ಕಾಂಗ್ರೆಸ್ ಸೇರುತ್ತೇನೆ ಎಂದ ಜೆಡಿಎಸ್ ಉಚ್ಛಾಟಿತ ಕೋಲಾರ ಶಾಸಕ ಶ್ರೀನಿವಾಸಗೌಡ
ಕೋಲಾರ: ಜೆಡಿಎಸ್ ಶಾಸಕ ಕೆ.ಶ್ರೀ ನಿವಾಸಗೌಡ ಅವರು ಈ ಪಕ್ಷ ನನಗೆ ಸಾಕಾಗಿದೆ ಹೀಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರುತ್ತೇನೆ ಎನ್ನುತ್ತಿದ್ದಾರೆ ಎಂದು ಕ್ಷೇತ್ರದಲ್ಲಿ ಹರಿದಾಡುತ್ತಿದ್ದ ಊಹಾಪೋಹಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂದು ಅಧಿಕೃತವಾಗಿ ಹೇಳುವ ಮೂಲಕ ತೆರೆ ಎಳೆದ ಶ್ರೀನಿವಾಸಗೌಡರು.
ಶನಿವಾರ ಸುದ್ದಿಗಾರರೊಂದಿಗೆಮಾತನಾಡಿ, ‘ದೇವೇಗೌಡರು ಮತ್ತು ಅವರ ಮಕ್ಕಳು ಬಹಳದೊಡ್ಡವರು. ನನ್ನನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ. ನಾನು 4 ಬಾರಿ ಬೇರೆ ಬೇರೆ ಪಕ್ಷದಿಂದ ಗೆದ್ದು ಶಾಸಕನಾಗಿದ್ದೇನೆ. ಜೆಡಿಎಸ್ನಿಂದ ಉಚ್ಛಾಟನೆಮಾಡಿರೋದು ಸಂತೋಷ ಎಂದು ಕುಟುಕಿದರು.
ಕಾಂಗ್ರೆಸ್ಗೆ ಸೇರ್ಪಡೆಯಾಗುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಿ ಚರ್ಚಿಸಿದ್ದು , ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಹಿಂದೆ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ್ದೆ . ಆಗ ಕಾಂಗ್ರೆಸ್ನ ಒಬ್ಬ ಮಹಾನುಭಾವ ಪಕ್ಷದಿಂದ ಉಚ್ಛಾಟನೆಮಾಡಿಸಿದ್ದ. ಈಗ ಆ ಮಹಾನುಭಾವ ಹೆಸರಿಗೆ ಇಲ್ಲದಂತೆ ಹೋಗಿದ್ದಾನೆ. ಜನ ಸಹ ಆತನನ್ನು ಮರೆತಿದ್ದಾರೆ. ಆತನ ಹೆಸರೇಳಲು ನಾಚಿಕೆಯಾಗುತ್ತೆ ಎಂದು ಪರೋಕ್ಷವಾಗಿಮಾಜಿ ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧ ಹರಿಹಾಯ್ದರು.
ಕೆ.ಸಿ ವ್ಯಾಲಿಯೋಜನೆಯಿಂದ ಜಿಲ್ಲೆಗೆ ನೀರು ತಂದ ಶಾಸಕರಾದ ರಮೇಶ್ಕುಮಾರ್ ಹಾಗೂ ಕೃಷ್ಣ ಬೈರೇಗೌಡರು ಮಹಾನುಭಾವರು. ನಾನು ಅವರನ್ನು ಹೊಗಳಿದ್ದ ಕ್ಕೆ ಕುಮಾರಸ್ವಾ ಮಿಗೆ ಬಾಧೆಯಾಗಿದೆ. ಕೆ.ಸಿ. ವ್ಯಾಲಿಯದು ಕೊಚ್ಚೆ ನೀರೆಂದು ಕುಮಾರಸ್ವಾ ಮಿ ಹೇಳಿದ್ದಾರೆ. ಅದೇ ಕೊಚ್ಚೆ ನೀರು ನಾನು ಕುಡಿದಿಲ್ವಾ ? ನಾನು ಸತ್ತೋಗಿದ್ದಿನಾ?’ ಎಂದು ಪ್ರಶ್ನಿಸಿದರು.
ನಾನು ಒಬ್ಬ ಶಾಸಕ ಎಂಬುದಕ್ಕಿಂತ ಮೊದಲು ರೈತನ ಮಗ. ದೇವೇಗೌಡರ ಕುಟುಂಬವೇ ರೈತರ ಕುಟುಂಬ. ಅವರು ಏಕೆ ರಮೇರ್ ಕುಮಾರ್ ಬಗ್ಗೆ ಲಘುವಾಗಿ ಮಾತನಾಡಬೇಕು? ದೇವೇಗೌಡರ ಕುಟುಂಬಕ್ಕೆ ಒಳ್ಳೊಳ್ಳೆ ಅಧಿಕಾರ ಬೇಕು. ಜೆಡಿಎಸ್ ಪಕ್ಷ ಅವರ ಕುಟುಂಬಕ್ಕೆ ಮಾತ್ರ ಸೀಮಿತನಾ?’ ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಬಾಯಿ ಬಿಟ್ಟರೆ ತಮ್ಮದು ರೈತರ ಕುಟುಂಬವೆಂದು ಹೇಳಿಕೊಳ್ತಾರೆ. ಅವರು 2 ಬಾರಿ ಮುಖ್ಯ ಮಂತ್ರಿ ಆದಾಗ ಕೋಲಾರ ಜಿಲ್ಲೆಗೆ ಕೊಚ್ಚೆ ನೀರಿನ ಬದಲು ಒಳ್ಳೆಯ ನೀರು ಕೊಡಬಹುದಿತ್ತು. ಅವರಿಗೆ ಬೇರೆ ಜಿಲ್ಲೆಯ ರೈತರ ಬಗ್ಗೆ ಕಾಳಜಿಯಿಲ್ಲ. ಅವರ ಜಿಲ್ಲೆ ಮಾತ್ರ ಅವರಿಗೆ ಸೀಮಿತ ಎಂದು ಅಣಕವಾಡಿದರು.