NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರಿಗೆ ಮತ್ತೊಂದು ಟಾರ್ಚರ್‌: ಹೆಚ್ಚು ಆದಾಯ ತರುವಂತೆ ಕೆಲ ಡಿಎಂಗಳ ಒತ್ತಡ

ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಮುಷ್ಕರ ವೇಳೆ ಡ್ಯೂಟಿ ಮಾಡಿದ ಚಾಲಕ ಮತ್ತು ನಿರ್ವಾಹಕರ ಬಗ್ಗೆ ಸಾರಿಗೆ ಸಂಸ್ಥೆಯ ಕೆಲ ಅಧಿಕಾರಿಗಳು ಮೃದುಧೋರಣೆ ತಳೆದಿದ್ದಾರೆ. ಇನ್ನುಳಿದ ನೌಕರರನ್ನು ಕಂಡರೆ ಸಿಡಿದು ಬೀಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ನೇತೃತ್ವದಲ್ಲಿ ಏಪ್ರಿಲ್‌ 7ರಿಂದ 20ರವೆಗೆ ಮುಷ್ಕರ ಮಾಡಿದರು. ನಂತರ ಹೈ ಕೋರ್ಟ್‌ ಆದೇಶದಂತೆ ಡ್ಯೂಟಿಗೆ ಮರಳಿದರು. ಈ ವೇಳೆ ಆರ್‌ಟಿಪಿಸಿಆರ್‌ ತರುವಂತೆ ಡಿಪೋಗಳಲ್ಲಿ ಮೌಖಿಕ ಆದೇಶ ನೀಡಿದರು. ನೌಕರರು ಆರ್‌ಟಿಸಿಪಿಆರ್‌ ತರುವುದಕ್ಕೆ 4-5ದಿನ ತೆಗೆದುಕೊಂಡಿತು. ಈ ನಡುವೆ ರಾಜ್ಯಾಂದ್ಯಂತ ಸರ್ಕಾರ ಕೊರೊನಾ ಲಾಕ್‌ಡೌನ್‌ ಜಾರಿ ಮಾಡಿತು.

ಹೀಗಾಗಿ ಹಲವು ನೌಕರರು ಅಂದಾಜು (ಮಾಹಿತಿ ಪ್ರಕಾರ) ಶೇ.70ರಷ್ಟು ನೌಕರರು ಡ್ಯೂಟಿ ರಿಪೋರ್ಟ್‌ ಮಾಡಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಇನ್ನು ಅವರೆಲ್ಲ ಡ್ಯೂಟಿಗೆ ಬಂದಿಲ್ಲ ಎಂಬ ಕಾರಣ ನೀಡಿ ಲಾಕ್‌ಡೌನ್‌ ಸಮದಲ್ಲಿ ಅಂದರೆ ಏಪ್ರಿಲ್‌, ಮೇ, ಜೂನ್‌ ಈ ಮೂರು ತಿಂಗಳ ವೇತನವನ್ನು ಅವರಿಗೆ ಗೈರು ಹಾಜರಿ ಎಂದು ತೋರಿಸಿ ಕೊಡಲೇ ಇಲ್ಲ. ಇದರಿಂದ ಸುಮಾರು 70 ಸಾವಿರ ನೌಕರರು ಜೀವನ ನಡೆಸುವುದಕ್ಕೆ ಪರದಾಡಿದರು.

ಮನೆ ಬಾಡಿಗೆ, ವಯಸ್ಸಾದ ಅಪ್ಪ ಅಮ್ಮನ ಔಷಧ ಖರ್ಚು ಸೇರಿದಂತೆ ಜೀವನಕ್ಕೆ ಬೇಕಾದ ಆಹಾರ ವಸ್ತುಗಳನ್ನು ಕೊಳ್ಳುವುದಕ್ಕಾಗಿ ವಿಧಿ ಇಲ್ಲದೆ ಗಂಡ, ಹೆಂಡತಿ ಇಬ್ಬರು ಗಾರೆ ಕೆಲಸಕ್ಕೆ ಹೋಗಬೇಕಾಯಿತು. ಗಾರೆ ಕೆಲಸ ಮಾಡುವ ಸ್ಥಳದಲ್ಲಿ ನಾವು ಸಾರಿಗೆ ನೌಕರರು ಎಂದು ಹೇಳಿಕೊಂಡರೆ ಎಲ್ಲಿ ಕೆಲಸ ಕೊಡುವುದಿಲ್ಲವೋ ಎಂದು ಹೆದರಿ ಅನಾಥರ ರೀತಿಯಲ್ಲಿ ಕೆಲಸ ಮಾಡಬೇಕಾಯಿತು. ಇನ್ನು ಕೆಲ ನೌಕರರು ಇದ್ದ ಚಿನ್ನಾಭರಣಗಳನ್ನು ಗಿರಿವಿ ಇಟ್ಟರೆ, ಇನ್ನೂ ಕೆಲವರ ಜೀವನ ಭಾರಿ ದುಸ್ತರವಾದ್ದರಿಂದ ತಾಳಿ ಸರವನ್ನು ಅಡವಿಟ್ಟು ಜೀವನ ಸಾಗಿಸುತ್ತಿದ್ದಾರೆ.

ಇನ್ನು ಮೂರು ತಿಂಗಳ ಬಳಿಕ ಕರ್ತತ್ಯಕ್ಕೆ ಹೋದ ನೌಕರರು ಈಗ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ವಜಾಗೊಂಡ ಸುಮಾರು 2900 ಮಂದಿ ನೌಕರರು ಈಗಲೂ ಗಾರೆ ಕೆಲಸ ಸೇರಿದಂತೆ ಇತರ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಇದರಿಂದ ಬೇಸರಗೊಂಡಿರುವ ನೌಕರರು ಜೀವದ ಹಂಗು ತೊರೆಯುವ ಆಲೋಚನೆಯನ್ನು ಮಾಡಿದ್ದಾರೆ. ಆದರೆ ಜೀವನ ಇಷ್ಟೇ ಅಲ್ಲ ಇನ್ನು ಇದೆ ನಮಗೂ ಒಳ್ಳೆಕಾಲ ಮರುತ್ತದೆ ಎಂದು ಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದಾರೆ.

ಈ ನಡುವೆ ಡ್ಯೂಟಿಗೆ ಮರಳಿದ ನೌಕರರಿಗೆ ಕೆಲ ಡಿಪೋಗಳ ವ್ಯವಸ್ಥಾಪಕರು ಇಪಿಕೆಎಂ ( ಪ್ರತಿ ಕಿಲೋ ಮೀಟರ್‌ ಗಳಿಕೆ- Earnings Per Kilo Metre) ಬರುತ್ತಿಲ್ಲ ಎಂದು ನಿರ್ವಾಹಕರಿಗೆ ನೋಟಿಸ್‌ ನೀಡುತ್ತಿದ್ದಾರೆ. ಜತೆಗೆ ಇಪಿಕೆಎಂ ಬರದಿರುವುದಕ್ಕೆ ಮೂರು ದಿನದಲ್ಲಿ ಸಮಜಾಯಿಷಿ ನೀಡಬೇಕು ಇಲ್ಲದಿದ್ದಲ್ಲಿ ನಿಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಒತ್ತಡ ಹಾಕುತ್ತಿದ್ದಾರೆ.

ಕೊರೊನಾದ ಈ ಸಮಯದಲ್ಲಿ ಜನರು ಬಸ್‌ ಹತ್ತುವುದಕ್ಕೆ ಹೆದರುತ್ತಿದ್ದಾರೆ. ಈ ನಡುವೆ ನೀವು ಏನು ಮಾಡುತ್ತೀರೋ ಗೊತ್ತಿಲ್ಲ ನಮಗೆ ಇಪಿಕೆಎಂ ತರಬೇಕು ಎಂದು ಕೆಲ ಡಿಎಂಗಳು ಒತ್ತಡ ಹಾಕುತ್ತಿದ್ದಾರೆ. ಇನ್ನು ಒಂದು ಕಡೆ ಮುಷ್ಕರ ಸಮಯದಲ್ಲಿ ಕೆಲಸ ಮಾಡಿದ ನೌಕರರಿಗೆ ಇದಾವುದನ್ನು ಕೇಳುತ್ತಿಲ್ಲ ಅವರು ಎಷ್ಟು ಇಪಿಕೆಎಂ ತರುತ್ತಾರೋ ಅದೇ ಸರಿ ಎಂಬ ರೀತಿ ನಡೆದುಕೊಳ್ಳುತ್ತಾರೆ. ಆದರೆ ನಮಗೆ ಮಾತ್ರ ಈ ಕಾನೂನು ಏಕೆ ಎಂದು ಹಲವು ನೌಕರರು ಡಿಎಂಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಕೆಲ ಡಿಪೋಗಳಲ್ಲಿ ಬೆಳಗ್ಗೆಯಿಂದ ಡ್ಯೂಟಿ ಕೊಡಿ ಎಂದು ಮಧ್ಯಾಹ್ನದ ವರೆಗೂ ಕಾದು ಗೋಗರೆದು ಡ್ಯೂಟಿ ತೆಗೆದುಕೊಳ್ಳಬೇಕಾಗಿದೆ ಎಂದು ನೌಕರರು ಹೇಳುತ್ತಿದ್ದಾರೆ. ಡ್ಯೂಟಿ ಮಾಡಲು ಹೋದ ಕೆಲ ನೌಕರರನ್ನು ಬೇಕಂತಲೇ ಮುಂಜಾನೆಯಿಂದ ಮಧ್ಯಾಹ್ನದ ವರೆಗೂ ಕಾಯಿಸಿ ನಂತರ ಡ್ಯೂಟಿ ಕೊಡುತ್ತಿದ್ದಾರೆ ಎಂಬ ಆರೋಪವು ಕೆಲ ಘಟಕ ವ್ಯವಸ್ಥಾಪಕರ ಮೇಲೆ ಇದೆ.

 ಒಂದೇ ರೂಟ್‌ನಲ್ಲಿ ಒಂದು ವಾರ ಓಡಿದ ಬಸ್‌ನಲ್ಲಿ ನಿರ್ವಾಹಕರು ಬದಲಾವಣೆಯಾದ ಸಮಯದಲ್ಲಿ ಒಬ್ಬರು ಹೆಚ್ಚಿನ ಇಪಿಕೆಎಂ ತರುತ್ತಾರೆ. ಅದೇ ರೂಟ್‌ನಲ್ಲಿ ಅದೇ ಸಮಯದಲ್ಲಿ ಅದೇ ಬಸ್‌ನ ಬದಲಿ ನಿರ್ವಾಹಕರು ಇಪಿಕೆಎಂ ಕಡಿಮೆ ತರುತ್ತಾರೆ. ಹೀಗೆ ಆದಾಯ ಕಡಿಮೆ ತರುವ ನಿರ್ವಾಹಕರಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡುವ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ. ಆದರೆ ಯಾವುದೇ ದಂಡ ಹಾಕುವುದಿಲ್ಲ. ಮತ್ತೆ ನಿರ್ವಾಹಕ ಕಡಿಮೆ ಆದಾಯ ತಂದರೆ  ಮೂರನೇ ಬಾರಿ ನೋಟಿಸ್‌ ನೀಡಿದ ನಂತರ ಅವರ ರೂಟ್‌ ಬದಲಾವಣೆ ಮಾಡಲಾಗುವುದು.

l ಮಂಜುನಾಥ್‌, ಘಟಕ ವ್ಯವಸ್ಥಾಪಕರು, ಕೆಎಸ್‌ಆರ್‌ಟಿಸಿ, ಕುಣಿಗಲ್‌

Leave a Reply

error: Content is protected !!
LATEST
KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ