ಸಾರಿಗೆ ಸಚಿವರ ಎಚ್ಚರಿಕೆಗೆ ಕ್ಯಾರೆ ಎನ್ನದ MSRTC ನೌಕರರಿಂದ ಮುಷ್ಕರ ಇನ್ನಷ್ಟು ತೀವ್ರ
ಮುಂಬೈ: ಸರ್ಕಾರದೊಂದಿಗೆ ಸಾರಿಗೆ ನಿಗಮವನ್ನು ವಿಲೀನ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟು ಮುಷ್ಕರ ನಡೆಸುತ್ತಿರುವ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (MSRTC) ನೌಕರರಿಗೆ ಶುಕ್ರವಾರ ಕರ್ತವ್ಯಕ್ಕೆ ಮರಳುವಂತೆ ಸಾರಿಗೆ ಸಚಿವ ಅನಿಲ್ ಪರಬ್ ಎಚ್ಚರಿಕೆ ನೀಡಿದರೂ ಜಗ್ಗದೆ ನೌಕರರ ಒಂದು ವರ್ಗ ಮುಷ್ಕರ ನಡೆಸುತ್ತಿದ್ದಾರೆ.
ಸಚಿವರ ಎಚ್ಚರಿಕೆಗೆ ಕ್ಯಾರೆ ಎನ್ನದ ಕಾರ್ಮಿಕರು ಇಂದು (ಶುಕ್ರವಾರ) ಬೆಳಗ್ಗೆ ಕೆಲಸಕ್ಕೆ ಮರಳಿಲ್ಲ ಎಂದು ನಿಗಮದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇನ್ನು ಎಷ್ಟು ಮಂದಿ ನೌಕರರು ಶುಕ್ರವಾರ ರಾಜ್ಯದಾದ್ಯಂತ ಕರ್ತವ್ಯಕ್ಕೆ ಮರಳಿದ್ದಾರೆ ಎಂಬ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಆ ಅಧಿಕಾರಿ ಹೇಳಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಯವರೆಗೆ ರಾಜ್ಯದಾದ್ಯಂತ ಸಾರಿಗೆ ಸಂಸ್ಥೆಯ ಕೇವಲ 151 ಬಸ್‌ಗಳು ಮಾತ್ರ ರಸ್ತೆಗಿಳಿದಿವೆ. ಅವುಗಳಲ್ಲಿ ಹೆಚ್ಚಿನವು ಸಾಂಗ್ಲಿ ಮತ್ತು ರಾಯಗಡ ವಿಭಾಗಗಳಲ್ಲಿ ಚಂಚರಿಸುತ್ತಿವೆ. ಈ ಬಸ್‌ಗಳಲ್ಲಿ 116 ಸಾಮಾನ್ಯ, ಉಳಿದವು ಹವಾನಿಯಂತ್ರಿತ ‘ಶಿವನೇರಿ’ ಮತ್ತು ‘ಶಿವಶಾಹಿ’ ಬಸ್‌ಗಳಾಗಿವೆ ಎಂದು ಎಂಎಸ್‌ಆರ್‌ಟಿಸಿ ವಕ್ತಾರರು ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸ್ಥಾನಮಾನ ಹಾಗೂ ಉತ್ತಮ ವೇತನ ನೀಡುವಂತೆ ಹಾಗೂ ಆರ್ಥಿಕವಾಗಿ ಕುಸಿದಿರುವ ನಿಗಮವನ್ನು ರಾಜ್ಯ ಸರ್ಕಾರದೊಂದಿಗೆ ವಿಲೀನಗೊಳಿಸುವಂತೆ ಒತ್ತಾಯಿಸಿ MSRTC ನೌಕರರು ಅಕ್ಟೋಬರ್ 28 ರಿಂದ ಮುಷ್ಕರ ನಡೆಸುತ್ತಿದ್ದು, ಇಂದಿಗೆ 30 ನೇ ದಿನಕ್ಕೆ ಕಾಲಿಟ್ಟಿದೆ.
ಮುಷ್ಕರವನ್ನು ಹತ್ತಿಕ್ಕುವ ಪ್ರಯತ್ನದಲ್ಲಿ, ಪರಬ್ ಬುಧವಾರ ನೌಕರರ ಮೂಲ ವೇತನದಲ್ಲಿ 2,500 ರಿಂದ 5,000 ರೂ.ಗಳ ಹೆಚ್ಚಳವನ್ನು ಘೋಷಿಸಿದರು ಮತ್ತು ನೌಕರರು ಕರ್ತವ್ಯಕ್ಕೆ ಮರಳಲು 24 ಗಂಟೆಗಳ ಗಡುವನ್ನು ನೀಡಿದ್ದರು.
ಆ ಗಡುವು ಇಂದಿಗೆ ಮುಗಿದಿದ್ದು, ನೌಕರರು ಕೆಲಸಕ್ಕೆ ಮರಳುತ್ತಾರೆ ಎಂಬ ಲೆಕ್ಕಚಾರದಲ್ಲಿದ್ದ ಸರ್ಕಾರಕ್ಕೆ ನೌಕರರು ಮರಳದೆ ತಮ್ಮ ಹೋರಾಟ ಮುಂದುವರಿಸಿರುವುದು ನುಂಗಲಾದರ ಬಿಸಿ ತುಪ್ದ್ದುಪವಾಗಿ ಪರಿಣಮಿಸಿದೆ. ಈ ನಡುವೆ ವಿಲೀನ ಮಾಡಲೇಬೇಕು ಎಂದು ಪಟ್ಟು ಹಿಡಿದು ನೌಕರರು ಕುಳಿತ್ತಿದ್ದಾರೆ.
ಇನ್ನೊಂದೆಡೆ ನೌಕರರಿಗೆ ವೇತನ ಹೆಚ್ಚಳ ಮಾಡಿದರೂ ಕೆಲಸಕ್ಕೆ ಮರಳುತ್ತಿಲ್ಲ ಎಂದು ಕುಪಿಗೊಂಡಿರುವ ಸಚಿವರು ನೌಕರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಹೇಳಿದ್ದಾರೆ.
MSRTC ಸುಮಾರು 16,000 ಬಸ್‌ಗಳು ಮತ್ತು ಸುಮಾರು 93,000 ಉದ್ಯೋಗಿಗಳನ್ನು ಹೊಂದಿರುವ ಅತಿದೊಡ್ಡ ಸಾರ್ವಜನಿಕ ಸಾರಿಗೆ ಸಂಸ್ಥೆಗಳಲ್ಲಿ ಒಂದಾಗಿದೆ. ನಷ್ಟದಲ್ಲಿರುವ ನಿಗಮವು ಕೊರೊನಾಗೂ ಮುನ್ನ ಪ್ರತಿ ನಿತ್ಯ ಸುಮಾರು 65 ಲಕ್ಷ ಜನರನ್ನು ಸುರಕ್ಷಿತವಾಗಿ ಅವರ ಸ್ಥಳಗಳಿಗೆ ತಲುಪಿಸುತ್ತಿತ್ತು.
Related
You Might Also Like
ಬೆಳಗಾವಿ: ಸಚಿವರ ಕಾರು ಅಪಘಾತ- ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನು ಮೂಳೆ ಮುರಿತ
ಬೆಳಗಾವಿ: ಕಾರಿಗೆ ನಾಯಿಯೊಂದು ಅಡ್ಡ ಬಂದ ಪರಿಣಾಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ...
BMTC ಕಂಡಕ್ಟರ್: 1ನೇ ಮದುವೆ ಮುಚ್ಚಿಟ್ಟು ಯುವತಿ ಜತೆ ಲವ್ವಿಡವ್ವಿ – ಬಳಿಕ ತಾಳಿ ಕಟ್ಟಿ ಗರ್ಭಿಣಿ ಮಾಡಿ ವಲ್ಲೆ ಎನ್ನುತ್ತಿರುವ ಕಿರಾತಕ
ಬೆಂಗಳೂರು: ಎಂ.ಎಸ್.ಪಾಳ್ಯದಿಂದ-ಯಲಹಂಕ ಮಾರ್ಗದಲ್ಲಿ ಟಿಕೆಟ್ ಕೊಡುತ್ತಲೇ ಮುಗ್ದ ಯುವತಿಯನ್ನು ಕಂಡಕ್ಟರ್ ಪಟಾಯಿಸಿದ್ದು, ಮದುವೆಯಾದ ಮೂರೇ ತಿಂಗಳಿಗೆ ಾತನ ಅಸಲಿ ಮುಖ ಬಯಲಾಗಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ....
KSRTC: ಪ್ರಯಾಣಿಕರು ಕಳೆದುಕೊಂಡಿದ ಬೆಲೆ ಬಾಳುವ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ತುರುವೇಕೆರೆ ಘಟಕದ ನೌಕರರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲನಾ ಸಿಬ್ಬಂದಿ, ಅಂದರೆ ಚಾಲಕ ನಿರ್ವಾಹಕರು ಪ್ರಾಮಾಣಿಕತೆ ಮೆರೆಯು ಮೂಲಕ ಇತರರಿಗೆ ಮಾದರಿಯಾಗುತ್ತಿರುವುದು ನಿರಂತರವಾಗಿದೆ. ಇದು ಒಂದು ರೀತಿ...
ಮೈಸೂರು: ಬೇಡಿಕೆ ಈಡೇರಿಕೆಗೆ ಮೀನಮೇಷ ಎಣಿಸುತ್ತಿರುವ ಪ್ರಧಾನಿ, ಕೃಷಿ ಮಂತ್ರಿಗಳ ಪ್ರತಿಕೃತಿ ದಹಿಸಲು ಯತ್ನಿಸಿದ ರೈತರ ಬಂಧನ
ಮೈಸೂರು: ರೈತ ವಿರೋಧಿ ಕೇಂದ್ರ ಸರ್ಕಾರದ ವರ್ತನೆ ಖಂಡಿಸಿ ದಲೈವಾಲ ಹೋರಾಟವನ್ನು ಬೆಂಬಲಿಸಿ ಪ್ರಧಾನ ಮಂತ್ರಿ ಹಾಗೂ ಕೃಷಿ ಮಂತ್ರಿಗಳ ಪ್ರತಿಕೃತಿ ದಹನ ಮಾಡಲು ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ...
ಹೈಪರ್‌ಟೆನ್ಷನ್: ಭಾರತದ ಯುವಜನತೆಗೆ ಅಡಗಿದ ಅಪಾಯ: ಡಾ.ಸಾಯಿಶಂಕರ್
ಬೆಂಗಳೂರು: ಯುವ ದಿನ, ಜನವರಿ 12 ರಂದು, ಸ್ವಾಮಿ ವಿವೇಕಾನಂದರ ಪ್ರೇರಣಾದಾಯಕ ಜೀವನ ಮತ್ತು ಉಪದೇಶಗಳನ್ನು ಆಚರಿಸುತ್ತದೆ. ಅವರ ಉಪದೇಶಗಳು ಪೀಳಿಗೆಗಳನ್ನು ಪ್ರೇರೇಪಿಸುತ್ತಿವೆ ಎಂದು ಏಮ್ಸ್ ಮತ್ತು...
ಹುಬ್ಬಳ್ಳಿ: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಜಾರಿಗೆ ಸಿಎಂ ಒತ್ತಾಯಿಸಿ: ಸಚಿವರಿಗೆ ವಾಯವ್ಯ ವಲಯ ನೌಕರರ ಕೂಟ ಮನವಿ
ಹುಬ್ಬಳ್ಳಿ: ಚುನಾವಣಾ ಪೂರ್ವ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಂತೆ ಸರಿಸಮಾನ ವೇತನ (7 ನೇ ವೇತನ ಆಯೋಗ ಮಾದರಿಯಲ್ಲಿ) ನೀಡುವಂತೆ...
“ಕೆಎಸ್‌ಆರ್‌ಟಿಸಿ ಆರೋಗ್ಯ” ಯೋಜನೆ ಕುರಿತು ನೌಕರರಿಗೆ ಪತ್ರ ಬರೆದು ಖುಷಿ ಹಂಚಿಕೊಂಡ ಸಂಸ್ಥೆ ಎಂಡಿ ಅನ್ಬುಕುಮಾರ್
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬ ನೌಕರರು ಉತ್ತಮ ಆರೋಗ್ಯದಿಂದ ಇರಬೇಕು ಎಂಬ ಸದುದ್ದೇಶದಿಂದ "ಕೆಎಸ್‌ಆರ್‌ಟಿಸಿ ಆರೋಗ್ಯ" ಯೋಜನೆಯನ್ನು ರೂಪಿಸಿದ್ದು, ಮುಖ್ಯಮಂತ್ರಿಗಳು...
BMTC: ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯಕ್ಕೆ ನೌಕರರಿಂದ ದಾಖಲೆ ಸಂಗ್ರಹಿಸಲು ಮೂವರು ಅಧಿಕಾರಿಗಳ ನಿಯೋಜನೆ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳು/ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ನೀಡುವುದಕ್ಕೆ ಬೇಕಾದ ದಾಖಲೆಗಳನ್ನು ಸಂಗ್ರಹಿಸಲು ಮೂವರು ಅಧಿಕಾರಿಗಳನ್ನೊಳಗಂಡ ಮೇಲ್ವಿಚಾರಣೆ ತಂಡಗಳನ್ನು ರಚಿಸಿ ವ್ಯವಸ್ಥಾಪಕ...
ಮುಂದಿನ ಪೀಳಿಗೆ ಉಳಿವಿಗಾಗಿ ಸಾವಯವ ಕೃಷಿ ಅವಶ್ಯಕ: ಸಚಿವ ಮುನಿಯಪ್ಪ
ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯಗಳ ಮೇಳ-2025 ಸಿರಿಧಾನ್ಯಗಳ ಸೇವನೆಯಿಂದ ಆರೋಗ್ಯ ವೃದ್ಧಿ ಬೆಂಗಳೂರು: ಮುಂದಿನ ಪೀಳಿಗೆಗೆ ಗುಣಮಟ್ಟದ ಆಹಾರ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಹಾಗಾಗಿ...
ಲೋಕ ಸೇವಾ ಆಯೋಗಗಳು ಕಾರ್ಯಾಂಗಕ್ಕೆ ಅಭೂತಪೂರ್ವ ಕೊಡುಗೆ ನೀಡುವ ಪ್ರಜಾ ಪ್ರಭುತ್ವದ ಸ್ತಂಭಗಳು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಲೋಕ ಸೇವಾ ಆಯೋಗಗಳು ಅರ್ಹತೆ ಮತ್ತು ನ್ಯಾಯಪರತೆಯನ್ನು ಎತ್ತಿಹಿಡಿದು, ಕಾರ್ಯಾಂಗಕ್ಕೆ ಅಭೂತಪೂರ್ವ ಕೊಡುಗೆಯನ್ನು ನೀಡುವ ಪ್ರಜಾಪ್ರಭುತ್ವದ ಸ್ತಂಭಗಳಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರಾಜ್ಯ ಲೋಕಸೇವಾ...
KSRTC: ಶಸ್ತ್ರಚಿಕಿತ್ಸೆ ಗೊಳಗಾದ ಚಾಲಕನಿಗೆ ರಜೆ ಕೊಡದೆ ಗೈರು ಹಾಜರಿಹಾಕಿ 4 ತಿಂಗಳ ವೇತನ ತಡೆಹಿಡಿದ ಅಧಿಕಾರಿಗಳು
ಅನಾರೋಗ್ಯದ ನಡುವೆಯೂ ಕಚೇರಿಯಿಂದ ಡಿಪೋಗೆ - ಡಿಪೋನಿಂದ ಕಚೇರಿಗೆ ಅಲೆಯುತ್ತಿರು ಚಾಲಕ ವೇತನಕ್ಕಾಗಿ ಚಾಲಕನ ಅಲೆದಾಟ, ಪರದಾಟ ಆರ್ಥಿಕ ಸಂಕಷ್ಟದಲ್ಲಿ ಕುಟುಂಬ-ಆದರೂ ಕರಗದ ಅಧಿಕಾರಿಗಳ ಮನಸ್ಸು ದೊಡ್ಡಬಳ್ಳಾಪುರ:...