ನ್ಯೂಡೆಲ್ಲಿ: ಹಿಂದೆ ಕಳವಾಗಿದ್ದ ವಿಗ್ರಹಗಳೆಲ್ಲವನ್ನು ಪ್ರಧಾನಿ ನರೇಂದ್ರ ಮೋದಿ ಯುಎಸ್‍ನಿಂದ ಭಾರತಕ್ಕೆ ತಂದಿದ್ದಾರೆ.
ನಮ್ಮ ದೇಶಕ್ಕೆ ಸಂಬಂಧಪಟ್ಟ ಸುಮಾರು 157 ಪುರಾತನ ಕಲಾಕೃತಿಗಳು, ದೇವರ ವಿಗ್ರಹಗಳನ್ನು ವಾಪಸ್ ತರುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಕಲಾಕೃತಿಗಳೆಲ್ಲ ಹಿಂದೆ ಕಳವಾಗಿ, ಯುಎಸ್‍ಗೆ ಸಾಗಿಸಲ್ಪಟ್ಟಿದ್ದವು. ಅದನ್ನೀಗ ಪ್ರಧಾನಿ ಮೋದಿಯವರಿಗೆ ಅಮೆರಿಕ ಹಸ್ತಾಂತರ ಮಾಡಿದೆ. ಈ ಬಗ್ಗೆ ಪ್ರಧಾನಿ ಮೋದಿಯವರೂ ಕೂಡ ಖುಷಿ ವ್ಯಕ್ತಪಡಿಸಿದ್ದಾರೆ.
ಇದೀಗ ಪ್ರಧಾನಿ ಮೋದಿಯವರು ಭಾರತಕ್ಕೆ ತರಲಿರುವ ಪುರಾತನ ವಸ್ತುಗಳಲ್ಲಿ 12ನೇ ಶತಮಾನದ ಕಂಚಿನ ನಟರಾಜ ವಿಗ್ರಹ, 10ನೇ ಶತಮಾನದ ರೇವಂತ ದೇವರ ಮೂರ್ತಿಗಳು ಇವೆ.
ಹೀಗೆ ವಾಪಸ್ ತರಲಾದ 45 ಕಲಾಕೃತಿಗಳು ಸಾಮಾನ್ಯ ಯುಗಕ್ಕಿಂತಲೂ ಮುಂಚಿನವು. 71 ಸಾಂಸ್ಕೃತಿಕ ಕಲಾಕೃತಿಗಳಾಗಿದ್ದು, 60 ಹಿಂದೂ ಧರ್ಮ ಬಿಂಬಕ ಕಲಾಕೃತಿಗಳಾಗಿವೆ. ಇನ್ನು 16 ಕಲಾಕೃತಿಗಳು ಬೌದ್ಧಧರ್ಮಕ್ಕೆ ಸೇರಿದ್ದಾಗಿದ್ದು, 9 ಜೈನಧರ್ಮದ್ದಾಗಿವೆ.
ಮೂರು ತಲೆಯ ಬ್ರಹ್ಮ, ರಥ ಚಾಲನೆ ಮಾಡುತ್ತಿರುವ ಸೂರ್ಯ, ವಿಷ್ಣು, ದಕ್ಷಿಣಾಮೂರ್ತಿಯಾಗಿರುವ ಶಿವ, ನೃತ್ಯ ಮಾಡುತ್ತಿರುವ ಗಣೇಶನ ವಿಗ್ರಹಗಳು, ತಾರ, ಜೈನ ತೀಥರ್ಂಕರ, ಪದ್ಮಾಸನ ತೀಥರ್ಂಕರ ಮತ್ತು ಜೈನ ಚೌಬಿಸಿ ಮೂರ್ತಿಗಳೂ ಇವೆ.
ಇನ್ನು ಕಂಚಿನಿಂದ ಮಾಡಲಾದ ಲಕ್ಷ್ಮೀ ನಾರಾಯಣ ಅಲಂಕೃತ ಮೂರ್ತಿಗಳು, ಬುದ್ಧ, ವಿಷ್ಣು, ಶಿವ-ಪಾರ್ವತಿ ಮತ್ತು 24 ಜೈನ ತೀಥರ್ಂಕರ ಮೂರ್ತಿಗಳ ವಿಗ್ರಹ ಇದೆ. ದೇವರ ವಿಗ್ರಹಗಳ ಹೊರತಾಗಿಯೂ ಕೆಲವು ಸಾಂಸ್ಕೃತಿಕ ಪ್ರತಿಬಿಂಬಕ ಕಲಾಕೃತಿಗಳಿವೆ.
Items largely belong to 11th-14th CE & historic antiquities like copper anthropomorphic object of 2000BC or terracotta vase from 2ndCE. Some 45 antiquities belong to Before Common Era. Half of artifacts are cultural, other half are figurines relating to Hinduism, Buddhism&Jainism pic.twitter.com/jw6tEFxuLZ
— ANI (@ANI) September 25, 2021
ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಯುಎಸ್ ಪ್ರವಾಸ ಮುಗಿಸಿ, ಅಲ್ಲಿಂದ ಹೊರಟಿದ್ದಾರೆ. ನಿನ್ನೆ ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ್ದರು. ಸೆಪ್ಟೆಂಬರ್ 24ರಂದು ಕ್ವಾಡ್ ಶೃಂಗಸಭೆಯಲ್ಲಿ ಮಾತನಾಡಿದ್ದರು.
ಶನಿವಾರ (ಸೆಪ್ಟೆಂಬರ್ 25) ಅವರ ಅಮೆರಿಕ ಪ್ರವಾಸ ಮುಕ್ತಾಯಗೊಂಡಿದ್ದು, ಈಗಾಗಲೇ ಅಲ್ಲಿಂದ ಹೊರಟಿದ್ದಾರೆ. ಆದರೆ ಹೀಗೆ ಭಾರತಕ್ಕೆ ಬರುವಾಗ, ನಮ್ಮ ದೇಶಕ್ಕೆ ಸಂಬಂಧಪಟ್ಟ ಸುಮಾರು 157 ಪುರಾತನ ಕಲಾಕೃತಿಗಳು, ದೇವರ ವಿಗ್ರಹಗಳನ್ನು ವಾಪಸ್ ತರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
157 artefacts & antiquities were handed over by US during PM Modi’s visit. PM conveyed his deep appreciation for repatriation of antiquities to India by US. PM Modi & Pres Biden committed to strengthen their efforts to combat theft, illicit trade & trafficking of cultural objects pic.twitter.com/WI8PUewF8A
— ANI (@ANI) September 25, 2021