Please assign a menu to the primary menu location under menu

CrimeNEWSನಮ್ಮಜಿಲ್ಲೆ

ಕೆಎಸ್‌ಆರ್‌ಟಿಸಿ ಮಡಿಕೇರಿ ಡಿಪೋ: ಲೈಟ್‌ ವಿಷಯದಲ್ಲಿ ಗಲಾಟೆ – ಠಾಣೆಯಲ್ಲಿ ಸಂಧಾನ

ವಿಜಯಪಥ ಸಮಗ್ರ ಸುದ್ದಿ

ಮಡಿಕೇರಿ: ಕೆಎಸ್‌ಆರ್‌ಟಿಸಿ ಡಿಪೋದ ಕೆಎಂಪಿಎಲ್ ಮಾಸ್ಟರ್ ಮತ್ತು ಕಿರಿಯ ಸಹಾಯಕನ ನಡುವೆ ಕಚೇರಿಯಲ್ಲಿ ಹಾಕಿದ್ದ ಲೈಟ್‌ ಆಫ್‌ ಮಾಡುವ ಬಗ್ಗೆ ಗಲಾಟೆಯಾಗಿದ್ದು ಈ ವೇಳೆ ಮಾಸ್ಟರ್ ಅವಾಚ್ಯವಾಗಿ ಕಿರಿಯ ಸಹಾಯಕನಿಗೆ ಬೈಯುತ್ತಿದ್ದಾನೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಘಟಕದ ಮಾಸ್ಟರ್ ವೈಲೇಶ್‌ ಎಂಬುವರು ಕಿರಿಯ ಸಹಾಯಕ ಮಾಕ್ಸ್‌ ಬ್ರೌನ್‌ ಎಂಬುವರಿಗೆ ಬೈದಿರುವುದು. ಈ ವೇಳೆ ಮಾಕ್ಸ್‌ ಬ್ರೌನ್‌ ಅವರಿಗೆ ಕಲ್ಲಿನಲ್ಲಿ ಹೊಡೆಯಲು ಹೋಗುತ್ತಾನೆ. ಅಲ್ಲದೆ ವಿಡಿಯೋ ಮಾಡುತ್ತಿದ್ದೀಯ ನೀನು ಏನು ಮಾಡಿಕೊಳ್ಳೊಕ್ಕಾಗುತ್ತೆ ಎಂದು ಮತ್ತೆ ಹೊಡೆಯಲು ಹೋಗುತ್ತಾನೆ.

ನೀವು ನನಗೆ ಬೈಯಬೇಡಿ ಎಂದು ಚಾಲಕ ಹೇಳಿದರೆ ಇನ್ನೇನು ಮಾಡಬೇಕು ಎಂದು ಒದೆಯಲು ಹೋಗುತ್ತಾನೆ. ನೀನು ಅಪ್ಪನಿಗೆ ಹುಟ್ಟಿದವನ ಸೂ…ಗನೆ ಎಂದೆಲ್ಲ ಬೈಯುತ್ತಿದ್ದಾನೆ. ಈ ಸಂಬಂಧ ನಿನ್ನೆ ಮಾಕ್ಸ್‌ ಬ್ರೌನ್‌ ಅವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ನಡುವೆ ಇಂದು ಠಾಣೆಗೆ ವೈಲೇಶ್‌ ಅವರನ್ನು ಕರೆಸಿಕೊಂಡ ಪೊಲೀಸರು ವಿಚಾರಣೆ ಮಾಡಿದ ಬಳಿಕ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ರಾಜೀಮಾಡಿ ಕಳುಹಿಸಿದ್ದಾರೆ.

ಈ ನಡುವೆ ವೈಲೇಶ್‌ ವಿರುದ್ಧ ಮಾಕ್ಸ್‌ ಬ್ರೌನ್‌, ಮಾಕ್ಸ್‌ ಬ್ರೌನ್‌ ವಿರುದ್ಧ ವೈಲೇಶ್‌ ಅವರು ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದು, ವೈಲೇಶ್‌ ಅವರು ನನಗೆ ಕೆಲಸದಲ್ಲಿ ಸಹಕಾರ ನೀಡುತ್ತಿಲ್ಲ ಎಂದು ಹೇಳಿದರೆ, ಮಾಕ್ಸ್‌ ಬ್ರೌನ್‌ ಅವರು ನನ್ನ ಕೆಲಸ ಯಾವ ಬಸ್‌ಗೆ ಎಷ್ಟು ಡೀಸೆಲ್‌ ಹಾಕಿದ್ದಾರೆ ಎಂಬುವುದನ್ನು ಲಾಗ್‌ಶೀಟ್‌ನಲ್ಲಿ ಎಂಟ್ರಿ ಮಾಡಿ ನಂತರ ಗಣಕಯಂತ್ರದಲ್ಲಿ ಹಾಕುತ್ತೇನೆ ಇದು ಬಿಟ್ಟು ನಾನು ಬೇರೆ ಯಾವುದೇ ವಿಷಯದಲ್ಲಿ ತಲೆಹಾಕುತ್ತಿಲ್ಲ ಎಂದು ಹೇಳಿದ್ದಾರೆ.

ಆದರೂ, ನನಗೆ ವೈಲೇಶ್‌ ಅವರು ಲೈಟ್‌ ಹಾಕ್ಕಿದ್ದ ವಿಷಯವಾಗಿ ಜಗಳ ಮಾಡಿ ಅವಾಚ್ಯವಾಗಿ ನಿಂದಿಸಿದರು. ಇದನ್ನು ನಾನು ನಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನಂತರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದೆ ಎಂದು ತಿಳಿಸಿದ್ದಾರೆ.

ಇನ್ನು ವೈಲೇಶ್‌ ಮತ್ತು ಮಾಕ್ಸ್‌ ಬ್ರೌನ್‌ ಅವರ ಗಲಾಟೆ ಒಂದು ರೀತಿ ವೈಯಕ್ತಿಕವಾಗಿದ್ದು, ಸಂಸ್ಥೆಗೆ ಸಂಬಂಧಿಸಿದಲ್ಲ ಎಂದು ಅಲ್ಲಿದ್ದ ಚಾಲಕರು ಹೇಳಿದ್ದಾರೆ. ಹೀಗಾಗಿ ಇದನ್ನು ಮುಂದುವರಿಸಿಕೊಂಡು ಹೋಗದೆ ಇಲ್ಲಿಗೇ ನಿಲ್ಲಿಸಬೇಕು ಎಂದು ಅಧಿಕಾರಿಗಳು ಇಬ್ಬರಿಗೂ ತಿಳಿಹೇಳಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

error: Content is protected !!
LATEST
4 ವರ್ಷಕ್ಕೊಮ್ಮೆ ಚೌಕಾಸಿ ನಡೆಸುವ ಬದಲು 7ನೇ ವೇತನ ಆಯೋಗ ಜಾರಿಮಾಡಿ: ನೌಕರರ ಸೇನೆ ಆಗ್ರಹ ದೇಶದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಇನ್ನಿಲ್ಲ 2024ರ ಜನವರಿಯಿಂದ ಈವರೆಗೂ 48 ದೌರ್ಜನ್ಯ ಪ್ರಕರಣಗಳು ದಾಖಲು: ಅಪರ ಜಿಲ್ಲಾಧಿಕಾರಿ ಅಮರೇಶ್ KSRTC: ಡಿ.31ರಿಂದ ಕರೆ ಕೊಟ್ಟಿರುವ ಮುಷ್ಕರ ಬೆಂಬಲಿಸದ ನೌಕರರು- ವಿಲವಿಲ ಒದ್ದಾಡುತ್ತಿರುವ ಜಂಟಿ ಸಮಿತಿ ಮುಖಂಡರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿ.27ರಂದು BMTC & KSRTC ನಿವೃತ್ತ ನೌಕರರ ಪ್ರತಿಭಟನೆ ಮೈಸೂರು: ದೆಹಲಿ ರೈತ ಹೋರಾಟ ಬೆಂಬಲಿಸಿ ಮೇಣದ ಬತ್ತಿ ಬೆಳಗಿಸಿ ಪ್ರತಿಭಟನೆ KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌