ಬೆಂಗಳೂರು: ನಮ್ಮ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಚರ್ಚೆಗೆ ಫುಲ್ ಸ್ಟಾಪ್ ಹಾಕಿ ಎಂದಿದ್ದಾರೆ. ಹಾಗಾಗಿ ಹೇಳಿಕೆಗೆ ಟೋಟಲಿ ಫುಲ್ ಸ್ಟಾಪ್ ಹಾಕಿದ್ದೀನಿ ಎಂದು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ನಮ್ಮ ಪಕ್ಷದಲ್ಲಿ ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ. ನಾನು ನನ್ನ ಅಭಿಪ್ರಾಯ ಹೇಳಿದ್ದೀನಿ. ಸಿದ್ದರಾಮಯ್ಯ ಅವರ ಸರ್ಕಾರದ ಕೆಲಸವನ್ನು ಜನ ನೆನಪಿಸಿಕೊಳಳುತ್ತಾರೆ. ಕಾಂಗ್ರೆಸ್ ಸರ್ಕಾರ ಬೇಕು ಅಂತಾರೆ ಎಂದರು.
ನಾನು ಓಪನ್ ಹಾರ್ಟೆಡ್ ಏನೇ ಹೇಳಿದರೂ ಓಪನ್ ಆಗಿ ಹೇಳುತ್ತೇನೆ. ಅದರಲ್ಲಿ ಮುಚ್ಚುಮರೆ ಏನು ಇರಲ್ಲ. ಆದರೆ ಈಗ ಮುಂದಿನ ಮುಖ್ಯಮಂತ್ರಿ ಬಗ್ಗೆ ಚರ್ಚೆ ಮಾಡಬೇಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾಗಿ ನಾನು ಈಗ ಏನು ಹೇಳಲ್ಲ ಎಂದರು.
ನಮ್ಮಲ್ಲಿ ಸಾಕಷ್ಟು ಜನ ಮುಖ್ಯಮಂತ್ರಿ ಪಟ್ಟಕ್ಕೆ ಅರ್ಹರಿದ್ದಾರೆ. ಯಾರು ಸಿಎಂ ಆಗಬೇಕು ಅನ್ನೋದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಜನರ ಅಭಿಪ್ರಾಯ ಯಾರ ಪರವಾಗಿ ಇದೆ ಅವರು ಆಗುತ್ತಾರೆ ಎಂದು ಹೇಳಿದರು.
ಇನ್ನು ಸಿಎಂ ಸ್ಥಾನದ ಬಗ್ಗೆ ಹಲವರು ಹೇಳುತ್ತಿದ್ದಾರೆ. ಲಿಂಗಾಯತರಲ್ಲಿ ನಮಗೆ ಕೊಡಿ ಎಂದು ಎಂ.ಬಿ ಪಾಟೀಲ್ ಹೇಳುತ್ತಾರೆ. ಅಲ್ಪಸಂಖ್ಯಾತರಲ್ಲಿ ಸಿ.ಎಂ. ಇಬ್ರಾಹಿಂ ಕೊಡಿ ಅಂತಾರೆ. ತನ್ವೀರ್ ಸೇಠ್ ನಾನು ಮುಖ್ಯಮಂತ್ರಿ ಆಕಾಂಕ್ಷಿ ಎಂದಿದ್ದಾರೆ. ಯಾರು ಸಿಎಂ ಆಗಬೇಕು ಎಂಬುದನ್ನು ನಮ್ಮ ಹೈಕಮಾಂಡ್ ನಿರ್ಧರಿಸಲಿದೆ ಎಂದರು.