NEWSಲೇಖನಗಳುಶಿಕ್ಷಣ-

ಕರ್ಮ ಅಂದರೇನು? ಗೊತ್ತಿಲ್ಲದೇ ಹೋದರೆ ಈ ಕಥೆ ಕಣ್‌ತೆರೆಸಲಿದೆ!

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಒಂದು ಊರಿನಲ್ಲಿ ಒಬ್ಬ ಪ್ರಜಾಪಾಲಕನಾದ ರಾಜನಿದ್ದ. ಅವನಿಗೆ ಮೂರು ಜನ ಮಂತ್ರಿಗಳಿದ್ದರು. ಈ ಮೂರು ಜನ ಮಂತ್ರಿಗಳಲ್ಲಿ, ಒಳ್ಳೆಯವರೂ ಮತ್ತು ಕುತಂತ್ರಿಗಳು ಇದ್ದರು.

ಆದರೆ …

ರಾಜನ ಎದುರಲ್ಲಿ ಸಭ್ಯನಂತೆ ವರ್ತಿಸಿ, ಒಳಗಳೊಗೆ ರಾಜನ ಆಜ್ಞೆಯನ್ನು ನಿರ್ಲಕ್ಷಿಸುತ್ತಿದ್ದರು .

ರಾಜ ಅದೊಂದು ದಿನ ತನ್ನ ಮೂರು ಮಂತ್ರಿಗಳನ್ನು ಬಳಿಗೆ ಕರೆಯುತ್ತಾನೆ.

ಮೂರು ಜನರಿಗೆ
ಒಂದೊಂದು ಗೋಣಿಯನ್ನು ಕೊಟ್ಟು, ಕಾಡಿಗೆ ಹೋಗಿ ನಾಳೆ ಸಂಜೆಯೊಳಗೆ ಕಾಡಿನಲ್ಲಿ ಸಿಗುವ ಅತ್ಯುತ್ತಮವಾದ ಹಣ್ಣುಗಳನ್ನು ಆಯ್ದು ತುಂಬಿಕೊಂಡು ಬರುವಂತೆ ಆಜ್ಞೆ ಮಾಡುತ್ತಾನೆ .

ಮೂರು ಮಂತ್ರಿಗಳಲ್ಲಿ
ಒಬ್ಬ ರಾಜನ ಆಜ್ಞೆಯನ್ನು
ನಿಯತ್ತಿನಿಂದ ಕಾಡು ಸುತ್ತಿ ಒಳ್ಳೆಯ ಮತ್ತು ತಿನ್ನಲು
ಯೋಗ್ಯವಾದ ಹಣ್ಣುಗಳನ್ನು ಆಯ್ದು ತುಂಬಿಸಿಕೊಳ್ಳುತ್ತಾನೆ.

ಎರಡನೆಯವನು ಅಯ್ಯೋ
ರಾಜರು ಒಳಗೆಲ್ಲಿ ನೋಡುತ್ತಾರೆ? ಮೇಲೆ ಸ್ವಲ್ಪ ಒಳ್ಳೆಯ ಹಣ್ಣುಗಳನ್ನು ತುಂಬಿಸಿ ಕೆಳಗೆ ಕೊಳೆತ ಹಣ್ಣುಗಳನ್ನು ತುಂಬಿಸಿಕೊಳ್ಳುತ್ತಾನೆ. ಇನ್ನು

ಮೂರನೆಯವನು ಅಯ್ಯೋ ರಾಜ ನೋಡುವುದೇ ಇಲ್ಲ. ಯಾರು ಕಾಡು ಸುತ್ತಿ ಹಣ್ಣು ಆರಿಸಿ ತರೋದು? ಎಂದು ತರಗೆಲೆ ಮತ್ತು ಕಸಕಡ್ಡಿ ತುಂಬಿಸಿಕೊಂಡು ಹೋಗುತ್ತಾನೆ.

ಮಾರನೇ ದಿನ…

ಮಂತ್ರಿಗಳು ಗೋಣಿಯ ಮೂಟೆಯನ್ನು ಅರಸನ
ಮುಂದಿಡುತ್ತಾರೆ.

ಅರಸ ಅದನ್ನು ಪರೀಕ್ಷಿಸುವುದಿಲ್ಲ.
ಬದಲಾಗಿ ಭಟ್ಟರನ್ನು ಕರೆದು ಹೇಳುತ್ತಾನೆ ಈ ಮೂರು ಜನರನ್ನು ಜೈಲಿಗಟ್ಟಿ, ಅವರವರು ತಂದ ಹಣ್ಣಿನ ಮೂಟೆ ಅವರವರ
ಬಳಿ ಇರಲಿ. ಸ್ವಲ್ಪದಿನ ತಿನ್ನಲು ಏನನ್ನೂ ಕೊಡಬೇಡಿ ಎಂದು ಆಜ್ಞೆಯನ್ನು ಕೊಡುತ್ತಾನೆ .

ಸ್ವಲ್ಪ ದಿನದ ನಂತರ ಬಾಗಿಲು ತೆರೆದಾಗ,

ಪ್ರಾಮಾಣಿಕವಾಗಿ
ಉತ್ತಮವಾದ ಹಣ್ಣುಗಳನ್ನು ತಂದವ ಆರೋಗ್ಯವಂತನಾಗಿ ಹೊರ ಬರುತ್ತಾನೆ.

ಕೊಳೆತ ಹಣ್ಣುಗಳನ್ನು ಪೇರಿಸಿಟ್ಟ ಮಂತ್ರಿ ರೋಗಗ್ರಸ್ತನಾಗಿದ್ದ. ಇನ್ನು ತಿನ್ನಲು ಯೋಗ್ಯವಲ್ಲದ
ವಸ್ತುಗಳನ್ನು ತಂದ ಮಂತ್ರಿ
ಕೊನೆಯುಸಿರೆಳೆದಿರುತ್ತಾನೆ .

ಇದೆ ಕರ್ಮ,
ಉತ್ತಮವಾದ ಕೆಲಸಕ್ಕೆ ಉತ್ತಮವಾದ
ಪರಿಣಾಮ, ಕೆಟ್ಟ ಕೆಲಸದಿಂದ ಕೆಟ್ಟ ಪರಿಣಾಮ .

ನಮಗೆ ಕೊಟ್ಟ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ಅದು ಎಂದಿದ್ದರೂ ನಮಗೇ ಒಳ್ಳೆಯದಾಗುತ್ತದೆ ಇಲ್ಲ ಹೀಗಾಗುತ್ತದೆ .

ಹೀಗೆ ಒಬ್ಬ ಮನೆ ಕಟ್ಟುವ ಗಾರೆಯವನಿದ್ದ. ಅವನು ಹಲವಾರು ಮನೆಗಳನ್ನು ಕಟ್ಟಿ ಕೊಡುತ್ತಿದ್ದ ತನ್ನ ಯಜಮಾನನಿಗೆ .

ಹೀಗೆ ಅವನಿಗೂ ವಯಸ್ಸಾಯ್ತು ಆಗ ಅವನು ಯಜಮಾನನಿಗೆ ಅಯ್ಯಾ ಇನ್ನು ನನ್ನಿಂದ ಮನೆಕಟ್ಟಲು ಸಾಧ್ಯವಿಲ್ಲ ಕೆಲಸದಿಂದ ವಿಶ್ರಾಂತಿ ಪಡೆಯುವೆ ಅಂದಾಗ ಅವನ ಯಜಮಾನ ಸರಿನಪ್ಪಾ ಆದರೆ ಇದೊಂದು ಮನೆ ಕಟ್ಟಿ ಕೊಡು ಇದೇ ಕಡೆ ನಂತರ ವಿಶ್ರಾಂತಿ ಪಡೆ ಅಂದಾಗ .

ಬಹಳಷ್ಟು ಮನೆ ಕಟ್ಟಿದ್ದ ಇವನಿಗೆ ಇಂದೇಕೋ ಕಡೆಯ ಮನೆ ಎಂದು ನಿರ್ಲಕ್ಷಿಸಿ ಸರಿಯಾದ ಗುಣ ಮಟ್ಟದಲ್ಲಿ ಕಟ್ಟುವುದಿಲ್ಲ .

ಮನೆ ಅಷ್ಟು ಗುಣಮಟ್ಟದ್ದಾಗಿರಲಿಲ್ಲ ಹೇಗೋ ಇಷ್ಟ ವಿಲ್ಲದೆ ಗಮನ ಕೊಡದೆ ಬಯ್ದು ಕೊಂಡೆ ಕಟ್ಟಿ ಯಜಮಾನನಿಗೆ ಕೊಟ್ಟ .

ಆಗ ಆ ಯಜಮಾನ ಅಯ್ಯಾ ತೆಗೆದುಕೋ ಈ ಮನೆಯ ಕೀಲಿ ಕೈ ಇಷ್ಟು ದಿನ ನನಗಾಗಿ ನೂರಾರು ಮನೆ ಕಟ್ಟಿ ಕೊಟ್ಟೆ .

ಅದಕ್ಕಾಗಿ ಈಗ ಕಟ್ಟಿದ ಈ ಮನೆಯ ಯಜಮಾನ ನೀನೆ ಎಂದಾಗ ಗಾರೆ ಕೆಲಸದವ ಕಣ್ಣಲ್ಲಿ ನೀರಾಕಿ ಕೊಳ್ಳುವ ಅಯ್ಯೋ ನನ್ನ ಮತಿಗೇಡಿ ಬುದ್ದಿಗಿಷ್ಟು.

ಇಷ್ಟು ವರ್ಷ ಎಂತೆಂತ ಚೆನ್ನಾಗಿರುವ ಮನೆ ಕಟ್ಟಿದೆ ಆದರೆ ಈ ಮನೆ ಕಡೆಯದು ಎಂದು ನಿರ್ಲಕ್ಷಿಸಿದೆ ನೋಡಿದರೆ ನನಗೆ ಬಹುಮಾನ ವಾಗಿ ಬಂದ ಮನೆಯನ್ನು ನಾನೆ ನನ್ನ ಕೈಯಾರ ಹಾಳು ಮಾಡಿಕೊಂಡೆನಲ್ಲಾ ಎಂದು ಒಳಗೆ ತನ್ನನ್ನು ಶಪಿಸುತ್ತಾ ಮನೆಯೊಳಗೆ ಹೋಗುತ್ತಾನೆ .

ಇದೇ ಕರ್ಮ. ಒಳ್ಳೆಯ ಕೆಲಸಕ್ಕೆ ಒಳ್ಳೆಯ ಪ್ರತಿಫಲ‌ಸಿಗುತ್ತದೆ. ನಮ್ಮ ಸ್ವಾರ್ಥಕ್ಕೆ ಕೆಟ್ಟ ಫಲ ಸಿಗುತ್ತದೆ.

Leave a Reply

error: Content is protected !!
LATEST
BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ