Please assign a menu to the primary menu location under menu

CrimeNEWSನಮ್ಮಜಿಲ್ಲೆ

ಅಪರಿಚಿತ ವಾಹನ ಡಿಕ್ಕಿ ಹೊಡೆದು ಬಸವೇಶ್ವರ ವೃತ್ತ ಹಾನಿ ಖಂಡಿಸಿ ರಸ್ತೆ ತಡೆ

ವಿಜಯಪಥ ಸಮಗ್ರ ಸುದ್ದಿ

ಜೇವರ್ಗಿ: ಪಟ್ಟಣದ ಬಿಜಾಪುರ ಕ್ರಾಸ್ ಹತ್ತಿರದ ಬಸವೇಶ್ವರ ವೃತ್ತಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಹಾನಿಗೊಂಡಿರುವುದನ್ನು ಖಂಡಿಸಿ ಮತ್ತು ವೃತ್ತಕ್ಕೆ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಒತ್ತಾಯಿಸಿ ರಸ್ತೆತಡೆ ಹಾಗೂ ಪ್ರತಿಭಟನೆ ಮೆರವಣಿಗೆ ನಡೆಯಿತು .

ಇಂದು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಸಿದ್ದು ಸಾಹು ಅಂಗಡಿ ಹಾಗೂ ಬಸವಕೇಂದ್ರದ ಅಧ್ಯಕ್ಷ ಶರಣಬಸವ ಕಲ್ಲಾ ನೇತೃತ್ವದಲ್ಲಿ ಪ್ರತಿಭಟನೆ ಜರುಗಿತು.

ನ.29 ರಂದು ರಾತ್ರಿ ಬಸವೇಶ್ವರ ವೃತ್ತದ ವೃತ್ತಕ್ಕೆ ಯಾವುದೊ ಅಪರಿಚಿತ ವಾಹನ ಡಿಕ್ಕಿ ಹೊಡೆದು ವೃತ್ತವು ಸಂಪೂರ್ಣ ಜಖಂಗೊಂಡಿದೆ. ಶೀಘ್ರದಲ್ಲಿ ಅಪರಿಚಿತ ವಾಹನವನ್ನು ಜಪ್ತಿ ಮಾಡಿ , ಅಪರಾಧಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಇನ್ನು ಶೀಘ್ರದಲ್ಲಿ ಹಾನಿಗೊಂಡಿರುವ ಬಸವೇಶ್ವರ ವೃತ್ತವನ್ನು ದುರಸ್ತಿಗೊಳಿಸಬೇಕು. ರಾತ್ರಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲು ಒತ್ತಾಯಿಸಿ ಜೇವರ್ಗಿ ತಹಸೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

ಸಮಾಜದ ಹಿರಿಯರಾದ ಷಣ್ಮುಖಪ್ಪ ಸಾಹು ಗೋಗಿ, ಬಸವರಾಜ ಪಾಟೀಲ್ ನರಿಬೋಳ, ಚಂದ್ರಶೇಖರ ಸೀರಿ, ಮಹಾಂತಯ್ಯ ಹಿರೇಮಠ, ರವಿ ಕೋಳಕೂರ , ರೇವಣಸಿದ್ದಪ್ಪ ಸಂಕಾಲಿ, ಭೀಮರಾಯ ಗುಜಗೊಂಡ, ವಿಶ್ವನಾಥ ಇಮ್ಮಣ್ಣಿ, ಆದಪ್ಪ ಸೀಕೆದ.

ಅನಿಲ ರಾಂಪುರ, ಬಸವರಾಜ ಪಾಟೀಲ ಕುಕನೂರು, ಬಸವರಾಜ ಸಾಸಾಬಾಳ, ಶಾಂತರಾಜ ಪಾಟೀಲ್ ನರಿಬೋಳ, ಮಲ್ಲಿಕಾರ್ಜುನ ಬಿರಾದಾರ, ವಿಜಯಕುಮಾರ್ ನರಿಬೋಳ, ಅಶೋಕ ಪಾಟೀಲ ಗುಡೂರ್, ಗುರುಲಿಂಗಯ್ಯ ಸ್ವಾಮಿ ಯನಗುಂಟಿ.

ಭಗವಂತರಾಯ ಶಿವಣ್ಣಿ, ತಿಪ್ಪಣ್ಣ ಹಡಪದ , ಸಂಗನಗೌಡ ಪಾಟೀಲ ರದ್ದೇವಾಡಗಿ , ಶ್ರೀಶೈಲಗೌಡ ಪಾಟೀಲ ಕರ್ಕಿಹಳ್ಳಿ , ಶಿವಕುಮಾರ ಕಲ್ಲಾ, ಕಂಟೆಪ್ಪ ಮಾಸ್ಟರ್ , ಸಂಗನಗೌಡ ಪಾಟೀಲ್ ಅವರಾದ , ಶರಣು ಪಾಟೀಲ್ ಗುಡೂರ , ಸಿದ್ದು ಸಾಹು ಗೋಗಿ.

ಕೇದಾರಲಿಂಗಯ್ಯ ಹಿರೇಮಠ, ವಿಶ್ವ ಪಾಟೀಲ್ ರಾಸಣಗಿ, ಶಿವು ಗೌಡ ಕೆಲ್ಲೂರು, ಭುಜಂಗಪ್ಪ ದೇಶೆಟ್ಟಿ , ವಿಜಯಕುಮಾರ ಪಾಟೀಲ ಸೇಡಂ ಹಾಗೂ ವೀರಶೈವ ಸಮಾಜದ ಮುಖಂಡರು ಹಾಗೂ ಬಸವ ಕೇಂದ್ರದ ಅಭಿಮಾನಿಗಳು ಉಪಸ್ಥರಿದ್ದರು.

Leave a Reply

error: Content is protected !!
LATEST
ಜ.6ರಿಂದ KSRTC ಸಂಸ್ಥೆಯ ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ಜಾರಿ: ನಿರ್ದೇಶಕರ ಆದೇಶ ಸಾರಿಗೆ ಕಾರ್ಮಿಕರ ಬೀದಿಗೆ ತಂದಿದ್ದು ಹೊಸ ಸಂಘಟನೆ ಮುಖಂಡ ನಾವಲ್ಲ: ಜಂಟಿ ಪದಾಧಿಕಾರಿ ಡಿ.31ರಂದು ಜಗಜಿತ್ ಸಿಂಗ್ ದಲೈವಾಲರ ಹೋರಾಟ ಬೆಂಬಲಿಸಿ ರಾಜ್ಯಾದ್ಯಂತ ಪಂಜಿನ ಪ್ರತಿಭಟನಾ ಮೆರವಣಿಗೆ KSRTC: ಸಾರಿಗೆ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ ಮುಂದೂಡಿದ ಜಂಟಿ ಕ್ರಿಯಾ ಸಮಿತಿ ಇಂದು ಸಾರಿಗೆ ನೌಕರರ ವೇತನ ಹೆಚ್ಚಳ ಸಂಬಂಧ ತುರ್ತು ಸಭೆ ಕರೆದ ಸಿಎಂ KSRTC ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರ ತಡೆಯಲು ಮುಂದಾದ ಸರ್ಕಾರ? NWKRTC: ಡಿ.31ರ ಮುಷ್ಕರಕ್ಕೆ ನಮ್ಮ ಬೆಂಬಲ ಇಲ್ಲ- ಹುಬ್ಬಳ್ಳಿ ಸಾರಿಗೆ ನೌಕರರ ಒಕ್ಕೂಟ NWKRTC: ಬಸ್‌-ಕಾರು ನಡುವೆ ಅಪಘಾತ - ಮಹಿಳೆ ಮೃತ, ಇಂಜಿನಿಯರ್‌ಗೆ ಗಾಯ ದೆಹಲಿ ರೈತರ ಹೋರಾಟ ಬೆಂಬಲಿಸಿ ಬನ್ನೂರಿನಲ್ಲಿ ರೈತರು- ರೈತ ಮುಖಂಡರ ಪ್ರತಿಭಟನೆ KSRTC: ಅಧಿಕಾರಿಗಳು ಬೀದಿಗಿಳಿಯದ ಹೊರತು ನಾವು ಮುಷ್ಕರ ಬೆಂಬಲಿಸಲ್ಲ- ಸಮಸ್ತ ಚಾಲನಾ ಸಿಬ್ಬಂದಿಗಳು