ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯ ಯೊಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಎರಡನೇ ಜಾಮೀನು ಸಿಕ್ಕಿದೆ.
ಇದೇ ಕೇಸ್‌ಗೆ ಸಂಬಂಧಿಸಿದ ಸಾಕ್ಷ್ಯ ನಾಶ ಪ್ರಕರಣದಲ್ಲಿ ಜನ ಪ್ರತಿನಿಧಿಗಳ ಕೋರ್ಟ್ ಈಗಾಗಲೇ ಜಾಮೀನು ನೀಡಿದೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ವಿನಯ್ ಕುಲಕರ್ಣಿ ಶನಿವಾರ ಬಿಡುಗಡೆ ಆಗುವ ನಿರೀಕ್ಷೆ ಇದೆ.
ಒಂದು ವೇಳೆ ಕೋರ್ಟ್ ನ ಆದೇಶ ಪ್ರತಿ ಜೈಲಿಗೆ ಇವತ್ತೇ ತಲುಪಿದ್ರೆ ಅವರು ಇಂದೇ ಬಿಡುಗಡೆ ಆಗುವ ಸಾಧ್ಯತೆ ಇದೆ. ಸಾಕ್ಷ್ಯ ನಾಶ ಪ್ರಕರಣದಲ್ಲಿ ಕೆಳ ಹಂತದ ನ್ಯಾಯಾಲಯದಿಂದ ನಿನ್ನೆ ಜಾಮೀನು ಸಿಕ್ಕಿದೆ.
ಇನ್ನು ಜಾಮೀನು ಸಿಕ್ಕರೂ ಕೂಡ ಅವರು ಧಾರವಾಡ ಜಿಲ್ಲೆಗೆ ಹೋಗುವಂತಿಲ್ಲ ಮತ್ತು ವಾರಕ್ಕೆ ಎರಡು ಬಾರಿ ಸಿಬಿಐ ತನಿಖಾಧಿಕಾರಿ ಮುಂದೆ ಹಾಜರಾಗಿ ಸಹಿ ಹಾಕಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.
ಇನ್ನೂ ಕೋರ್ಟ್‌ನ ಆದೇಶದ ಪ್ರತಿ ಪೋಸ್ಟ್ ಮೂಲಕ ಜೈಲಿಗೆ ತಲುಪಬೇಕು. ಆನಂತರವಷ್ಟೇ ಅವರು ಬಿಡುಗಡೆ ಆಗುತ್ತಾರೆ. ಇಂದು ರಜೆ ದಿನವಾದ ಕಾರಣ ಶೂರಿಟಿ ನೀಡಲು ಸಾಧ್ಯವಿಲ್ಲ ಎನ್ನಲಾಗಿದ್ದು, ಇಂದು ವಿನಯ್‍ಕುಲಕರ್ಣಿ ಬಿಡುಗಡೆ ಸಾಧ್ಯವಿಲ್ಲ ಹಾಗಾಗೀ ಅವರು ನಾಳೆಯೇ ಬಿಡುಗಡೆಯಾಗುವ ಸಂಭವವಿದೆ ಎಂದು ಹೇಳಲಾಗಿದೆ.
ಹೀಗಾಗಿ ವಿನಯ್‍ಕುಲಕರ್ಣಿ ಇರುವ ಬೆಳಗಾವಿಯ ಹಿಂಡಲಗ ಜೈಲಿಗೆ ಒದಗಿಸಲಾಗಿದ್ದ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.