ಜೇವರ್ಗಿ: ರಾಜ್ಯದ ಶಕ್ತಿಸೌಧದ ಆವರಣದಲ್ಲಿ ಜಗತಜ್ಯೋತಿ ಬಸವಣ್ಣನವರ ಪ್ರತಿಮೆ ಅನಾವರಣಕ್ಕೆ ಆದೇಶಿಸಿದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಸರ್ಕಾರದ ನಿರ್ಧಾರಕ್ಕೆ ಜೇವರ್ಗಿ ಪಟ್ಟಣದಲ್ಲಿ ವೀರಶೈವ ಸಮಾಜದ ತಾಲೂಕು ಘಟಕ ಸ್ವಾಗತಿಸಿ ಸಿಹಿ ಹಂಚಿ ಮತ್ತು ಪಟಾಕಿ ಸಿಡಿಸಿ ಸಂಭ್ರಮಾಚಾರಣೆ ಮಾಡಿತು.
ಈ ವೇಳೆ ಮಾತನಾಡಿದ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಸಿದ್ದು ಸಾಹು ಅಂಗಡಿ, ಯಡಿಯೂರಪ್ಪನವರು ವಿಧಾನಸೌಧ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಪ್ರತಿಮೆ ಅನಾವರಣಕ್ಕೆ ಆದೇಶ ನೀಡಿರುವುದು ಇಡೀ ವೀರಶೈವ ಲಿಂಗಾಯತ ಸಮಾಜದವರಿಗೆ ತುಂಬಾ ಸಂತೋಷ ಉಂಟು ಮಾಡಿದೆ. ಇದಕ್ಕಾಗಿ ಸಮಸ್ತ ವೀರಶೈವ ಲಿಂಗಾಯತರು ಮುಖ್ಯಮಂತ್ರಿಗಳಿಗೆ ಅಭಿನಂದನೆ ತಿಳಿಸುತ್ತೇವೆ ಎಂದರು.
ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಜಯಪ್ರಕಾಶ ಪಾಟೀಲ, ಗುಂಡು ಸಾಹು ಗೋಗಿ, ರಾಮಶೆಟ್ಟಿ ಸಾಹು ಹುಗ್ಗಿ, ಶಿವಕುಮಾರ ಕಲ್ಲಾ, ಗುರುಗೌಡ ಪಾಟೀಲ, ಸಂಗನಗೌಡ ಪಾಟೀಲ, ನೀಲಕಂಠ ಪಾಟೀಲ, ಸಂಗಣ್ಣ ಹಳ್ಳಿ, ವಿಶ್ವನಾಥ ಇಮ್ಮಣ್ಣಿ, ರವಿ ಕೋಳಕೂರ, ಪ್ರಕಾಶ ಪುಲಾರಿ, ಮಲ್ಲಿಕಾರ್ಜುನ ಆಂದೋಲಾ, ಸಂಗೂ ಬಿಲ್ಲಾಡ, ತಿಪ್ಪಣ್ಣ ರಾಠೋಡ, ರೇವನಸಿದ್ದ ಅಕ್ಕಿ ಸೇರಿದಂತೆ ಅನೇಕರು ಇದ್ದರು.