NEWSದೇಶ-ವಿದೇಶ

ತೆಲಂಗಾಣ ಸಾರಿಗೆ ಎಂಡಿಯಾಗಿ ಕನ್ನಡಿಗ ವಿ.ಸಿ.ಸಜ್ಜನರ್‌ ನೇಮಕ

ವಿಜಯಪಥ ಸಮಗ್ರ ಸುದ್ದಿ

ಹೈದರಾಬಾದ್ : ತೆಲಂಗಾಣ ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ 1996 ಬ್ಯಾಚ್‌ನ ಐಪಿಎಸ್ ಅಧಿಕಾರಿ ಕನ್ನಡಿಗರಾದ ವಿಶ್ವನಾಥ. ಸಿ. ಸಜ್ಜನರ್ ಅವರನ್ನು ಬುಧವಾರ ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಸರ್ಕಾರದ ಮುಖ್ಯಕಾರ್ಯದರ್ಶಿ ಸೋಮೇಶ ಕುಮಾರ್‌ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಸಜ್ಜನರ ಅವರ ಸೇವೆ ಗುರುತಿಸಿ ಸಾರಿಗೆ ಇಲಾಖೆಯಲ್ಲಿ ಒಳ್ಳೆಯ ಸೇವೆ ಮಾಡುತ್ತಾರೆ ಎಂಬ ಉದ್ದೇಶದಿಂದ ಎಂಡಿ ಆಗಿ ನೇಮಕ ಮಾಡಲಾಗಿದೆ.

ಸಜ್ಜನರ ಅವರು ಮೂಲತ ಕರ್ನಾಟಕದವರು. ಹುಬ್ಬಳ್ಳಿಯ ನಿವಾಸಿ. ತೆಲಂಗಾಣ ರಾಜ್ಯದ ಪೊಲೀಸ್‌ ಇಲಾಖೆಯಲ್ಲಿ ಒಳ್ಳೆಯ ಹೆಸರು ಮಾಡಿರುವ ಕನ್ನಡಿಗರಲ್ಲಿ ಇವರೂ ಒಬ್ಬರು. ವರಂಗಲ ಹಾಗೂ ಹೈದರಾಬಾದನಲ್ಲಿ ನಡೆದ ಮಹಿಳೆಯರ ಮೇಲೆ ಆತ್ಯಾಚಾರ ಪ್ರಕರಣ ಕಾಮುಕರನ್ನು ಸ್ಥಳದಲ್ಲಿಯೇ ಎನ್ಕೌಂಟರ ಮಾಡಿ ನ್ಯಾಯ ಒದಗಿಸಿದ ಹೆಮ್ಮೆಯ ಅಧಿಕಾರಿ ಎನ್ನಿಸಿಕೊಂಡವರು.‌

ಪೊಲೀಸ ಇಲಾಖೆಯಲ್ಲಿ ಈ ತರಹ ಅಧಿಕಾರಿಗಳು ಇದ್ದರೆ ಸಮಾಜದಲ್ಲಿ ಯಾವುದೇ ಅಪರಾಧಗಳು ಜರುಗುವುದಿಲ್ಲ ಎಂಬ ಸಂದೇಶವನ್ನು ನೀಡಿದ ಖಡಕ್‌ ಅಧಿಕಾರಿಗೆ ದೇಶಾದ್ಯಂತ ಜೈಕಾರ ಹಾಕಿದರು ಜನ ಸಾಮಾನ್ಯರು.4 ಎನ್‌ಕೌಂಟರ್‌ ಇಡೀ ದೇಶದಲ್ಲಿ ಸಂಚಲನ ಮೂಡಿದರು.

ಸಜ್ಜನರ ಅವರು ಎಎಸ್‌ಪಿ ಆಗಿ ಮೊದಲ ಸೇವೆ ಆರಂಭಿಸಿ ಅನೇಕ ಸ್ಥಳಗಳಲ್ಲಿ ನ್ಯಾಯಯುತ್ತವಾಗಿ ಸೇವೆ ಮಾಡಿರುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಕಡಪ, ವರಂಗಲ, ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಸೇವೆ ಮಾಡಿ. ತೆಲಂಗಾಣ ರಾಜ್ಯ ನಿರ್ಮಾಣದ ನಂತರ ಮೊದಲ ಇಂಟಲಿಜನ್ಸ ಐಜಿಯಾಗಿ ನಾಲ್ಕು ವರ್ಷ ಹಾಗೂ ಸೈಬರಾಬಾದ ಪೊಲೀಸ್‌ ಆಯುಕ್ತರಾಗಿ ಮೂರುವರೆ ವರ್ಷ ಸೇವೆಯನ್ನು ಮಾಡಿ ಉತ್ತಮ ಅಧಿಕಾರಿ ಎಂಬ ಸರ್ಕಾರದ ಪ್ರಶಸ್ತಿಗೆ ಪಾತ್ರರಾದ್ದರು.

ಇನ್ನು ಬುಧವಾರ (ಆ.25) ತೆಲಂಗಾಣ ರಾಜ್ಯದ ಆರ್‌ಟಿಸಿ. ಎಂಡಿ ಆಗಿ ಸರ್ಕಾರ ನೇಮಮಾಡಿ ಆದೇಶ ಹೊರಡಿಸಿದೆ.

ತೆಲಂಗಾಣ ರಾಜ್ಯದ ಸಾರಿಗೆ ಎಂಡಿ ಆಗಿ ನೇಮಕವಾಗಿರುವ ವಿಶ್ವನಾಥ ಸಜ್ಜನರ ಐಪಿಎಸ್ ಅವರನ್ನು ಹೈದರಾಬಾದನ ಕನ್ನಡಿಗರ ಕಲ್ಯಾಣ ಅಭಿವೃದ್ದಿ ಸಂಘಟನೆಯು ಹರ್ಷ ವ್ಯಕ್ತಪಡಿಸಿವೆ. ನೇಮಕಕ್ಕೆ ಅನೀಲಕುಮಾರ ಪಾಟೀಲ್‌, ಧರ‍್ಮೇಂದ್ರ ಪೂಜಾರಿ ಬಗ್ದೂರಿ, ಸಂತೋಷ ಪಾಟೀಲ, ನಾಗನಾಥ ಮಾಶೆಟ್ಟಿ, ಪ್ರದೀಪಕುಮಾರ ಚಿಂಚೆನಸೂರೆ, ಪ್ರದೀಪ ವಾತಡೆ, ಗಣೇಶ ಚಿಂಚೋಳಿ, ಶಿವಕಾಂತ ಸ್ವಾಮಿ. ಅನೇಕ ಕನ್ನಡಿಗರು ಅಭಿನಂದಿಸಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು