NEWSನಮ್ಮರಾಜ್ಯ

ನಿರ್ವಾಹಕಿ ಮೇಲೆ ಟ್ರಿಪ್‌ ಕ್ಯಾನ್ಸಲ್‌ ಅಸ್ತ್ರ ಪ್ರಯೋಗಿಸಿ ಅಮಾನತು ಮಾಡಿದ ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ
  • 8 ತಿಂಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ವಾಹಕಿ ವಿರುದ್ಧ ಏಕಾಏಕಿ ಈ ಕ್ರಮ ಏಕೆ?
  • ಜನವರಿಯಿಂದ ಆಗಸ್ಟ್‌ ವಗೆರೆ ಟ್ರಿಪ್‌ ಪೂರ್ಣಗೊಳಿಸಿಲ್ಲ ಎಂಬ ನೆಪ- ಕಪ್ಪಕ್ಕಾಗಿ ನಡೆಯುತ್ತಿವೆ ಇಂಥ ಶಿಕ್ಷೆ

ಹಾವೇರಿ: ವಾಯುವ್ಯ ಸಾರಿಗೆ ಸಂಸ್ಥೆ, ಹಾವೇರಿ ವಿಭಾಗ, ಹಾವೇರಿ ಘಟಕದಲ್ಲಿ ಒಬ್ಬ ಮಹಿಳಾ ನಿರ್ವಾಹಕಿ ಮೇಲೆ ಘಟಕ ವ್ಯವಸ್ಥಾಪಕರು ಕಿಲೋಮೀಟರ್ ರದ್ದತಿ ಎಂದು ವರದಿ ಮೇಲೆ ವಿಭಾಗೀಯ ನಿಯಂತ್ರಣ ಅಧಿಕಾರಿ ಮಹಿಳಾ ನಿರ್ವಾಹಕಿಗೆ ಅಮಾನತು ಆದೇಶ ಮಾಡಿದ್ದಾರೆ.

ನಿರ್ವಾಹಕಿಯಾದ ನೀವು 2021 ಜನವರಿಯಿಂದ 2021 ಆಗಸ್ಟ್ ವರೆಗೆ 372 ಕಿಮೀ ಟ್ರಿಪ್‌ ಕ್ಯಾನ್ಸಲ್‌ ಮಾಡಿದ್ದೀರಿ ಎಂದು ಉಲ್ಲೇಖ ಮಾಡಿ ನಿರ್ವಾಹಕಿಯನ್ನು ಅಮಾನತು ಮಾಡಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ಕಡೆ ಕಳೆದ ವರ್ಷದಿಂದ ಕೋವಿಡ್ ಕಾರಣ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವುದರಿಂದ ಶಾಲಾ ಕಾಲೇಜು ಸರಿಯಾಗಿ ಪ್ರಾರಂಭವಾಗದ ಕಾರಣ ಘಟಕದಲ್ಲಿ ಸಂಪೂರ್ಣ ಕಿಲೋಮೀಟರ್ ಮಾಡುವಂತಿರಲಿಲ್ಲ. ಆದರೆ ಈ ಕಾರಣವನ್ನು ನೀಡಿ ನಿರ್ವಾಹಕಿಯನ್ನು ಸೇವೆಯಿಂದ ಅಮಾನತು ಮಾಡಿ ಮಾನಸಿಕವಾಗಿ ಹಿಂಸೆ ನೀಡುತ್ತಿರುವುದು ಏಕೆ ಎಂಬುವುದು ತಿಳಿಯುತ್ತಿಲ್ಲ.

ಹಾಗೆ ರದ್ದು ಮಾಡಿದ್ದರೆ ಒಂದು ವಾರದಲ್ಲಿ ಕಾರಣ ಕೇಳಿ ಜ್ಞಾಪನ ಪತ್ರ ನೀಡಬಹುದಿತ್ತು. ಆದರೆ ಇವರು 8 ತಿಂಗಳು ಯಾವುದೇ ಕ್ರಮ ಕೈಗೊಳ್ಳದೆ ಏಕಾಏಕಿ ಈ ನಿರ್ವಾಹಕಿ ಮೇಲೆ ಮಾತ್ರ ಯಾಕೆ ಕ್ರಮ ಇದು ಚಾಲಕನಿಗೂ ಸಂಬಂಧಿಸಿದ ವಿಷಯವಲ್ಲವೇ.

ಇನ್ನು ಹಾವೇರಿ ವಿಭಾಗ, ಹಾವೇರಿ ಘಟಕದಲ್ಲಿರುವ ಅಧಿಕಾರಿಗಳು ನೌಕರರನ್ನು ಇನ್ನಿಲ್ಲದಂತೆ ಹಿಂಸಿಸುತ್ತಿದ್ದಾರೆ. ಇದರಿಂದ ಈಗಾಗಲೇ ಹಲವಾರು ನೌಕರರನ್ನು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಆದರೂ ಈ ಅಧಿಕಾರಿಗಳು ತಮ್ಮ ದರ್ಪವನ್ನು ಮೆರೆಯುತ್ತಿರುವುದು ಮಾತ್ರ ಕಡಿಮೆಯಾಗಿಲ್ಲ. ಇಂಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಎಂಡಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ.

ಇನ್ನು 1970ರ ಫಾರಂ 4 ಅಡಿ ರೂಟ್‌ಗಳಿದ್ದು ಈ ಯಾವ ರೂಟ್‌ಗಳಲ್ಲೂ ಪ್ರಸ್ತುತ ಓಡುತ್ತಿರುವ ಬಸ್‌ಗಳು ಬಹುತೇಕ ಎಲ್ಲ ಟ್ರಿಪ್‌ಗಳನ್ನು ಮಾಡಲು ಸಾಧ್ಯವೇ ಇಲ್ಲ. ಇದು ಈ ಸಂಬಂಧಪಟ್ಟ ಅಧಿಕಾರಿಗಳಿಗೂ ಚೆನ್ನಾಗಿ ಗೊತ್ತಿದೆ. ಆದರೂ ಈ ರೀತಿ ನೌಕರರನ್ನು ಹುರಿದು ಮುಕ್ಕುವ ಕೆಲಸವನ್ನು ಏಕೆ ಮಾಡುತ್ತಿದ್ದಾರೆ?

ಇದರಿಂದ ಸಂಸ್ಥೆಯಲ್ಲಿ ಭ್ರಷ್ಟಾಚಾರ, ಲಂಚಾವತಾರ ಹೆಚ್ಚಾಗುವ ಎಲ್ಲ ಲಕ್ಷಣಗಳು ಇವೆ. ಹೀಗಾಗಿ ಸಂಬಂಧಪಟ್ಟ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಚಿವರು ಗಮನಹರಿಸಿ ಇಂಥ ಕೀಳು ಮಟ್ಟದಲ್ಲಿ ನಡೆದುಕೊಳ್ಳುತ್ತಿರುವ ಅಧಿಕಾರಿಗಳಿಗೆ ಬುದ್ಧಿಕಲಿಸಬೇಕು. ನೊಂದ ನೌಕರರಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ.

ಸಾರಿಗೆ ಸಂಸ್ಥೆಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತಿದೆ. ಇದರಿಂದ ಇಲ್ಲಿ ಕಾಯುವ ಹರನೇ ಕೊಡಲಿಯಾದರೆ ರಕ್ಷಿಸುವವರು ಯಾರು ಎಂಬ ಪ್ರಶ್ನೆ ನೌಕರರನ್ನು ಕಳೆದ 40 ವರ್ಷಗಳಿಂದಲೂ ಕಾಡುತ್ತಿದೆ.

ಇನ್ನು ನೌಕರರನ್ನು ಹಿಂಸಿಸುತ್ತಿರುವುದರ ಪ್ರಮುಖ ಕಾರಣ ಇಷ್ಟೆ, ಅದನ್ನುನಾವು ಇಲ್ಲಿ ಸ್ಪಷ್ಟವಾಗಿ ಹೇಳುತ್ತೇವೆ. ಒಬ್ಬ ನೌಕರನ ವಿರುದ್ಧ ತಮ್ಮಗೆ ಇಷ್ಟಬಂದ ರೀತಿ ಸಂಸ್ಥೆಯಲ್ಲಿ ಇರುವ ಅಸಂವಿಧಾನಿಕ ಕಾನೂನಿನಡಿ ಕ್ರಮ ತೆಗೆದುಕೊಳ್ಳುವುದು, ನಂತರ ಆ ವಿಚಾರದ ಬಗ್ಗೆ ವಿಭಾಗೀಯ ಕಚೇರಿಗೆ ಕರೆಸಿಕೊಳ್ಳುವುದು ನಿಮ್ಮ ಎಲ್ಲ ಸಮಸ್ಯೆಗಳನ್ನು ಸರಿಪಡಿಸುತ್ತೇವೆ ಎಂದು ಹೇಳಿ ಕಳುಹಿಸುವುದು.

ನಂತರ, ಅಧಿಕಾರಿಗಳ ಚೇಳಗಳು( ದಳ್ಳಾಳಿಗಳು) ಒಒಡಿ ಮಾಡುತ್ತಿರವ ಬಹುತೇಕ ನೌಕರರು ಶಿಕ್ಷೆಗೆ ಒಳಗಾದ ನೌಕರರ ಬಳಿ ಬಂದು ನೀವು ಇಷ್ಟು ಹಣಕೊಟ್ಟುಬಿಡಿ ಎಲ್ಲವನ್ನು ನಾನು ಸರಿ ಮಾಡಿಸಿ ಕೊಡುತ್ತೇನೆ ಎಂದು ನೇರವಾಗಿಯೇ ಲಂಚಕ್ಕೆ ಬೇಡಿಕೆ ಇಟ್ಟು ಇಷ್ಟಲ್ಲ ಇಷ್ಟು ಕೊಡುತ್ತೇವೆ ಎಂಬುವಷ್ಟರ ಮಟ್ಟಿಗೆ ನೌಕರರನ್ನು ಮಾನಸಿಕವಾಗಿ ಸಿದ್ಧಗೊಳಿಸಿ ಲಂಚ ಪಡೆಯುವುದು.

ಇನ್ನು ಕೆಲಸವಿಲ್ಲದೆ ಕೂರುವುದಕ್ಕಿಂತ ಅವರು ಹೇಳಿದ ರೀತಿ ಲಂಚಕೊಟ್ಟು ಹೋಗೋಣ ಎಂದು ಆ ನೌಕರರು ಮಾನಸಿಕವಾಗಿ ಕಿರಿಕಿರಿ ಅನುಭವಿಸಿ ಅಧಿಕಾರಿಯ ಚೇಳಗಳು ಹೇಳಿದಂತೆ ಲಂಚಕೊಟ್ಟು ಕೆಲಸಕ್ಕೆ ಮರಳುವಂತೆ ಮಾಡುತ್ತಾರೆ.

ಇನ್ನು ಈ ಎಲ್ಲ ಬೆಳವಣಿಗಗಳು ನಡೆಯುವಷ್ಟರಲ್ಲಿ ವಾರ ಕಳೆದಿರುತ್ತದೆ. ಬಳಿಕ ಅಮಾನತು ಅದೇಶವನ್ನು ರದ್ಧು ಮಾಡದೆ ವಿಚಾರಣೆಗೆ ಕಾಯ್ದಿರಿಸಲಾಗಿದೆ ಎಂದು ಹೇಳಿ ಬೇರೆ ಡಿಪೋಗಳಿಗೆ ವರ್ಗಾವಣೆ ಮಾಡಿ ಇತ್ತ ಲಂಚ ಪಡೆದು ನೌಕರರನ್ನು ಹಿಂಸಿಸುವುದು. ಇದು ಈ ಒಂದು ವಿಭಾಗ, ಘಟಕದಲ್ಲಿ ಮಾತ್ರವಲ್ಲ ಸಾಋಿಗೆಯ ನಾಲ್ಕೂ ನಿಗಮಗಳಲ್ಲೂ ನಡೆಯುತ್ತಿರುವ ಲಂಚಾವತಾರ ಮತ್ತು ಭ್ರಷ್ಟಾಚಾರ.

ನೌಕರರಿಗಿಂತ ಹೆಚ್ಚು ವೇತನವನ್ನು ಪಡೆಯುತ್ತಿರುವ ಈ ಅಧಿಕಾರಿಗಳು ತಮ್ಮದೇ ನೌಕರರನ್ನು ಲಂಚಕ್ಕಾಗಿ ಈ ರೀತಿ ಒಂದೊಂದು ಕಾರಣವನ್ನಿಟ್ಟುಕೊಂಡು ಹಿಂಸಿಸುವುದು ಎಷ್ಟು ಸರಿ. ಇಂಥ ಲುಚ್ಚಕೆಲಸಕ್ಕೆ ಕೆಲ ಅಧಿಕಾರಿಗಳು ಕೈ ಚಾಚುತ್ತಿರುವುದರಿಂದ ನಿಷ್ಠಾವಂತ ಅಧಿಕಾರಿಗಳಿಗೂ ಕೆಟ್ಟ ಹೆಸರು ಬರುತ್ತಿದೆ.

ಇನ್ನು ಇದು ಸತ್ಯವಾ ಅಥವಾ ಸುಳ್ಳಾ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಸಂಬಂಧಿಸಿದ ಮೇಲಧಿಕಾರಿಗಳು ಮಾರುವೇಷದಲ್ಲಿ ಹೋಗಿ ತಿಳಿದುಕೊಳ್ಳಬೇಕು. ಇಲ್ಲ ಇದೆಲ್ಲವೂ ನಮಗೂ ತಿಳಿದಿದೆ ಎಂದು ಕಂಡುಕಾಣದಂತೆ ವರ್ತಿಸಿದರೆ ನೌಕರರನ್ನು ಆ ದೇವರೇ ಕಾಪಾಡಬೇಕಷ್ಟೇ…

Leave a Reply

error: Content is protected !!
LATEST
BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ