ಬೆಂಗಳೂರು: ಪ್ರತಿ ಜಿಲ್ಲೆಯಲ್ಲೂ ವಕೀಲರ ನೇಮಕ ಮಾಡುತ್ತೇನೆ. ವಜಾ, ಅಮಾನತು, ವರ್ಗಾವಣೆ ಆಗಿರುವ ಎಲ್ಲ ನೌಕರರಿಗೂ ಕಾನೂನಿನ ಹೋರಾಟದ ಮೂಲಕವೇ ಗೆಲುವು ತಂದು ಕೊಂಡುತ್ತೇನೆ ಎಂದು ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ಭರವಸೆ ನೀಡಿದ್ದಾರೆ.
ಇಂದು ರಾತ್ರಿ 9.30ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ ಅವರು, ಎಲ್ಲರಿಗೂ ಒಳ್ಳೆಯದಾಗುವುತ್ತದೆ. ಎಲ್ಲರೂ ತಾಳ್ಮೆಯಿಂದ ಕಾಯಿರಿ. ಹೀಗಾಗಿ ಯಾರು ಯೋಚನೆ ಮಾಡುವ ಅಗತ್ಯವಿಲ್ಲ. ಶಕ್ತಿಮೀರಿ ನಾವು ನ್ಯಾಯ ಕೊಡಿಸುತ್ತೇನೆ ನೀವು ಭಯಪಡಬೇಡಿ ಎಂದು ಅಭಯ ನೀಡಿದರು.
ಇನ್ನು ಕಾನೂನು ಸಲಹೆಯನ್ನು ಉಚಿತವಾಗಿ ನಿಮಗೆ ಕೊಡುತ್ತೇನೆ. ಆ ಸಲಹೆಗಳನ್ನು ನೀವು ಸದುಪಯೋಗ ಪಡಿಸಿಕೊಂಡು ಮುಂದೆ ಬರಬೇಕು ಎಂದು ನಾವು ಈ ಮೂಲಕ ತಿಳಿಸುತ್ತಿದ್ದೇವೆ ಎಂದರು.
ನೌಕರರಿಗೆ ಸ್ಪಂದಿಸುವ ವಕೀಲರನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನೇಮಕ ಮಾಡಿಕೊಳ್ಳುತ್ತೇವೆ. ಆ ವಕೀಲರು ನಿಮಗೆ ಸ್ಪಂದಿಸದಿದ್ದರೆ ಅಂತಹ ವಕೀಲರನ್ನು ಹೊರಕಳುಹಿಸುತ್ತೇವೆ ಎಂದು ಹೇಳಿದರು.
ನೌಕರರ ಪರ ಮತ್ತೊಂದು ಸಂಘ ಅಂದರೇ ನಿಮಗೆ ಸ್ಪಂದಿಸುವಂತಹ ಸಂಘ ಅಸ್ತಿತ್ವಕ್ಕೆ ತರಬೇಕು. ಆ ಸಂಘಕ್ಕೆ ಒಂದು ಹೆಸರನ್ನು ಕೊಟ್ಟು ಅದನ್ನು ನೀವೆ ನಾಮಕರಣ ಮಾಡಿ ಎಂದು ತಿಳಿಸಿದ್ದಾರೆ.
ಅಲ್ಲದೇ ಈ ಸಂಬಂಧ ಶೀಘ್ರದಲ್ಲೇ ನೌಕರರ ಸಭೆ ಕರೆದು ಚರ್ಚಿಸಲಾಗುವುದು. ನೀವು ತೆಗೆದುಕೊಳ್ಳವ ತೀರ್ಮಾನದಂತೆ ನಾವು ಮುಂದಿನ ಹೆಜ್ಜೆ ಇಡೋಣ ಎಂದು ಹೇಳಿದ್ದಾರೆ.
ಕೆಎಸ್ಆರ್ಟಿಸಿ ನೌಕರರಿಗೆ ಸಂಬಂಧಿಸಿದ ಯಾವುದೇ ಕೇಸ್ ಆಗಿದ್ದರೂ ಆ ಪ್ರಕರಣವನ್ನು ಉಚಿತವಾಗಿ ನಾವು ನಡೆಸಿಕೊಡುತ್ತೇನೆ. ಆದರೆ ತಾವು ನನ್ನ ಕಚೇರಿಗೆ ಬರುವಾಗ ಶಿಸ್ತಿನಿಂದ ಬರಬೇಕು ಎಂದು ಸಲಹೆ ನೀಡಿದರು.
ಈಗಾಗಲೇ ನಾನು ಹೇಳಿರುವಂತೆ ಎಲ್ಲ ನೌಕರರಿಗೂ ನ್ಯಾಯ ಕೊಡಿಸುತ್ತೇನೆ. ಅದಕ್ಕಾಗಿ ನಾವು ನಿಮ್ಮ ನಿವೃತ್ತ ಅಧಿಕಾರಿಗಳನ್ನೇ ನೇಮಕ ಮಾಡಿಕೊಂಡು ಪ್ರತಿ ಡಿಪೋ ಪಟ್ಟದಲ್ಲಿ ಒಬ್ಬೊಬ್ಬ ಉಪಾಧ್ಯಕ್ಷರನ್ನು ನೇಮಕ ಮಾಡಲಾಗುವುದು. ಎಲ್ಲವೂ ಪಾರದರ್ಶಕವಾಗಿ ನಡೆಯಲಿದೆ. ಎಲ್ಲಿಯೂ ಕಾನೂನು ಬಾಹೀರವಾಗಿ ನಡೆದುಕೊಳ್ಳದಂತೆ ನೋಡಿಕೊಳ್ಳೋಣ ಎಂದರು.
ಇನ್ನು ಮುಂದಿನ ತಿಂಗಳಿಂದ ಪ್ರತಿ ಡಿಪೋಗಳಿಗೂ ನಾವು ಖುದ್ದು ಭೇಟಿ ನೀಡಿ ನಿಮ್ಮ ಸಮಸ್ಯೆಯನ್ನು ಆಲಿಸಲಾಗುವುದು. ಜತೆಗೆ ಅದನ್ನು ಸಾಧ್ಯವಾದಷ್ಟು ಅಲ್ಲೆ ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ನೂತನ ಸಾರಿಗೆ ಸಚಿವರನ್ನು ನಿಮ್ಮ ಮೂಲಕವೇ ಭೇಟಿ ಮಾಡಿ ಅವರಿಗೆ ಎಲ್ಲವನ್ನು ಮನವರಿಕೆ ಮಾಡಿಕೊಡುವ ಮನವಿಯನ್ನು ಸಲ್ಲಿಸೋಣ. ಅವರು ನೌಕರರ ಪರವಾಗಿ ಕಾನೂನಾತ್ಮಕವಾಗಿ ಪರಿಹರಿಸಲು ಮುಂದಾಗುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.