Please assign a menu to the primary menu location under menu

NEWSಶಿಕ್ಷಣ-

ಶಿಕ್ಷಕರ ದಿನಾಚರಣೆ, ಉತ್ತಮ ಶಿಕ್ಷಕರಿಗೆ ಸನ್ಮಾನ ಪ್ರತಿಭಾ ಪುರಸ್ಕಾರ

279Views
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಿಬಿಎಂಪಿ ವತಿಯಿಂದ ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್)ದಲ್ಲಿ ಇಂದು ನಡೆದ ಶಿಕ್ಷಕರ ದಿನಾಚರಣೆ, ಉತ್ತಮ ಶಿಕ್ಷಕರ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಬಿಬಿಎಂಪಿ ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತ ಚಾಲನೆ ನೀಡಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಾಲಾ- ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುವುದರ ಜೊತೆಗೆ ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುವುದು. ಅದರಂತೆ ಹೆಚ್ಚು ಅಂಕ ಪಡೆದಿರುವ 12 ವಿದ್ಯಾರ್ಥಿಗಳಿಗೆ ನಗದು ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಗಿದೆ.

ಅಲ್ಲದೆ ಇದೇ ಮೊದಲಬಾರಿಗೆ ನಗರ ಪಾಲಿಕೆಯಿಂದ ಅತ್ಯುತ್ತಮ ಶಿಕ್ಷಕರನ್ನು ಗುರುತಿಸಿ ಅವರಿಗೆ “ಉತ್ತಮ ಶಿಕ್ಷಕ” ಪ್ರಶಸ್ತಿ ಪತ್ರದೊಂದಿಗೆ 50,000 ರೂ.ಗಳ ನಗದು ಬಹುಮಾನ, ಪಾರಿತೋಷಕ ನೀಡಿ ಸನ್ಮಾನಿಸಲಾಗಿದೆ.

ಜತೆಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಒಟ್ಟು 60 ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ತಲಾ 25,000 ರೂ. ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಒಟ್ಟು 62 ವಿದ್ಯಾರ್ಥಿಗಳಿಗೆ ತಲಾ 35,000 ರೂ.ಗಳನ್ನೊಳಗೊಂಡ ನಗದು ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಿ ಗೌರವಿಸಲಾಯಿತು.

ಶಸ್ತಿಪತ್ರ ಮತ್ತು ಪಾರಿತೋಷಕ ಪಡೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು
• ವಿಜಯನಗರ ಪ್ರೌಢಶಾಲೆಯ ಶ್ರೀ ಅರವಿಂದ್.ಎಂ ಶೇ.97.44 ರಷ್ಟು ಅಂಕಗಳನ್ನು ಪಡೆದ ಪ್ರಥಮ ಸ್ಥಾನ ವಿದ್ಯಾರ್ಥಿಗೆ 50,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.

• ಗಂಗಾನಗರ ಪ್ರೌಢಶಾಲೆಯಲ್ಲಿ ಶ್ರೀ ಯಶಸ್ ಅಲಪ್ಪನವರ್ ಶೇ.96.66 ರಷ್ಟು ಅಂಕಗಳನ್ನು ಪಡೆದ ದ್ವಿತೀಯ ಸ್ಥಾನ ವಿದ್ಯಾರ್ಥಿಗೆ 30,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.

• ಶ್ರೀರಾಮಪುರ ಪ್ರೌಢಶಾಲೆಯಲ್ಲಿ ಕುಮಾರಿ ಚಂದನ.ಎಂ ಶೇ. 94.88 ರಷ್ಟು ಅಂಕಗಳನ್ನು ಪಡೆದ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗೆ 25,000 ರೂ.ಗಳ ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.

ಪದವಿ ಪೂರ್ವ ಕಾಲೇಜು ವಿಜ್ಞಾನ ವಿಭಾಗ
• ಕ್ಲೀವ್‌ಲ್ಯಾಂಡ್ ಟೌನ್ ಪದವಿ ಪೂರ್ವ ಕಾಲೇಜಿನ ಕುಮಾರಿ ದಿವ್ಯಾ.ಪಿ ಶೇ. 98.16 ರಷ್ಟು ಅಂಕಗಳನ್ನು ಪಡೆದ ಪ್ರಥಮ ವಿದ್ಯಾರ್ಥಿಗೆ 50,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.

• ಕುಮಾರಿ ಸಿದ್ರಾಬಿಲಾಲ್ ಶೇ. 97.16 ರಷ್ಟು ಅಂಕಗಳನ್ನು ಪಡೆದ ದ್ವಿತೀಯ ವಿದ್ಯಾರ್ಥಿಗೆ 30,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.

• ಕುಮಾರಿ ಅಲಿಯಾ ಮುಖಾರ್ ಶೇ. 96.66 ರಷ್ಟು ಅಂಕಗಳನ್ನು ಪಡೆದ ತೃತೀಯ ವಿದ್ಯಾರ್ಥಿಗೆ 25,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.

ಪದವಿ ಪೂರ್ವ ಕಾಲೇಜು ವಾಣಿಜ್ಯ ವಿಭಾಗ
• ಬನ್ನಪ್ಪಪಾರ್ಕ್ ಪದವಿ ಪೂರ್ವ ಕಾಲೇಜಿನ ಕುಮಾರಿ ಶಾಲುಸಕ್ತಿ ಶೇ. 99‌.16 ರಷ್ಟು ಅಂಕಗಳನ್ನು ಪಡೆದ ಪ್ರಥಮ ವಿದ್ಯಾರ್ಥಿಗೆ 50,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.

• ಜೋಗುಪಾಳ್ಯ ಪದವಿ ಪೂರ್ವ ಕಾಲೇಜಿನಲ್ಲಿ ಕುಮಾರಿ ಪ್ರಿಯದರ್ಶಿನಿ.ಎಸ್.ಎಚ್ ಶೇ. 96.50 ರಷ್ಟು ಅಂಕಗಳನ್ನು ಪಡೆದ ದ್ವಿತೀಯ ವಿದ್ಯಾರ್ಥಿಗೆ 30,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.

• ಬನ್ನಪ್ಪಪಾರ್ಕ್ ಪೂರ್ವ ಕಾಲೇಜಿನ ಕುಮಾರಿ ಅರ್ಚನಾ ಶೇ. 95.66 ರಷ್ಟು ಅಂಕಗಳನ್ನು ಪಡೆದ ತೃತೀಯ ವಿದ್ಯಾರ್ಥಿಗೆ 25,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.

ಪದವಿ ಪೂರ್ವ ಕಾಲೇಜು ಕಲಾ ವಿಭಾಗ
• ಬೈರವೇಶ್ವರನಗರ ಪದವಿ ಪೂರ್ವ ಕಾಲೇಜಿನಲ್ಲಿ ಕುಮಾರಿ ಸುಲೋಚನಾಸಿಂಹ.ಡಿ ಶೇ. 95.83 ರಷ್ಟು ಅಂಕಗಳನ್ನು ಪಡೆದ ಪ್ರಥಮ ವಿದ್ಯಾರ್ಥಿಗೆ 50,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.

• ಮಾಗಡಿ ರಸ್ತೆ ಕಾಲೇಜಿನ  ನಂಜುಂಡ ಸ್ವಾಮಿ ಶೇ. 94.66 ರಷ್ಟು ಅಂಕಗಳನ್ನು ಪಡೆದ ದ್ವಿತೀಯ ವಿದ್ಯಾರ್ಥಿಗೆ 30,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.

• ಬನ್ನಪ್ಪಪಾರ್ಕ್ ಪದವಿ ಪೂರ್ವ ಕಾಲೇಜು   ಕಿರಣ್ ನಾಯಕ್.ಎಸ್.ಜಿ ಶೇ. 90,00 ರಷ್ಟು ಅಂಕಗಳನ್ನು ಪಡೆದ ತೃತೀಯ ವಿದ್ಯಾರ್ಥಿಗೆ 25,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.

ಸಮಾರಂಭದಲ್ಲಿ ಎಲ್ಲ ವಿಶೇಷ ಆಯುಕ್ತರು (ಶಿಕ್ಷಣ) ಶ್ರೀ ರೆಡ್ಡಿ ಶಂಕರ ಬಾಬು, ಸಹಾಯಕ ಆಯುಕ್ತರು(ಶಿಕ್ಷಣ) ಶ್ರೀ ಉಮೇಶ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

 

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...