CrimeNEWSನಮ್ಮರಾಜ್ಯ

ಹಸು, ಕರು ಮೇಲೆ ಚಿರತೆ ದಾಳಿ: ಪ್ರಾಣದ ಹಂಗು ತೊರೆದು ಆಕಳುಗಳ ಕಾಪಾಡಿದ ಮಾಲೀಕ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಎಂ.ಬಿ.ಅಯ್ಯನಹಳ್ಳಿ (ಕೂಡ್ಲಿಗಿ): ಹಸು ಮತ್ತು ಹಸುವಿ ಕರು ಮೇಲೆ ದಾಳಿ ಮಾಡಿದ ಚಿರತೆಯನ್ನು ಬಡಿದೋಡಿಸುವ ಮೂಲಕ ತನ್ನ ಪ್ರಾಣದ ಹಂಗು ತೊರೆದು ಮಾಲೀಕ ಆಕಳುಗಳನ್ನು ರಕ್ಷಿಸಿದ್ದಾರೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಎಂ.ಬಿ.ಅಯ್ಯನಹಳ್ಳಿಯ ಹೃದಯ ಭಾಗದಲ್ಲಿರುವ, ವೃಷಭೇಂದ್ರಾಚಾರಿ ಅವರ ಕಣದಲ್ಲಿ ಕಟ್ಟಿದ್ದ ಹಸುವಿನ ಮೇಲೆ ಅಗಸ್ಟ್15ರ ತಡರಾತ್ರಿ ಚಿರತೆ ದಾಳಿ ಮಾಡಿದೆ. ಈ ವೇಳೆ ಹಸುವಿನ ಚೀರಾಟ ಕೇಳಿದ ಕೂಡಲೇ ವೃಷಭೇಂದ್ರಾಚಾರಿ ಮತ್ತು ಅವರ ಸಂಬಂಧಿ ಮಾನಾಚಾರಿ ಕೂಡಲೇ ಉದ್ದನೆಯ ಕೋಲೊಂದನ್ನು ಕೈಯಲ್ಲಿಡಿದು ಬೆದರಿಸುವ ಮೂಲಕ ಚಿರತೆಯನ್ನು ಹಿಮ್ಮೆಟ್ಟಸಿದರು.

ಈ ಮೂಲಕ ತಮ್ಮ ಪ್ರಾಣದ ಹಂಗು ತೊರೆದು, ಚಿರತೆಯನು ಓಡಿಸೋ ಮೂಲಕ ಸಂಬಂಧಿಯ ಆಕಳು ಮತ್ತು ಆಕಳಿನ ಕರುವನ್ನು ಕಾಪಾಡಿದ್ದಾರೆ ಮಾನಪ್ಪಾಚಾರಿ.

ಚಿರತೆಗಳನ್ನು ಹಿಡಿಯುವಂತೆ ಒತ್ತಾಯ: ಈ ಭಾಗದಲ್ಲಿರುವ ತಾಲೂಕಿನ ಹಲವೆಡೆಗಳಲ್ಲಿ ಕೆಲ ತಿಂಗಳುಗಳಿಂದ ನಿರಂತರವಾಗಿ ಚಿರತೆ ದಾಳಿ ಮಾಡುತಿರುವುದು ಹೆಚ್ಚಾಗಿದೆ. ಆ ಚಿರತೆಗಳನ್ನು ಸೆರೆ ಹಿಡಿದು ಕಾಡಿಗೆ ಬಿಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಚಿರತೆ ಸೆರೆ ಹಿಡಿಯುವಂತೆ ತಾಲೂಕಿನಾದ್ಯಂತ ಜನರ ಆಗ್ರಹ ವ್ಯಕ್ತವಾಗುತ್ತಿದೆ. ಆದರೆ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖಾಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಹಸುಗಳು, ಕುರಿಗಳು,ಸಾಕು ಪ್ರಾಣಿಗಳು ಚಿರತೆ ದಾಳಿಗೆ ತುತ್ತಾಗಿದ್ದು ತಾಲೂಕಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ರೈತರು ಕೃಷಿ ಚಟುವಟಿಕೆಗಳಿಗಾಗಿ ಹೊಲಗಳಿಗೆ ತೆರಳುವುದು ಸಾಮಾನ್ಯ, ಈ ಸಂದರ್ಭದಲ್ಲಿ ಜರುಗಬಹುದಾದ ಜೀವ ಹಾನಿಗೆ ಇಲಾಖಾಧಿಕಾರಿಯೇ ನೇರಹೊಣೆ ಎಂದು ಮುಖಂಡರು ಗ್ರಾಮಗಳ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಮಾನವ ಜೀವ ಹಾನಿಗಳು ಸಂಭವಿಸುವ ಮುನ್ನವೇ ಜಿಲ್ಲಾಡಳಿತ ಶೀಘ್ರದಲ್ಲಿ ಚಿರತೆಗಳನ್ನು ಸೆರೆಹಿಡಿದು, ಅರಣ್ಯ ಪ್ರದೇಶಕ್ಕೆ ಬಿಡಬೇಕು ಎಂದು ತಾಲೂಕಿನ ಬಹುತೇಕ ಗ್ರಾಮೀಣ ರೈತರು ಮತ್ತು ವಂದೇ ಮಾತರಂ ಜಾಗೃತಿ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಒಂದು ವೇಳೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

error: Content is protected !!
LATEST
BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಹಾಸನಾಂಬೆ ದರ್ಶನ ಅಂತ್ಯ-ಹರಿದು ಬಂತ್ತು ₹9 ಕೋಟಿಗೂ ಅಧಿಕ ಆದಾಯ