ಹಾವೇರಿ: ಮಹಿಳೆಯರು ವಾಹನ ಚಾಲನೆ ತರಬೇತಿಪಡೆದು ಘನತ್ಯಾಜ್ಯ ಕಸವಿಲೇವಾರಿ ವಾಹನಗಳ ಚಾಲಕರಾಗಿ ಕಾರ್ಯನಿರ್ವಹಿಸುವುದರ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್ ಕರೆ ನೀಡಿದರು.
ದೇವಗಿರಿಯಲ್ಲಿರುವ ಬರೊಡಾಗ್ರಾಮೀಣ ಸ್ವಉದ್ಯೋಗತರಬೇತಿ ಸಂಸ್ಥೆಯಲ್ಲಿ ಮಹಿಳೆಯರಿಗೆ ಘನತ್ಯಾಜ್ಯ ಕಸವಿಲೇವಾರಿ ವಾಹನ ಚಾಲನೆ ಮಾಡುವ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಾವೇರಿ ಜಿಲ್ಲೆಯಲ್ಲಿ ವಿನೂತನವಾದ ಪ್ರಯೋಗವನ್ನು ಕೈಗೊಳ್ಳಲಾಗಿದೆ. ಗ್ರಾಮೀಣ ಭಾಗದ ಘನತ್ಯಾಜ್ಯ ಕಸವಿಲೇವಾರಿ ವಾಹನಗಳ ಚಾಲನೆಗೆ ಮಹಿಳೆಯರಿಗೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ. ಈ ಕುರಿತಂತೆ ಪ್ರಥಮ ಭಾರಿಗೆ ಘನತ್ಯಾಜ್ಯ ಕಸ ವಿಲೇವಾರಿಕಾರ್ಯ ಕೈಗೊಳ್ಳಲ್ಲು 30 ದಿನಗಳ ಲಘುವಾಹನ ತರಬೇತಿಯನ್ನು ಬರೊಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದಿಂದ ಆಯೋಜಿಸಲಾಗಿದೆ ಎಂದರು.
ಮಹಿಳೆಯರು ವಾಹನಾ ಚಾಲನಾ ತರಬೇತಿಯನ್ನು ಸಂಪೂರ್ಣವಾಗಿ ಪಡೆದುಕೊಳ್ಳಬೇಕು. ಮಹಿಳಾ ಚಾಲಕರಾಗಿ ವಾಹನ ಚಾಲನೆ ಜೊತೆಗೆ ಗ್ರಾಮೀಣ ಸ್ವಚ್ಛತೆಯ ಕಾರ್ಯಕ್ಕೆ ಕೈಜೋಡಿಸಬೇಕು. ಈ ಕೆಲಸದಿಂದ ತಾವು ಆರ್ಥಿಕವಾಗಿ ಸಬಲರಾಗಬಹುದು. ಸಮಾಜದಲ್ಲಿ ಗೌರವಯುತವಾದ ಜೀವನ ನಡೆಸಬಹುದು. ಮಹಿಳೆಯರು ಪ್ರತಿ ಹಂತದಲ್ಲೂ ಧೈರ್ಯದಿಂದ ಮುನ್ನಡೆದರೆ ನಿಶ್ಚಿತವಾಗಿಯೂ ಯಶಸ್ಸು ಹೊಂದಲು ಸಾಧ್ಯ ಎಂದು ಹೇಳಿದರು.
ವೆಬ್‍ಸಿಟಿ ತರಬೇತಿ ಸಂಸ್ಥೆಯ ನಿರ್ದೇಶಕ ಎಸ್.ಸಜೀತ್, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ವಸೀಮಬಾಬಾ ಮುದ್ದೆಬಿಹಾಳ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಎಸ್.ಜೆ.ಕೊರವರ, ಪರಶುರಾಮ ಪೂಜಾರ, ಜಿಲ್ಲಾ ಯೋಜನಾ ನಿರ್ದೇಶಕ ನಾಗರಾಜ ಬಾರ್ಕಿ ಉಪಸ್ಥಿತರಿದ್ದರು.