ಬಳ್ಳಾರಿ: 130 ಕೋಟಿ ಜನರು ಆಯ್ಕೆ ಮಾಡಿದ ಪ್ರಧಾನ ಮಂತ್ರಿಗಿಂತ ಈತ ದೊಡ್ಡವನಾ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ನಗಹರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ 60 ವರ್ಷದಲ್ಲಿ ದಲಿತರು ಹಾಗೂ ಅಲ್ಪ ಸಂಖ್ಯಾತರಿಗೆ ಏನು ಮಾಡಿದೆ ಎನ್ನುವುದನ್ನು ಮೊದಲು ಸಾಬೀತುಪಡಿಸಲಿ ಎಂದು ಹೇಳಿದರು.
ಇನ್ನು ರಾಜ್ಯದಲ್ಲಿ ಮುಂದಿನ ನಿಮ್ಮ ಸಿಎಂ ಅಭ್ಯರ್ಥಿ ಎಂದು ದಲಿತರೊಬ್ಬರ ನಾಯಕರ ಹೆಸರನ್ನು ಘೋಷಣೆ ಮಾಡಲಿ ಎಂದು ನಾನು ಹಾಕಿದ ಸವಾಲಿಗೆ ಮೊದಲ ಸಿದ್ದರಾಮಯ್ಯ ಉತ್ತರ ನೀಡಲಿ. ಆ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ ನಿಮ್ಮ ಸವಾಲಿಗೆ ಉತ್ತರ ನೀಡಲಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರು ಅಭಿವೃದ್ಧಿ ಹಾಗೂ ದಲಿತರ ವಿಷಯದಲ್ಲಿ ಬೊಮ್ಮಾಯಿ ಅವರಿಗೆ ಸವಾಲು ಹಾಕಿದ್ದಾರೆ. ಆ ಸವಾಲಿಗೆ ಉತ್ತರ ಪಡೆಯುವ ಮೊದಲು ನಾನು ಹಾಕಿದ ಸವಾಲಿಗೆ ಉತ್ತರ ನೀಡಲಿ ಎಂದು ಸವಾಲು ಹಾಕಿದರು.
ಇನ್ನು ನಾನು ದೊಡ್ಡವನು ಎಂದು ಸಿದ್ದರಾಮಯ್ಯ ಅನ್ಕೊಳ್ತಾ ಇರೋದು ಅವರ ಭ್ರಮೆ. ಸಿದ್ದರಾಮಯ್ಯ ಏನು ಡೊಡ್ಡ ಮನುಷ್ಯನಾ? 130 ಕೋಟಿ ಜನ ಅಯ್ಕೆ ಮಾಡಿದ ಪ್ರಧಾನಿಮಂತ್ರಿಗಿಂತ ಈತ ದೊಡ್ಡವನಾ? ಎಂದು ಪ್ರಶ್ನೆ ಮಾಡಿದ್ದಾರೆ.
ಆತ ಯಾರ ಬಗ್ಗೆ ಬೇಕಾದ್ರು ಮಾತನಾಡಬಹುದು, ಯಾರನ್ನು ಬೇಕಾದ್ರೂ ಗಿರಾಕಿ ಅನ್ನಬಹುದು. ಲೂಟಿಕೋರ ಅನ್ನಬಹುದಾ? ಸಿದ್ದರಾಮಯ್ಯ ಒಬ್ಬ ಪಳಗಿದ ರಾಜಕಾರಣಿಯಾಗಿ ಹೇಗಿರಬೇಕು? ಮುಂದಿನ ರಾಜಕಾರಣಿಗಳಿಗೆ ಅವರು ಒಂದು ಶಕ್ತಿಯಾಗಬೇಕು. ಅದನ್ನು ಬಿಟ್ಟು ನಾನು ದೊಡ್ಡವನು ಎಂದು ಎಲ್ಲರ ಬಗ್ಗೆ ಲಘುವಾಗಿ ಮಾತಾಡಬಹುದು ಎಂದು ತಿಳಿದುಕೊಂಡಿದ್ದಾರೆ. ಇದು ಅವರ ವಿನಾಶದ ಪರಮಾವಧಿ, ಮುಂದಿನ ಚುನಾವಣೆಯಲ್ಲಿ ಜನರಿಂದ ತಕ್ಕ ಉತ್ತರ ಸಿಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.