NEWSಆರೋಗ್ಯದೇಶ-ವಿದೇಶ

ಕೊರೊನಾ ತಂದ ಮತ್ತೊಂದು ಆಪತ್ತು: ಮೂಳೆಯಲ್ಲಿನ ಅಂಗಾಂಶಗಳೇ ನಾಶ..!

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಕೊರೊನಾ ಇನ್ನೇನು ಮುಗಿಯಿತು ಎನ್ನುವಷ್ಟರಲ್ಲಿ ಮತ್ತೆ ರೂಪಾಂತರ ಹೊಂದಿ ಎರಡನೇ ಅಲೆ ಮೂಲಕ ಬಂದಪ್ಪಳಿಸಿದ ವೈರಾಣು ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಈ ನಡುವೆ ಈಗ ಕೊರೊನಾ ನಂತರ ಮತ್ತೊಂದು ಸಮಸ್ಯೆ ಕಾಣಿಸಿಕೊಳ್ಳಲಾರಂಭಿಸಿದ್ದು ಮೂಳೆಯಲ್ಲಿನ ಅಂಗಾಂಶಗಳೇ ಸಾಯಲಾರಂಭಿಸಿವೆ.

ಅವ್ಯಾಸ್ಕ್ಯುಲರ್​ ನೆಕ್ರೋಸಿಸ್​ (Avascular Necrosis) ಅಥವಾ Death of Bone Tissues ಎಂದು ಕರೆಯಲ್ಪಡುವ ಈ ಸಮಸ್ಯೆ ಇದೀಗ ಮುಂಬೈ ಆಸ್ಪತ್ರೆಯೊಂದರಲ್ಲಿ ಮೂವರಲ್ಲಿ ಕಾಣಿಸಿಕೊಂಡಿದೆ. ಆ ಮೂವರು ಕೂಡಾ ಕೊರೊನಾದಿಂದ ಚೇತರಿಸಿಕೊಂಡವರಾಗಿದ್ದು, 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ತಿಳಿದುಬಂದಿದೆ.

ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಿದ ಎರಡು ತಿಂಗಳ ನಂತರ ಅವ್ಯಾಸ್ಕ್ಯುಲರ್​ ನೆಕ್ರೋಸಿಸ್​ (Avascular Necrosis) ಸಮಸ್ಯೆ ಪತ್ತೆಯಾಗಿದೆ ಎಂದು ಮಹಿಮ್​ನಲ್ಲಿರುವ ಹಿಂದುಜಾ ಆಸ್ಪತ್ರೆಯ ಡಾ.ಸಂಜಯ್​ ಅಗರ್​ವಾಲಾ ತಿಳಿಸಿದ್ದಾರೆ.

ಈ ನಡುವೆಯೂ ಈಗ ಕಂಡುಬಂದಿರುವ ಡೆಲ್ಟಾ ಮಾದರಿಯ ವೈರಾಣು ಉಳಿದೆಲ್ಲವಕ್ಕಿಂತಲೂ ಅಪಾಯಕಾರಿ ಎಂಬ ಮಾತು ತಜ್ಞರ ವಲಯದಿಂದ ಕೇಳಿ ಬಂದಿರುವುದು ಹಾಗೂ ಸಂಭವನೀಯ ಮೂರನೇ ಅಲೆ ಬಗ್ಗೆ ಎಚ್ಚರಿಕೆ ನೀಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇದರ ಮಧ್ಯೆ, ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಬ್ಲ್ಯಾಕ್​ ಫಂಗಸ್, ಮಿಸ್​ ಸಿ ಕಾಣಿಸಿಕೊಂಡು ಸಾಕಷ್ಟು ಅವಾಂತರಗಳನ್ನೂ ಹುಟ್ಟುಹಾಕುತ್ತಿರುವುದು ಇನ್ನಷ್ಟು ಆತಂಕ ಸೃಷ್ಟಿಸುತ್ತಿದೆ.

ಬ್ಲ್ಯಾಕ್​ ಫಂಗಸ್​ ಅಥವಾ ಮ್ಯೂಕೋರ್ಮೈಕೋಸಿಸ್​ ಮತ್ತು ಅವ್ಯಾಸ್ಕ್ಯುಲರ್​ ನೆಕ್ರೋಸಿಸ್​ ಸಮಸ್ಯೆಗೆ ಕಾರಣವಾಗುತ್ತಿರುವ ಸಾಮಾನ್ಯ ಅಂಶ ಸ್ಟಿರಾಯ್ಡ್​ ಬಳಕೆ ಎನ್ನುವುದು ಗೊತ್ತಾಗಿದ್ದು, ಇದು ಕೊವಿಡ್​- 19ನ ದೀರ್ಘಕಾಲಿಕ ಸಮಸ್ಯೆಯ ಭಾಗವಾಗಿರಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸದ್ಯ, ಮೂವರು ರೋಗಿಗಳಲ್ಲಿ ಕಾಣಿಸಿಕೊಂಡಿರುವ ಅವ್ಯಾಸ್ಕ್ಯುಲರ್​ ನೆಕ್ರೋಸಿಸ್​ ಸಮಸ್ಯೆ ಯಾವ ಮಟ್ಟಿಗೆ ಅಪಾಯಕಾರಿ. ಯಾವ ವಯೋಮಾನದವರಿಗೆ ತೊಂದರೆ ನೀಡಲಿದೆ ಎನ್ನುವ ಬಗ್ಗೆ ಹೆಚ್ಚಿನ ವಿವರ ಸಿಕ್ಕಿಲ್ಲ. ಆದರೆ, ಸ್ಟಿರಾಯ್ಡ್​ ಬಳಕೆಯೇ ಸಮಸ್ಯೆಗೆ ಮೂಲ ಎನ್ನುತ್ತಿರುವ ತಜ್ಞರು ಅದರ ಬಳಕೆಯಲ್ಲಿ ನಿಗಾ ವಹಿಸಬೇಕೆಂದು ಅಭಿಪ್ರಾಯಪಡುತ್ತಿದ್ದಾರೆ.

ಅವ್ಯಾಸ್ಕ್ಯುಲರ್​ ನೆಕ್ರೋಸಿಸ್​ ಬಗ್ಗೆ ಎರಡು ದಿನಗಳ ಹಿಂದೆ ವೈದ್ಯಕೀಯ ನಿಯತಕಾಲಿಕೆಯೊಂದರಲ್ಲಿ ಅಧ್ಯಯನದ ವರದಿಯನ್ನು ಪ್ರಕಟಿಸಲಾಗಿದ್ದು, ಸ್ಟಿರಾಯ್ಡ್​ನ ಅತಿಯಾದ ಬಳಕೆ ಈ ಸಮಸ್ಯೆಗೆ ನಾಂದಿಯಾಗುತ್ತಿದೆ ಎಂಬ ಅಂಶವನ್ನು ತಿಳಿಸಿದೆ.

ಇನ್ನೊಂದೆಡೆ, ಮ್ಯೂಕೋರ್ಮೈಕೋಸಿಸ್​ ಸಮಸ್ಯೆಗೆ ತುತ್ತಾಗಿ ಕೊಯಂಬತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ 264 ರೋಗಿಗಳ ಪೈಕಿ, 30 ಮಂದಿ ಒಂದು ಕಣ್ಣಿನ ದೃಷ್ಟಿಯನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಅವರೆಲ್ಲರಿಗೂ ಎಂಡೋಸ್ಕೋಪಿ ಮಾಡಲಾಗಿದ್ದು, 110 ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಯೂ ನಡೆದಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ