ರಾಮನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ ಆರೆಸ್ಸೆಸ್ ಕೀಲುಗೊಂಬೆಯಾಗಿದ್ದು, ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಚಾಮರಾಜಪೇಟೆಯ ಕೇಶವ ಕೃಪದ ಕೃಪಾಕಟಾಕ್ಷ ಮತ್ತು ನಿರ್ದೇಶನದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬಿಡದಿಯಲ್ಲಿ ಮಂಗಳವಾರ ಪತ್ರ ಕರ್ತರಜೊತೆ ಅವರುಮಾತನಾಡಿದರು. ಕಳೆದ ಹಲವು ದಿನಗಳಿಂದ ಆರೆಸ್ಸೆಸ್ ಬಗ್ಗೆ ಅಧ್ಯ ಯನಮಾಡುತ್ತಿದ್ದೇ ನೆ. ಈ ಸಂಘಟನೆ ಹೇಗೆ ಕೆಲಸಮಾಡುತ್ತದೆ ಹಾಗೂ ಚುನಾಯಿತ ಸರ್ಕಾರಗಳನ್ನು ಹೇಗೆ ಕಪಿಮುಷ್ಟಿ ಯಲ್ಲಿ ಇಟ್ಟು ಕೊಳ್ಳು ತ್ತದೆ ಎಂಬುದನ್ನು ತಿಳಿದು ಆಘಾತ ಆಯಿತು.
ಸಂಘದ ಐಡಿಯಾಲಜಿಹೊಂದಿರುವ ಅಧಿಕಾರಿಗಳನ್ನು ತನ್ನ ತಾಳಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುತ್ತಿದೆ. ದೇಶದ ನಾಗರಿಕ ಸೇವೆ ಅಧಿಕಾರಿಗಳು ಸೇರಿದಂತೆ ನಾಲ್ಕು ಸಾವಿರಕ್ಕೂ ಹೆಚ್ಚು ಅಧಿಕಾರಿಗಳು ಸಂಘದ ತರಬೇತಿ ಪಡೆದು ಕೆಲಸಮಾಡುತ್ತಿದ್ದಾರೆ ಎಂದರು.
ಕೇಂದ್ರ ಮತ್ತು ರಾಜ್ಯ ದಲ್ಲಿ ಆಡಳಿತ ನಡೆಸುತ್ತಿರುವ ನಾಯಕರಿಗೆ ಸ್ವಾ ತಂತ್ರ್ಯ ಇಲ್ಲ . ನಮ್ಮ ರಾಜ್ಯ ದ ಬಿಜೆಪಿ ಸರ್ಕಾರದ ಎರಡನೇಮುಖ್ಯ ಮಂತ್ರಿ ಕೇಶವಕೃಪಕ್ಕೆ ಏಕೆಹೋಗುತ್ತಾರೆ? ಎಲ್ಲಿಯೇಹೋದರೂ ಆರೆಸ್ಸೆಸ್ ಕಚೇರಿಗಳಿಗೆಯಾಕೆಹೋಗುತ್ತಾರೆ? ಎಂದು ಪ್ರ ಶ್ನಿಸಿದರು.
ರಾಜ್ಯ ದಲ್ಲಿ ಇರುವುದು ಸಂಪೂರ್ಣ ಆರೆಸ್ಸೆಸ್ ಸರ್ಕಾರ. ಆದರೆ ಕೇಶವಕೃಪಕ್ಕೆ ಜನ ಮತ ಹಾಕಿಲ್ಲ ಎಂಬುದನ್ನು ಆಡಳಿತ ನಡೆಸುವವರು ಅರ್ಥಮಾಡಿಕೊಳ್ಳಬೇಕು ಎಂದರು.
ಹಿಂದುತ್ವ ಹಾಗೂ ಕೋಮುವಾದವನ್ನು ಹರಡುವ ಕೆಲಸವನ್ನು ಬಿಟ್ಟ ರೆ ಬೇರೆಯಾವ ಸಾಧನೆಯನ್ನೂ ಅದುಮಾಡಿಲ್ಲ . ದೇಶದ ಬಡತನದ ಬಗ್ಗೆ , ಸಮಸ್ಯೆ ಗಳ ಬಗ್ಗೆ ಆರ್ಎಸ್ಎಸ್ ಸಭೆಗಳಲ್ಲಿ ಚರ್ಚೆ ಆಗಿಲ್ಲ. ದೇಶವನ್ನು ಕಪಿಮುಷ್ಠಿ ಯಲ್ಲಿ ಇಟ್ಟು ಕೊಳ್ಳು ವುದು ಒಂದೇ ಅವರ ಅಜೆಂಡಾ. ಆರೆಸ್ಸೆಸ್ ಅನ್ನೇ ಕೇಂದ್ರ ಬಿಂದು ಆಗಿಸಿಕೊಂಡು ಬಿಜೆಪಿ ಕೆಲಸಮಾಡುತ್ತಿದೆ.
ರಾಜಕೀಯವಾಗಿ ಪಕ್ಷಕ್ಕೆ ಸ್ವಾತಂತ್ರ್ಯ ಇಲ್ಲ. ಕೆಲ ವರ್ಷಗಳ ಹಿಂದೆ ಬಿಜೆಪಿಯನ್ನೇ ವಿಸರ್ಜಿಸಿಹೊಸ ಪಕ್ಷ ರಚನೆಯತ್ತ ಅದು ಅಲೋಚನೆಮಾಡಿತ್ತು ಎಂದು ಕುಮಾರಸ್ವಾಮಿ ಆರೋಪಿಸಿದರು.
ರಾಜ್ಯ ದಲ್ಲಿ ಮತಾಂತರ ನಿಷೇಧ ವಿಧೇಯಕದಿಂದ ಮತಾಂತರವನ್ನು ನಿಲ್ಲಿಸಲು ಸಾಧ್ಯವಿಲ್ಲ . ಶಿಕ್ಷಣ, ಆರೋಗ್ಯ , ವಸತಿಮುಂತಾದ. ಸೌಲಭ್ಯ ಗಳನ್ನು ಉತ್ತಮವಾಗಿ ಒದಗಿಸಿದ್ದಿದ್ದರೆ ಮತಾಂತರ ಎನ್ನು ವ ಶಬ್ದ ವೇ ಕೇಳುತ್ತಿರಲಿಲ್ಲ.
ಸ್ವಯಂಪ್ರೇರಿತರಾಗಿ ಬೇರೆ ಧರ್ಮಕ್ಕೆ ಜನಹೋಗುತ್ತಿರುವ ಉದಾಹರಣೆ ಇದೆ. ಬಾಬಾ ಸಾಹೇಬ್ ಅಂಬೇಡ್ಕ ರ್ ಅವರೇ ಬೌದ್ಧ ಧರ್ಮಕ್ಕೆ ಹೋದರು. ಇದು ಇಂದಿನ ಸಮಸ್ಯೆ ಅಲ್ಲ ಎಂದರು.