ದಾವಣಗೆರೆ: ಬಿಜೆಪಿಯವರು ಕಾಂಗ್ರೆಸ್ಗೆ ಸಪೋರ್ಟ್ ಮಾಡುತ್ತೇವೆ ಸಿಎಂ ಆಗಿ ಎಂದಿದ್ದಾರೆ ಎಂದು ದಾವಣಗೆರೆಯಲ್ಲಿ ಕಾಂಗ್ರೆಸ್ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆಗೆ ಟಕ್ಕರ್ ಕೊಟ್ಟಿದ್ದಾರೆ.
ಶಾಮನೂರು ಶಿವಶಂಕರಪ್ಪನವರು ಕೂಡ ಸಿಎಂ ಆಗೋದಕ್ಕೆ ರೆಡಿಯಾಗಿದ್ದಾರೆ ಎಂದು ಡಿಸಿಎಂ ಕಾರಜೋಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಲ್ಲಿಕಾರ್ಜುನ್, ನಮ್ಮ ಅಪ್ಪಾಜ್ಜಿ ಸಿಎಂ ಆಗೋದಕ್ಕೆ ಬಿಜೆಪಿಯವರು ಕಾಂಗ್ರೆಸ್ಗೆ ಸಪೋರ್ಟ್ ಮಾಡುತ್ತೇವೆ ಎನ್ನುತ್ತಿದ್ದಾರೆ ಆದರೆ ನಾವೆ ಬೇಡ ಎನ್ನುತ್ತಿದ್ದೇವೆ ಎಂದು ನಗೆ ಚಟಾಕಿ ಹಾರಿಸಿದರು.
ಇನ್ನು ಮುಖ್ಯಮಂತ್ರಿ ಆಗೋದಕ್ಕೆ ಯಾರಿಗೆ ಆಸೆ ಇಲ್ಲ ಹೇಳಿ ಸಿಎಂ ಆಗೋದನ್ನ ನಾನು ಬೇಡಾ ಎನ್ನಬೇಕಾ ಎಲ್ಲರಿಗೂ ಆಸೆ ಇದ್ದೇ ಇರುತ್ತಪ್ಪ. ಆದರೆ ನಮ್ಮ ಕಾಂಗ್ರೆಸ್ ನಲ್ಲಿ ಒಂದು ಸಂಸ್ಕೃತಿ ಇದೆ, ಸೀನಿಯಾರಿಟಿ, ಶಾಸಕರು ಆರಿಸಿದ ವ್ಯಕ್ತಿ ಸಿಎಂ ಆಗುತ್ತಾರೆ ಎಂದು ಕಾರಜೋಳ ಅವರಿಗೆ ರಿತುಗೇಟು ನೀಡಿದರು.
ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ದಾರೆ. ಚುನಾವಣೆಯಲ್ಲಿ ನಿಲ್ಲದೆ ಇರುವವರನ್ನು ಸಿಎಂ ಮಾಡಿದ್ದೇವೆ. ಹಾಗೇ ಸಿಎಂ ಅಗುವವರು ಬಹಳ ಜನ ಇರ್ತಾರೆ. ಶಾಸಕರು ಕೆಲವರ ಹೆಸರನ್ನು ಸಿಎಂ ಅಭ್ಯರ್ಥಿ ಎಂದು ಸೂಚಿಸುವುದು ಅವರವರ ವೈಯಕ್ತಿಕ ವಿಚಾರ ಆ ಬಗ್ಗೆ ಬಿಜೆಪಿಯವರೇಕೆ ಮಾತನಾಡಬೇಕು ಅವರ ಪಕ್ಷದಲ್ಲಿ ಈಗಲೂ ಸಿಎಂ ಸ್ಥಾನಕ್ಕಾಗಿ ಹೋರಾಟ ನಡೆಯುತ್ತಲೇ ಇದೆಯಲ್ಲ ಎಂದು ಹೇಳಿದರು.
ಇನ್ನು ಡಿಕೆಶಿ ಎಲ್ಲಾ ಕಾಂಗ್ರೆಸ್ ಶಾಸಕರು, ಮುಖಂಡರ ಜೊತೆ ಮೀಟಿಂಗ್ ಮಾಡಿದ್ದಾರೆ. ಪಕ್ಷ ಅಧಿಕಾರಕ್ಕೆ ಬರಲು ನಾವೆಲ್ಲ ಶ್ರಮವಹಿಸಬೇಕು. ಪಕ್ಷವನ್ನು ಒಗ್ಗಟ್ಟಿನಿಂದ ಅಧಿಕಾರಕ್ಕೆ ತರಬೇಕು, ಹೈಕಮಾಂಡ್ ಇದೆ, ಸೀನಿಯಾರಿಟಿ ಮತ್ತು ಎಲ್ಲಾ ಎಂಎಲ್‍ಎಗಳು ಸಿಎಂ ಅರನ್ನು ಆರಿಸುತ್ತಾರೆ. ಈಗಲೇ ಸಿಎಂ ಅಭ್ಯರ್ಥಿ ಎಂದು ಯಾರನ್ನು ನಮ್ಮ ಪಕ್ಷದಲ್ಲಿ ಘೋಷಣೆ ಮಾಡುವುದಿಲ್ಲ ಎಂದರು.