ವಿಜಯಪಥ ಸಮಗ್ರ ಸುದ್ದಿ
ನ್ಯೂ ಡೆಲ್ಲಿ: ಕೇಂದ್ರ ಸರ್ಕಾರದ 52 ಲಕ್ಷ ಸಕ್ರಿಯ ಉದ್ಯೋಗಿಗಳು ಹಾಗೂ 61 ಲಕ್ಷ ಪಿಂಚಣಿದಾರರು ಜುಲೈ 1ರಿಂದಲೇ 7ನೇ ವೇತನ ಆಯೋಗದ ಶಿಫಾರಸಿನಂತೆ ತುಟ್ಟಿ ಭತ್ಯೆ ಹೆಚ್ಚಳ ಪಡೆಯಲಿದ್ದಾರೆ. ಇದೇ ವೇಳೆ ನೌಕರರು ತಮ್ಮ ಡಿಎ ಅರಿಯರ್ಸ್‌ಗಳನ್ನು ಸಹ ಪಡೆಯಲಿದ್ದಾರೆ.
ನವೋದಯ ವಿದ್ಯಾಲಯ ಸಮಿತಿಯ ಶಾಲೆಗಳ ನೌಕರರಿಗೆ ನೀಡಲಾಗುತ್ತಿರುವ ವೈದ್ಯಕೀಯ ಭತ್ಯೆಯನ್ನು ಐದು ಪಟ್ಟು ಏರಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುವ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.