ಬೆಂಗಳೂರು: ಓಮಿಕ್ರಾನ್ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ವ್ಯಾಕ್ಸಿನೇಷನ್ ಹೆಚ್ಚಿಸಿ ಪ್ರತಿದಿನ ಒಂದು ಲಕ್ಷ ಸೋಂಕು ಪರೀಕ್ಷಿಸಲು ಸೇರಿದಂತೆ ಬೆಳಗಾವಿಯಲ್ಲಿಯೇ ಅಧಿವೇಶನ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಆರೋಗ್ಯ ತಜ್ಞರು ಅಧಿಕಾರಿಗಳೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಸಿದ ಇಂದಿನ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಬೆಳಗಾವಿ ಅಧಿವೇಶನಕ್ಕೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ವಿವರ ನೀಡಿದರು.
ತಜ್ಞರ ಜೊತೆ ಸುದೀರ್ಘ ಸಭೆ ಮಾಡಲಾಗಿದೆ ರಾಜ್ಯದಲ್ಲಿ 2 ಪ್ರಕರಣ ಪತ್ತೆಯಾಗುದೆ. ವಿಶ್ವದಲ್ಲಿ 400 ಪ್ರಕರಣ ಪತ್ತೆಯಾಗಿದೆ. ಈ ರೋಗದಿಂದ ಇದೂವರೆಗೂ ಯಾವುದೇ ಸಾವಿನ ವರದಿ ಇಲ್ಲ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಹೆಚ್ಚಿನ ಮಾಹಿತಿ ನೀಡುವಂತೆ ಸರ್ಕಾರ ಮನವಿ ಮಾಡಲಾಗುವುದು ಎಂದರು.
ಆಕ್ಷಿಜನ್ ನೆಟ್ ವರ್ಕ್, ಸಮಿತಿ ಮತ್ತೆ ಶುರು ಮಾಡಲಾಗುವುದು. ರಾಜ್ಯದಲ್ಲಿ ಕಂಟ್ರೋಲ್ ರೂಂ ಮತ್ತೆ ಆರಂಭಿಸಲು ಸೂಚನೆ ನೀಡುತ್ತಿದ್ದು, ಕಳೆದ ಬಾರಿ ಉಂಟಾದಂತೆ ಈ ಬಾರಿ ಔಷಧಿಯ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವ ಬಗ್ಗೆ ಹಾಗೂ ಶಾಂಗ್ರಿಲ್ ಹೋಟೆಲ್ ನಲ್ಲಿ ಸಭೆ ಮಾಡಿ ಹೋದವರಿಗೆ ಪಾಸಿಟಿವ್ ಬಂದಿರುವ ಬಗ್ಗೆ ತಪ್ಪು ಮಾಹಿತಿ ನೀಡಿರುವ ಬಗ್ಗೆ ತನಿಖೆಗೆ ಮೀನಾ ನಾಗರಾಜ್ ಅವರನ್ನು ಉಸ್ತುವಾರಿ ಅಧಿಕಾರಿಯಾಗಿ ನೇಮಕ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು.
ಫ್ಲೈಟ್ ಬೋರ್ಡಿಂಗ್ ಆದ ತಕ್ಷಣ ಎಲ್ಲ ಮಾಹಿತಿ ಲಭ್ಯವಾಗುವಂತೆ ಹಾಗೂ ನಿಗದಿಯಾದಂತೆ ಬೆಳಗಾವಿಯಲ್ಲಿಯೇ ಅಧಿವೇಶನ ನಡೆಸುವ ಬಗ್ಗೆ ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಶೋಕ್ ಸ್ಪಷ್ಟಪಡಿಸಿದರು.