ಯುಕೆ: ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕಾನೂನನ್ನು ಎಷ್ಟೇ ಕಠಿಣವಾಗಿಸಿದರು ಅತ್ಯಾಚಾರಿಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ ಮತ್ತು ಈ ಸಮಸ್ಯೆಗೆ ಮುಕ್ತಿ ಸಿಗುತ್ತಿಲ್ಲ. ಅದರಂತೆ ಇಲ್ಲೊಬ್ಬ ವ್ಯಕ್ತಿ ಅಂದರೆ ಅತ್ಯಾಚಾರಿ ಶವಗಳನ್ನು ಬಿಡದೆ ಅತ್ಯಾಚಾರ ಮಾಡುತ್ತಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ.
ಇಂದೊಂದು ವಿಚಿತ್ರ ಪ್ರಕರಣ. ವ್ಯಕ್ತಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಕೊನೆಗೆ ಅವರನ್ನು ಕೊಲ್ಲುತ್ತಿದ್ದ. ಕೊಂದ ಬಳಿಕ ಶವದ ಜೊತೆಗೆ ಸಂಭೋಗಮಾಡುತ್ತಿದ್ದ. ಹೀಗೆ ಸುಮಾರು 100 ಮಹಿಳೆಯರ ಶವದ ಜೊತೆಗೆ ಸೆಕ್ಸ್ ಮಾಡಿದ್ದಾನೆ ಎಂದು ಬೆಳಕಿಗೆ ಬಂದಿದೆ.
ಯುನೈಟೆಡ್ ಕಿಂಗ್ಡಂನ ಸಸೆಕ್ಸ್ನಿಂದ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದ್ದು. ಇದನ್ನು ಡೈಲಿ ಮೇಲ್ ವರದಿ ಮಾಡಿದೆ. ಈ ಪ್ರಕಾರ, ಪುಲ್ಲರ್ ಎಂಬ ವ್ಯಕ್ತಿ ಮಹಿಳೆಯನ್ನು ಕೊಲೆ ಮಾಡಿ ನಂತರ ಶವದ ಜೊತೆಗೆ ಸೆಕ್ಸ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ . ಪುಲ್ಲರ್ ಆಸ್ಪತ್ರೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ.
ಪುಲ್ಲರ್ ಮಾಡುತ್ತಿದ್ದ ಈ ಕೃತ್ಯ ಕೊನೆಗೂ ಬೆಳಕಿಗೆ ಬಂದಿದೆ. ಸುಮಾರು 100 ವರ್ಷದ ವೃದ್ಧೆಯರು ಸೇರಿದಂತೆ 9 ವರ್ಷದ ಬಾಲಕಿಯನ್ನು ಕೊಂದು ಈ ರೀತಿ ಕೌರ್ಯ ಮೆರೆದಿದ್ದಾನೆ ಎಂದು ಗೊತ್ತಾಗಿದೆ. ಇಂತಹ ವಿಕೃತ ಮನಸ್ಸಿನ ವ್ಯಕ್ತಿ ಸುಮಾರು 100 ಮಹಿಳೆಯರನ್ನು ಕೊಂದು ಅತ್ಯಾಚಾರ ಮಾಡಿರುವ ಘಟನೆ ಯುನೈಟೆಡ್ ಕಿಂಗ್ಡಂನ ಜನರನ್ನು ಬೆಚ್ಚಿ ಬೀಳಿಸಿದೆ.
ಪುಲ್ಲರ್ ಟಾರ್ಗೆಟ್ ಮಾಡಿಕೊಂಡು ಮಹಿಳೆಯರನ್ನು ಕೊಲ್ಲುತ್ತಿದ್ದ. ಆತನ ಏಕಾಏಕಿ ಇಳಿಯುತ್ತಿರಲಿಲ್ಲ ದಾಖಲೆಯನ್ನಿಟ್ಟುಕೊಂಡು ಟಾರ್ಗೆಟ್ ಮಾಡುತ್ತಿದ್ದ ಎಂಬುದಕ್ಕೆ ಆತನ ಡೈರಿಯಲ್ಲಿ ಮಹಿಳೆಯರ ದಾಖಲೆಗಳು ಸಿಕ್ಕಿವೆ. ಫೋಟೋ ಮತ್ತು ಅವರ ವಾಸಸ್ಥಳ ಇನ್ನಿತರ ದಾಖಲೆಗಳನ್ನು ಪುಲ್ಲರ್ ಡೈರಿಯಲ್ಲಿ ನಮೂದಿಸಿಟ್ಟಿದ್ದನು.
ಪುಲ್ಲರ್ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಮಾಹಿತಿ ತೆಗೆಯುತ್ತಿದ್ದ. ಆದರೀಗ ಪುಲ್ಲರ್ ಮಾಡುತ್ತಿದ್ದಭಯಾನಕ ಕೃತ್ಯ ಬೆಳಕಿಗೆ ಬಂದಿದ್ದು, ಸರಿಯಾದ ಶಿಕ್ಷೆ ವಿಧಿಸಲಾಗಿದೆ. 51 ಪ್ರಕರಣಗಳ ತನಿಖೆಯಿಂದ ಆತನಗೆ ಶಿಕ್ಷೆಯಾಗಿದೆ. ಪುಲ್ಲರ್ ಕಂಪ್ಯೂಟರ್ನಲ್ಲಿ ಲಕ್ಷಾಂತರ ಮಹಿಳೆಯರ ಛಾಯಾಚಿತ್ರಗಳು ಪತ್ತೆಯಾಗಿವೆ ಎಂದು ತನಿಖೆ ನಡೆಸಿದ ಪೊಲೀಸರು ಬಹಿರಂಗಪಡಿಸಿದ್ದಾರೆ.