ಪರಿಷತ್ ಕಲಾಪದ ವೇಳೆ ನಿದ್ದೆಗೆ ಜಾರಿದವರನ್ನು ಕೀರ್ತನೆ ಮೂಲಕ ಎಬ್ಬಿಸಿದ ಭೋಜೇಗೌಡ
ಬೆಂಗಳೂರು: ಚರ್ಚೆಯ ಸಂದರ್ಭದಲ್ಲಿ ವಿಧಾನಪರಿಷತ್‍ನಲ್ಲಿ ನಿದ್ದೆ ಮಾಡುತ್ತಿದ್ದವರನ್ನು ನೋಡಿ ವಿಧಾನಪರಿಷತ್ ಜೆಡಿಎಸ್ ಸದಸ್ಯ ಭೋಜೇಗೌಡ ಅವರು ಏರು ಕಂಠದಲ್ಲಿ ದಾಸರ ಪದ ಹಾಡುವ ಮೂಲಕ ನಿದ್ದೆಯಿಂದ ಎಬ್ಬಿಸಿ ಒನ್ಸ್ ಮೋರ್ ಎನಿಸಿಕೊಂಡರು.
ನಿಯಮ 330 ಅಡಿ ನಡೆಯುತ್ತಿದ್ದ ಚರ್ಚೆ ವೇಳೆ ಫಾರೂಕ್ ಅವರೊಂದಿಗೆ ಮಾತನಾಡುತ್ತಿದ್ದ ಭೋಜೇಗೌಡ ಅವರು, ಇದ್ದಕ್ಕಿದ್ದಂತೆ ಗಾಯನ ಶುರುಮಾಡಿದರು.
ರಾಗವಾಗಿ ಹಾಡು ಶುರು ಮಾಡಿದ ಭೋಜೇಗೌಡ ಅವರು ಏರು ಕಂಠದಲ್ಲಿ ದಾಸರ ಪದ ಹಾಡಿದರು. ಈ ವೇಳೆ ನಿದ್ದೆಗೆ ಜಾರಿಗೆ ಹಲವು ಪರಿಷತ್ ಸದಸ್ಯರನ್ನು ಎಚ್ಚರಗೊಳಿಸುವುದಕ್ಕೆ ಹಾಡಿದೆ ಎಂದು ಸಮಜಾಯಿಷಿ ನೀಡಿದರು.
88 ಲಕ್ಷ ಜೀವರಾಶಿಗಳ ದಾಟಿ ಬಂದ ಈ ಶರೀರ, ತಾನಲ್ಲ ತನ್ನದಲ್ಲ ಎಂದು ದಾಸರ ಪದ ಭೋಜೇಗೌಡ ಅವರು ಹಾಡುತ್ತಿದ್ದಂತೆ, ಬಿಜೆಪಿ ಸದಸ್ಯರಿಂದ ಒನ್ಸ್ ಮೋರ್ ಎಂಬ ಬೇಡಿಕೆ ಕೇಳಿಬಂತು.
ಈ ವೇಳೆ ಮತ್ತೆ ರಾಗವಾಗಿ ಕೀರ್ತನೆ ಹಾಡಲು ಭೋಜೇಗೌಡ ಆರಂಭಿಸಿದರು. ಈ ಸಂದರ್ಭ ಮತ್ತೆ ಶುರು ಮಾಡಬೇಡಿ ಎಂದು ಸಭಾಪತಿ ಹೊರಟ್ಟಿ ತಮಾಷೆ ಮಾಡಿದರು.
ಮಂಗಳೂರು, ಕರಾವಳಿ, ಉಳ್ಳಾಲ ಸುರತ್ಕಲ್ ಭಾಗದಲ್ಲಿ ಅಸಮರ್ಪಕ ಒಳಚರಂಡಿಯಿಂದ ತೀವ್ರ ಸಮಸ್ಯೆ ಇದೆ ಎಂದು ತಮ್ಮ ಭಾಗದ ಸಮಸ್ಯೆಗಳನ್ನು ಪರಿಷತ್‍ನಲ್ಲಿ ಮಂಡಿಸಿದರು.
ಇದಲ್ಲದೆ ಮಂಗಳೂರು, ಕರಾವಳಿ ಪ್ರದೇಶಗಳಲ್ಲಿ ಸಾಕಷ್ಟು ಕೈಗಾರಿಕಾ ಪ್ರದೇಶಗಳಿವೆ ಇದರಿಂದ ಪರಿಸರ ನಾಶವಾಗುತ್ತಿದೆ. ಈ ಬಗ್ಗೆ ಮಾತನಾಡದೆ ಸುಮ್ಮನಿರುವ ಇವರೆಲ್ಲ ಪರಿಸರ ವಾದಿಗಳಲ್ಲ, ಪರಿಸರ ವ್ಯಾಧಿಗಳು.
ನನ್ನ ಬಗ್ಗೆ ಏನು ಬೇಕಾದ್ರೂ ಬರೀರಿ, ಪರಿಸರ ವ್ಯಾಧಿಗಳಿಂದಾಗಿಯೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಪರಿಸರ ವಾದಿಗಳ ವಿರುದ್ಧ ಕಿಡಿಕಾರಿದರು.