NEWSನಮ್ಮರಾಜ್ಯರಾಜಕೀಯ

ನೆಹರೂ ದೇಶಕ್ಕಾಗಿ ಆಸ್ತಿಯನ್ನೇ ಕೊಟ್ಟಿದ್ದಾರೆ, ಸಿ.ಟಿ.ರವಿ ನೀವೇನು 10 ಪೈಸೆ ಕೊಟ್ಟಿದ್ದೀರಾ : ಎಚ್‌.ವಿಶ್ವನಾಥ್‌ ಕಿಡಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಪಕ್ಷ ರಾಜಕಾರಣಕ್ಕೆ ಸೋಲಾಗಿದೆ. ರಾಕ್ಷಸ ರಾಜಕಾರಣ ಆರಂಭವಾಗಿದೆ. ಪಕ್ಷದ ಆಂತರಿಕ ಪ್ರಜಾಪ್ರಭುತ್ವ ನಶಿಸಿದೆ ಎಂದು ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಎಚ್‌.ವಿಶ್ವನಾಥ್‌ ವಿಷಾದಿಸಿದರು.

ನಗರದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೆಹರೂ ಅವರು ದೇಶಕ್ಕಾಗಿ ಆಸ್ತಿಯನ್ನೇ ಕೊಟ್ಟಿದ್ದಾರೆ. ಸಿ.ಟಿ.ರವಿ ನೀವೇನು 10 ಪೈಸೆ ಕೊಟ್ಟಿದ್ದೀರಾ ಎಂದು  ಬಿಜೆಪಿ ಶಾಸಕನ ವಿರುದ್ಧವೇ ಹರಿಹಾಯ್ದರು.

ನೀವೇನು ಕೊಟ್ಟಿದ್ದೀರಿ ಎಂದು ಹೇಳಿ? ಈ ರೀತಿ ಅಪ್ರಯೋಜಕ ಟೀಕೆಗಳನ್ನು ಮಾಡಲು ನಾಚಿಕೆ ಆಗಲ್ವ ನಿಮಗೆ ಎಂದು  ಕಿಡಿಕಾರಿದರು.

ನೆಹರೂ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮೊದಲು ಅವರ ಬಗ್ಗೆ ಸಿ.ಟಿ.ರವಿ ಓದಿಕೊಳ್ಳಲಿ. ನೆಹರೂ ಅವರು ಅಧಿಕಾರದ ಅವಧಿಗಿಂತ ಹೆಚ್ಚಿನ ಕಾಲ ಜೈಲಿನಲ್ಲಿದ್ದರು. ಅವರ ಇಡೀ ಕುಟುಂಬವೇ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿತ್ತು. ದೇಶಕ್ಕೆ ಶಾಂತಿ ಸಂದೇಶ ಸಾರಿದವರು ನೆಹರೂ ಇವರ ಬಗ್ಗೆ ಲಘುವಾಗಿ ರವಿ ಮಾತಾಡಿರುವುದು ಸರಿಯಲ್ಲ. ಇದು ಬಿಜೆಪಿ ಪಕ್ಷಕ್ಕೂ ಶೋಭೆ ತರುವುದಿಲ್ಲ ಎಂದು ಹೇಳಿದರು.

ಹುಕ್ಕಾ, ಬಾರ್ ಏನಿದು. ಅಯ್ಯೊಯ್ಯೊ ದೇವಾ ಭಾರತದ ಅಸ್ಮಿತೆ ಗೌರವವನ್ನು ಕಳೆಯಬೇಡಿ. ನೆಹರೂ ಭಾರತದ ಅಸ್ಮಿತೆ. ಇನ್ನಾರನ್ನೋ ರಮಿಸಲು, ಒಬ್ಬರನ್ನು ತೆಗಳುವುದು ಖಂಡನೀಯ. ನಿಮ್ಮ ಹೇಳಿಕೆ ವಾಪಸ್ ಪಡೆದು ಸಮಜಾಯಿಷಿ ಕೊಡಿ ಎಂದು ಒತ್ತಾಯಿಸಿದರು.

ಇನ್ನು ನೆಹರೂ ಅವರು ಕಾಲವಾದಾಗ ವಾಜಪೇಯಿ ಮರುಗಿದ್ದರು. ನೆಹರೂ ಆಡಳಿತವನ್ನು ಹೊಗಳಿದ್ದರಲ್ಲದೇ, ರಾಜಕುಮಾರನೊಬ್ಬನನ್ನು ಭಾರತ ಕಳೆದುಕೊಂಡಿದೆ ಎಂದಿದ್ದರು. ಈ ಮಾತುಗಳು ಸಿ.ಟಿ.ರವಿ ಅವರಿಗೆ ಅರ್ಥವಾಗಬೇಕು ಎಂದು ಕುಟುಕಿದರು.

ರವಿ ವಿರುದ್ಧ ಮಾತನಾಡಲು ಹೋಗಿ ಪ್ರಿಯಾಂಕ ಖರ್ಗೆ, ವಾಜಪೇಯಿ ಅವರನ್ನು ‘ಕುಡುಕ’ ಎಂದುಬಿಟ್ಟರು. ಕವಿ ಹೃದಯದ ವಾಜಪೇಯಿ, ಅವರ ಭಾಷಣ ಕೇಳಿ, ಬರಹಗಳನ್ನು ಓದಿ. ಅಂತಹ ವಾಜಪೇಯಿ ಬಗ್ಗೆ ಈ ರೀತಿ ಮಾತಾನಾಡುವುದು ಸರಿಯಲ್ಲ. ನೆಹರೂ ಹಾಗೆ ವಾಜಪೇಯಿ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವವಿದೆ. ಅವರ ಬಗ್ಗೆ ಕೀಳಾಗಿ ಮಾತನಾಡುವ ನಿಮಗೆ ಬುದ್ದಿ ಇದಿಯಾ? ನಿಮ್ಮ ತಂದೆ ನೋಡಿ‌ ಕಲಿತಿಕೊ ಎಂದು ಪ್ರಿಯಾಂಕಾ ಖರ್ಗೆ ಕಿವಿ ಹಿಂಡಿದರು.

ಏನೇನೋ ಮಾತನಾಡುವುದು ಸರಿಯಲ್ಲ. ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ. ಬೇಕಾದರೆ ಅವರ ಆಡಳಿತವನ್ನು ಟೀಕಿಸಿ. ಇಂತಹ ಮಾತುಗಳು ಬರುತ್ತಿದ್ದರೂ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಬಿಎಸ್‌ವೈ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಇವರೆಲ್ಲಾ ಬಾಯಿ ಬಿಡುತ್ತಿಲ್ಲ‌. ಬಾಯಿ ಮುಚ್ಚಿ ಎಂದು ಹೇಳುವ ನೈತಿಕತೆ ಕಳೆದು ಕೊಂಡಿದ್ದೀರಾ ನೀವು ಎಂದು ವಾಗ್ದಾಳಿ ನಡೆಸಿದರು.

ಖಾತೆ ವಿಚಾರವಾಗಿ ಸಚಿವರಲ್ಲಿ ಎದ್ದಿರುವ ಅಸಮಾಧಾನ ಬಗ್ಗೆ ಪ್ರತಿಕ್ರಿಯಿಸಿ, ಇಂತದ್ದೇ ಖಾತೆ ಬೇಕು ಎನ್ನುವುದಕ್ಕೆ ನೀವೇನು ತಜ್ಞರೆ. ಎಲ್ಲರೂ ದುಡ್ಡಿರುವ ಖಾತೆ ಬೇಕು ಎಂದರೆ ಹೇಗೆ. ನಮ್ಮಲ್ಲಿ ಎಲ್ಲ ಕ್ಯಾಬಿನೆಟ್ ಸಚಿವರೆ ಆಗಿದ್ದಾರೆ. ಇವರೆಲ್ಲ ಸರ್ಕಾರದ ಭಾಗ. ಅದನ್ನೂ ಅರ್ಥ ಮಾಡಿಕೊಳ್ಳದೆ ಹೊದರೆ ಹೇಗೆ.

ಪ್ರತಿ ಇಲಾಖೆಯಲ್ಲಿಯೂ ಕೆಲಸ ಇದೆ. ಬೊಮ್ಮಾಯಿ ಕೆಲಸ ಶುರು ಮಾಡಲಿ. ವಿಭಿನ್ನವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಹಕಾರ ಕೊಡಿ. ರಾಜ್ಯದ ಹಿತಾಸಕ್ತಿ ಮುಖ್ಯ. ಖಾತೆ ಕಿತ್ತಾಟ ಬಿಡಿ. ಕೊಟ್ಟ ಖಾತೆಯಲ್ಲಿ ಸಾಧಿಸಿ ತೋರಿಸಿ ಎಂದು ಸಲಹೆ ನೀಡಿದರು.

ರಾಜಕಾರಣಿಗಳ ಆರೋಪ ಪ್ರತ್ಯಾರೋಪಗಳಲ್ಲಿ ಕನ್ನಡ ಭಾಷೆ ಕೊಲೆಯಾಗುತ್ತಿದೆ. ನಾವಾಡುವ ಭಾಷೆ ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ. ಇಂಥವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಯಾವ ಪಕ್ಷವೂ ಇಲ್ಲ. ಕನಿಷ್ಠ ಇದು ಸರಿಯಲ್ಲ ಎಂದು ಹೇಳಬೇಕು ಎಂದು ಸಲಹೆ ನೀಡಿದರು.

Leave a Reply

error: Content is protected !!
LATEST
BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಹಾಸನಾಂಬೆ ದರ್ಶನ ಅಂತ್ಯ-ಹರಿದು ಬಂತ್ತು ₹9 ಕೋಟಿಗೂ ಅಧಿಕ ಆದಾಯ