆಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಮಗುವಿನ ಬೆಳವಣಿಗೆಗೆ ಬೇಕಾದ ಎಲ್ಲವನ್ನು ಸರ್ಕಾರವೆ ನೋಡಿಕೊಳ್ಳಲಿದೆ. ಜತೆಗೆ ಮಗುವನ್ನು ರಕ್ಷಿಸಿದ ಅಂಬಿಗ ಆರ್ಥಿಕವಾಗಿ ಬಡವನಿದ್ದು, ಸರಿಯಾದ ಮನೆಯೂ ಇಲ್ಲ. ಹೀಗಾಗಿ ಆತನಿಗೆ ಒಂದು ಉತ್ತಮ ಮನೆ ಕಟ್ಟಿಸಿಡಲು ಸರ್ಕಾರ ಮುಂದಾದೆ.
ಇನ್ನು ಸರ್ಕಾರದಿಂದ ಅಂಬಿಗನನ್ನು ಸನ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಆದಿತ್ಯನಾಥ್ ತಿಳಿಸಿದ್ದಾರೆ.