ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಕೋಟ್ಯಂತರ ರೂಪಾಯಿ ಉಳಿತಾಯ ಮಾಡಲು ಪಣ ತೊಟ್ಟಿರುವ ಸಂಘಟನೆಯೊಂದು ಸದ್ದಿಲ್ಲದೆ ನೌಕರರಿಗೆ ಅಪಘಾತ ರಹಿತ ಚಾಲನೆ ಬಗ್ಗೆ ಅರಿವು ಮೂಡಿಸುತ್ತಿದೆ.
ಹೌದು ಕಳೆದ 2 ವರ್ಷದಿಂದ ಅಖಿಲ ಕರ್ನಾಟಕ ರಸ್ತೆ ಸುರಕ್ಷತಾ ಸಂಘ ಜನ್ಮತಾಳಿದ್ದು ಇದು ಅಪಘಾತ ರಹಿತ ಚಾಲನೆ ಮಾಡಲು ಯಾವರಿ ವಾಹನಗಳನ್ನು ಚಲಾಯಿಸಬೇಕು ಎಂಬುದರ ಬಗ್ಗೆ ಕರ್ನಾಟಕ ರಾಜ್ಯದ ಸಾರಿಗೆ ನೌಕರರು, ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.
ಈ ಸಂಘದ ರಾಜ್ಯಾಧ್ಯಕ್ಷರಾಗಿ ಸಾರಿಗೆ ಸಂಸ್ಥೆಯ ನೌಕರ ಜಿ.ಮುನೇಶ್ ಇದ್ದು, ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಎ.ದ್ಯಾವಪ್ಪ ಮತ್ತು ಅವರ ತಂಡ ಅಪಘಾತ ತಪ್ಪಿಸಿ ಜೀವ ಉಳಿಸಿ ದೇಯೋದ್ದೇಶದೊದಿಗೆ ರಾಜ್ಯದಲ್ಲಿ ಸಂಭವಿಸುತ್ತಿರುವ ಅತಿ ಹೆಚ್ಚು ಅಪಘಾತಗಳ ತಡೆಯುವುದ ಹೇಗೆ ಎಂಬುದರ ಬಗ್ಗೆ ಸಾಮಾನ್ಯರಲ್ಲಿಯೂ ಅರಿವು ಮೂಡಿಸುತ್ತಿದ್ದಾರೆ.
ಈಗಾಗಲೇ ವಾಹನ ಚಾಲಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ರಾಜ್ಯದ ವಿವಿಧ ಜಿಲ್ಲೆಗಳ ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲೂ ಹಮ್ಮಿಕೊಂಡು ತಿಳಿವಳಿಕೆ ನೀಡಿದೆ. ಜತೆಗೆ ಕೆಲವು ಮುಖ್ಯವಾದ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸಿಕೊಟ್ಟು ವಾಹನ ಸವಾರರು, ಚಾಲಕರಿಗೆ ಅರಿವು ಮೂಡಿಸಲಾಗಿದೆ.
ಇಂತಹ ಸಮಯದಲ್ಲಿ ಕಳೆದ ಏಪ್ರಿಲ್‌ನಲ್ಲಿ ನಡೆಸ ಸಾರಿಗೆ ನೌಕರರ ಮುಷ್ಕರದ ವೇಳೆ ಸಂಘಟನೆಯ ಪದಾಧಿಕಾರಿಗಳನ್ನು ಇತರ ವಿಭಾಗಗಳಿಗೆ ವರ್ಗಾವಣೆ ಮಾಡಿ ಉತ್ತಮವಾದ ಸಂಘಟನೆಯ ಬಲವನ್ನು ಕುಗ್ಗಿಸುವ ಕೆಲಸವನ್ನು ಕೆಲ ಸಾರಿಗೆ ಅಧಿಕಾರಿಗಳು ಮಾಡಿದರು ಎಂಬ ಆರೋಪ ಕೇಳಿ ಬರುತ್ತಿದೆ.
ರಾಜ್ಯ ಜನ ಸಾಮಾನ್ಯರ ಜೀವ ಉಳಿಸುವ ಕಾಯಕದಲ್ಲಿ ತೊಡಗಿರುವ ನಮ್ಮ ಸಂಘಟನೆಯ ಪದಾಧಿಕಾರಿಗಳನ್ನು ವ್ಯವಸ್ಥಾಪಕ ನಿರ್ದೇಶಕರು ಪರಿಶೀಲನೆ ಮಾಡಿ ಅವಎ ಸೇವೆಗೆ ಬಲ ನೀಡುವ ಮೂಲಕ ಯಥಾಸ್ಥಿತಿ ಆದೇಶ ಮಾಡಿ ಮುಂದೆ ರೂಪಿಸುವ ಎಲ್ಲಾ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ಏರ್ಪಡಿಸಲು ಅನುಕೂಲ ಮಾಡಿಕೊಡಬೇಕು ಎಂದು ಜಿ.ಮುನೇಶ್ ಮತ್ತು ದ್ಯಾವಪ್ಪ ಮನವಿ ಮಾಡಿದ್ದಾರೆ.