NEWSನಮ್ಮಜಿಲ್ಲೆನಮ್ಮರಾಜ್ಯಲೇಖನಗಳು

ವಜಾಗೊಂಡ ಸಾರಿಗೆ ನೌಕರರಿಗೆ ಒಂದು ಕಡೆ ಸಿಹಿ ಮತ್ತೊಂದು ಕಡೆ ಕಹಿ: ಮಾನವೀಯತೆಯನ್ನೇ ಮರೆತ ಅಧಿಕಾರಿಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏಪ್ರಿಲ್‌ 7ರಿಂದ 20ರವರೆಗೆ ಸಾರಿಗೆಯ 1.30 ಲಕ್ಷ ನೌಕರರಲ್ಲಿ ಶೇ.99.99 ನೌಕರರು  ಮುಷ್ಕರ ನಡೆಸಿದ ವೇಳೆ ವಜಾ ಮಾಡಿರುವ ತರಬೇತಿ ನೌಕರರ ವಜಾ ಆದೇಶವನ್ನು ರದ್ದುಗೊಳಿಸಿ ಹೊಸದಾಗಿ ಸೇರ್ಪಡೆಗೊಳಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿ ಮತ್ತು ಪರಿಸರ ವಿಭಾಗದ  ನಿರ್ದೇಶಕ ಟಿ. ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.

ಆದರೆ ಮುಷ್ಕರ ವೇಳೆ ವಜಾಗೊಂಡ ತರಬೇತಿಯ ಎಲ್ಲಾ ನೌಕರರ ವಜಾ ಆದೇಶ ರದ್ದು ಮಾಡಿ ಒಟ್ಟಿಗೆ ತೆಗೆದುಕೊಳ್ಳುವ ಬದಲಿಗೆ ಒಬ್ಬೊಬ್ಬರನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಲಾಗುತ್ತಿದೆ. ಆದರೆ ಎಲ್ಲರನ್ನು ಒಂದೇ ನಿಯಮದಡಿ ಹೊಸದಾಗಿ ಸೇರ್ಪಡೆಗೊಳಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಒಂದೇ ನಿಯಮದ ಕಾಪಿಯಲ್ಲಿ ನೌಕರರ ಹೆಸರನ್ನು ಬದಲಾಯಿಸಿ ಆದೇಶದ ಪ್ರತಿಗಳನ್ನು ಕೊಡುತ್ತಿದ್ದಾರೆ.

ಇದರ ಬದಲಿಗೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಅವರ ಹೆಸರುಗಳನ್ನು ಸೂಚಿಸಿದ್ದರೆ ಸಮಯ ಮತ್ತು ಅಧಿಕಾರಿಗಳ ಶ್ರಮವು ಉಳಿಯುತ್ತಿತ್ತಲ್ಲವೇ? ಹೀಗೆ ವೈಯಕ್ತಿಕವಾಗಿ ಏಕೆ ಅಧಿಕಾರಿಗಳು ಅದೇ ನಿಯಮವನ್ನು ಕಾಪಿ ಮಾಡಿ ಹೆಸರು ಬದಲಾಯಿಸುವ ಮೂಲಕ ನೌಕರರನ್ನು ತೆಗೆದುಕೊಂಡಿದ್ದಾರೆ. ಇದರ ಉದ್ದೇಶವಾದರೂ ಏನು ಎಂಬ ಅನುಮಾನ ಮೂಡುತ್ತಿದೆ.

ವಜಾಗೊಂಡಿರುವ ತರಬೇತಿ ನೌಕರರ ವಜಾ ಆದೇಶ ರದ್ದುಗೊಳಿಸಿ ಹೊಸದಾಗಿ ಸೇರ್ಪಡೆಗೊಳಿಸಿರುವ ಆದೇಶದ ಪ್ರತಿಯಲ್ಲಿ ಈ ಕೆಳಗಿನಂತೆ ಇದೆ.

ಸಂಸ್ಥೆಯ ತರಬೇತಿ ಚಾಲಕ-ಕಂ-ನಿರ್ವಾಹಕರ ಆಯ್ಕೆ ಪಟ್ಟಿಯಿಂದ ಉಲ್ಲೇಖ – (3) ರನ್ವಯ ತೆಗೆದು ಹಾಕಿದ್ದು, ಉಲ್ಲೇಖ (6)ರಂತೆ ಮರು ನೇಮಕಾತಿ ಮಾಡುವಂತೆ ದಯಾಯಾಚನ ಮನವಿ ಸಲ್ಲಿಸಿರುತ್ತಾರೆ.

ಮನವಿದಾರರು ಪೂರ್ವಾನುಮತಿ  ಪಡೆಯದೇ ವಿವಿಧ ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿದ್ದ ಮುಷ್ಕರ ಸಂದರ್ಭದಲ್ಲಿ ಅನಧಿಕೃತ ಗೈರು ಹಾಜರಾಗುವ ಮೂಲಕ ಆಡಳಿತಾತ್ಮಕ ನಿರ್ದೇಶನಗಳನ್ನು ಹಾಗೂ  ನಿಗಮದ ನೇಮಕಾತಿ ಷರತ್ತು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿ ನಿಗಮದ ದೈನಂದಿನ ಮಾರ್ಗ ಕಾರ್ಯಾಚರಣೆಗೆ ಅಡಚಣೆ ಉಂಟಾದ ಹಿನ್ನೆಲೆಯಲ್ಲಿನೇಮಕಾತಿ ಪ್ರಾಧಿಕಾರಸ್ಥರು ಮನವಿದಾರರ ಹೆಸರನ್ನು ಆಯ್ಕೆ ಪಟ್ಟಿಯಿಂದ ತೆಗೆದು ಹಾಕಿರುತ್ತಾರೆ.

ಮನವಿದಾರರು ಮನವಿಯಲ್ಲಿ ತಮ್ಮ ವೈಯಕ್ತಿಕ ಕಾರಣಗಳಿಂದ ಸ್ವಂತ ಗ್ರಾಮಕ್ಕೆ ತೆರಳಿದ್ದು, ಕೋವಿಡ್‌ -19 ರ ಹಿನ್ನೆಲೆಯಲ್ಲಿ ಪುನಃ  ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗಿಲ್ಲವೆಂದು ತನ್ನನ್ನು ಏಕಪಕ್ಷೀಯವಾಗಿ ಕೆಲಸದಿಂದ ತೆಗೆದು ಹಾಕಿರುವುದಾಗಿ, ಇದರಿಂದ ಕುಟುಂಬ ನಿರ್ವಹಣೆಗೆ ತೊಂದರೆ ಯಾಗಿರುವುದಾಗಿ ತಿಳಿಸಿ ಉಚ್ಚನ್ಯಾಯಾಲಯದ ನಿರ್ದೇಶನದನ್ವಯ ಸೇರ್ಪಡೆಗೊಳಿಸಲು ಕೋರಿರುತ್ತಾರೆ.

ಕಡತದಲ್ಲಿ ಲಭ್ಯವಿರುವ ದಾಖಲೆಗಳಾದ ಅಪರಾಧ ಇತಿಹಾಸ ಪಟ್ಟಿಯನ್ನು ಪರಿಶೀಲಿಸಲಾಗಿ ಮನವಿ ದಾರರು ತರಬೇತಿ ಅವಧಿಯಲ್ಲಿ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿ ಆಗದಿರುವುದು ದಾಖಲೆಗಳಿಂದ ಕಂಡುಬಂದಿರುತ್ತದೆ. ಆದಕಾರಣ ಮಾನವೀಯತೆ ದೃಷ್ಟಿಯಿಂದ ಮನವಿದಾರರಿಗೆ ಮತ್ತೊಂದು ಅವಕಾಶ ನೀಡುವುದು ಸೂಕ್ತವೆಂದು ಅಭಿಪ್ರಾಯಕ್ಕೆ ಬಂದು ಮನವಿ ದಾರರು ಪ್ರಸ್ತಾಪಿಸಿರುವ ಅಂಶಗಳನ್ನು ನೇಮಕಾತಿ ಪ್ರಾಧಿಕಾರಸ್ಥರ ಆದೇಶ ಹಾಗೂ ಕಡತದಲ್ಲಿನ ದಾಖಲೆಗಳನ್ನು ಪರಿಶೀಲಿಸಿ ಕೆಳಗಿನಂತೆ ಆದೇಶಿಸುತ್ತೇನೆ.

ಆದೇಶ

ದಯಾಯಾಚನಾ ಮನವಿ ಸಂಬಂಧ ಸಂಸ್ಥೆಯಲ್ಲಿ ಚಾಲ್ತಿಯಲ್ಲಿರುವ ಸುತ್ತೋಲೆ … ಅನ್ವಯ ಪ್ರದತ್ತವಾಗಿರುವ  ಅಧಿಕಾರವನ್ನು ಚಲಾಯಿಸುತ್ತಾ, ಈ ಹೆಸರಿನ ….. ಮಾಜಿ ತರಬೇತಿ ಚಾಲಕ-ಕಂ-ನಿರ್ವಾಹಕ / ನಿರ್ವಾಹಕರನ್ನು ಆಯ್ಕೆ ಪಟ್ಟಿಯಿಂದ ತೆಗೆದು ಹಾಕಿರುವ ಆದೇಶವನ್ನು ರದ್ದುಗೊಳಿಸಿ ಹೊಸದಾಗಿ ಆಯ್ಕೆಪಟ್ಟಿಗೆ ಪುನರ್‌ ಸೇರ್ಪಡೆಗೊಳಿಸಿದೆ.

ಮುಂದುವರಿದು ಸುತ್ತೋಲೆ ಸಂಖ್ಯೆ 1688, ಮಾರ್ಚ್ 19 – 2021 ರ ಅನ್ವಯ ಪುನರ್‌ ಸೇರ್ಪಡೆಗೊಂಡ ದಿನಾಂಕದಿಂದ ಒಂದು ವರ್ಷ ತರಬೇತಿಯಲ್ಲಿ ಇರುತ್ತಾರೆ. ತತ್ಪರಿಣಾಮವಾಗಿ ಹಿಂದಿನ ತರಬೇತಿ ಅವರಿಗೆ ಯಾವುದೇ ಸೇವಾ/ ಆರ್ಥಿಕ ಸೌಲಭ್ಯಗಳಿಗೆ ಅರ್ಹರಿರುವುದಿಲ್ಲ.

ಹೀಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿ ಮತ್ತು ಪರಿಸರ ವಿಭಾಗದ  ನಿರ್ದೇಶಕ ಟಿ. ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.

ಆದರೆ, ನೌಕರರ ಈ ಹಿಂದಿನ ಒಂದು ವರ್ಷದ ಸೇವೆಯನ್ನೇ ಪರಿಗಣಿಸದಿರುವುದು ನ್ಯಾಯ ಸಮ್ಮತವಲ್ಲ: ಹೀಗೆ ವಜಾಮಾಡಿದ ಪ್ರತಿಯೊಬ್ಬ ತರಬೇತಿ ನೌಕರರನ್ನು ಪುನರ್‌ ಸೇರ್ಪಡೆಗೊಳಿಸಿಕೊಂಡು ಅವರು ಈ ಹಿಂದೆ ಸಲ್ಲಿಸಿರುವ ಸೇವೆಗೆ ಯಾವುದೇ ಮನ್ನಣೆ ನೀಡದಿರುವುದು  ಈ ನೌಕರರು ಮತ್ತೆ ಒಂದು ವರ್ಷ ತರಬೇತಿ ನೌಕರರಾಗಿಯೇ ಉಳಿಯುವಂತಾಗಿದೆ.

ಇದು ಸರಿಯೇ ಎಂದು ಸಂಬಂಧಪಟ್ಟ ಅಧಿಕಾರಿಗಳು ಒಮ್ಮೆ ಮಾನವೀಯತೆ ನೆಲಗಟ್ಟಿನಲ್ಲಿ ನಿಂತು ಯೋಚಿಸಬೇಕಿದ್ದು, ಆ ತರಬೇತಿ ನೌಕರರ ಹಿಂದಿನ ಸೇವೆಯನ್ನು ಪರಿಗಣಿಸಬೇಕು ಎಂಬುವುದು ಸಮಸ್ತ ನಾಡಿನ ಜನರ ಪರವಾಗಿ ನಮ್ಮದೊಂದು ಮನವಿ.

Leave a Reply

error: Content is protected !!
LATEST
KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ