ರಾಯಚೂರು: ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮಲು ಅ. 7 ಮತ್ತು 8 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅ.7ರಂದು ಗುರುವಾರ ಸಂಜೆ 6..30ಗಂಟೆಗೆ ಸಿಂಧನೂರಿನಲ್ಲಿ ವಾಸ್ತವ್ಯ. ಅ.8ರ ಬೆಳಿಗ್ಗೆ 10ಗಂಟೆಗೆ ಸಿಂಧನೂರಿನ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಲೋಕಾರ್ಪಣೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ.
11.30ಕ್ಕೆ ಮಸ್ಕಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಲೋಕಾರ್ಪಣೆ.
ಮಧ್ಯಾಹ್ನ 12.45ಕ್ಕೆ ನದಲಕಲ್ಲು, ಕವಿತಾಳ ಮೊರಾರ್ಜಿ ದೇಸಾಯಿ, ಸಿರವಾರ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಮಲ್ಲಟದಲ್ಲಿರುವ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳ ಲೋಕಾರ್ಪಣೆ .
ಮಧ್ಯಾಹ್ನ 3.30ಗಂಟೆಗೆ ರಾಯಚೂರು ನಗರದ ಸಮೃದ್ಧಿ ಯೋಜನೆಯಡಿ ಫಲಾನುಭವಿಯ ಬ್ಲಾಕ್ ಬ್ರಡ್ ಬಟ್ಟೆ ಅಂಗಡಿ ಹಾಗೂ ಆರೋಗ್ಯ ಆರ್ಗಾನಿಕ್ ಸ್ಟೋರ್ ಉದ್ಘಾಟನೆ ಹಾಗೂ 4ಗಂಟೆಗೆ ನಗರದ ವಾಲ್ಮೀಕಿ ಭವನ ಲೋಕಾರ್ಪಣೆ.
4.30ಕ್ಕೆ ನಗರದ ಗ್ರೀನ್ ಪ್ಯಾಲೇಸ್ ಸಭಾಂಗಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಗಳಡಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮ.
ಸಂಜೆ 6ಗಂಟೆಗೆ ನಗರದಿಂದ ರಸ್ತೆ ಮಾರ್ಗವಾಗಿ ಯಾದಗಿರಿ ಜಿಲ್ಲೆಗೆ ತೆರಳುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.