NEWSಆರೋಗ್ಯಕೃಷಿ

ಅನ್ನದಾತರ ಆರೋಗ್ಯ ಕಾಪಾಡುವ ಹೊಣೆ ಎಲ್ಲರದು: ಕುರುಬೂರು ಶಾಂತಕುಮಾರ್

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಅನ್ನದಾತರ ಆರೋಗ್ಯ ಕಾಪಾಡುವ ಗುರುತರ ಹೊಣೆ ಪ್ರತಿಯೊಬ್ಬರ ಕರ್ತವ್ಯವಾಗಿರಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಪುಟ್ಟೇಗೌಡನ ಹುಂಡಿ ಸರ್ಕಾರಿ ಶಾಲೆಯ ಆವರಣದಲ್ಲಿ ಗುರುವಾರ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಗ್ರಾಮೀಣ ಜನರ ಆರೋಗ್ಯ ಸೇವಾಪಡೆ ವತಿಯಿಂದ ಆಯೋಜಿಸಿದ್ದ ಗ್ರಾಮೀಣ ಜನರ ಆರೋಗ್ಯ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಜನರು ಅಮಾಯಕ ಮುಗ್ಧ ಜನರು. ಶ್ರಮ ಹಾಕಿ ಬೆವರು ಸುರಿಸಿ ಆಹಾರ ಉತ್ಪಾದನೆ ಮಾಡುತ್ತಾರೆ. ಇಂತಹ ಜನರ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ದೇಶದ ಜನರ ಆಹಾರ ಆರೋಗ್ಯ ಚೆನ್ನಾಗಿರಲು ಸಾಧ್ಯ. ಅದನ್ನು ಮನಗಂಡು ಗ್ರಾಮೀಣ ಭಾಗದಲ್ಲಿ ತಪಾಸಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಇಂದು ವೈದ್ಯಕೀಯ ಕ್ಷೇತ್ರ ಬಂಡವಾಳಶಾಹಿಗಳ ತೆಕ್ಕೆಗೆ ಸಿಲುಕಿದೆ, ಇದರಿಂದ ಸೇವಾ ಮನೋಭಾವನೆ ದೂರವಾಗಿ ಹಣ ಮಾಡುವ ದಂಧೆ ನಡೆಯುತ್ತಿದೆ. ಬಹುತೇಕ ವೈದ್ಯರಲ್ಲಿ ಸೇವೆ ಎನ್ನುವ ಕರ್ತವ್ಯ ಮಾಯವಾಗುತ್ತಿದೆ ಇದು ದುರ್ದೈವದ ಸಂಗತಿ ಎಂದರು.

ಒನ್ನು ಇಂದಿನ ಆಸ್ಪತ್ರೆಗಳು ಸೇವೆಗಿಂತ ಹೆಚ್ಚು ಹಣ ಮಾಡುವ ಕಾಯಕ ದಂದೆಯ ಕೇಂದ್ರಗಳಾಗಿವೆ, ಸರ್ಕಾರಿ ಆಸ್ಪತ್ರೆಯ ಸೇವೆಗಳು ಬಡವರಿಗೆ ಸಮರ್ಪಕವಾಗಿ ಸಕಾಲಕ್ಕೆ ಸಿಗದೇ ಇರುವ ಕಾರಣ, ಸರ್ಕಾರಿ ಆಸ್ಪತ್ರೆಗಳು ಬಡವರ ಪಾಲಿಗೆ ಬಲಿಕೊಡುವ ಕೇಂದ್ರಗಳಾಗಿವೆ. ಇದನ್ನು ಮನಗಂಡು ಮುರಿತ ಸೇವಾ ಭಾವನೆ ಇರುವ ವೈದ್ಯರ ಜೊತೆಗೂಡಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಶಿಬಿರ ಸೇವೆ ಆರಂಭಿಸಿ ಮಾತನಾಡಿದ ಜೆಎಸ್ಎಸ್ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರತಿಭಾ ಫೆರಾರ, ಹಳ್ಳಿಗಳಿಗೆ ತೆರಳಿ ಹಳ್ಳಿಯ ಜನರ ಆರೋಗ್ಯ ತಪಾಸಣೆ ನಡೆಸಿ ಉಚಿತ ಚಿಕಿತ್ಸೆ ನೀಡಲು ಪ್ರತಿ ತಿಂಗಳು ನಮ್ಮ ವೈದ್ಯರ ತಂಡ ಸೇವೆಗೆ ಬರಲು ಸಿದ್ಧವಿದೆ. ಹಳ್ಳಿಯ ಜನರಿಗೆ ಆರೋಗ್ಯ ಕಾಪಾಡಿಕೊಳ್ಳಲುಬೇಕಾದ ಮುಂಜಾಗ್ರತ ಸೌಲಭ್ಯ ದೊರಕಿಸಲು ನಾವು ಸಿದ್ದರಿದ್ದೇವೆ ಎಂದರು.

ನಿವೃತ್ತ ಪ್ರಾಂಶುಪಾಲ ಮಹಾದೇವಯ್ಯ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ.ಮೇಜರ್ ಆರಾಧ್ಯ, ಡಾ.ಅಶ್ವಿನಿ, ಡಾ. ಸೌಮ್ಯ, ಸಂಘಟನೆಯ ಪ್ರಮುಖರಾದ ಅತ್ತಹಳ್ಳಿ ದೇವರಾಜ್, ಪಿ.ಸೋಮಶೇಖರ್, ವೆಂಕಟೇಶ್, ಪುಟ್ಟಗೌಡನಹುಂಡಿ ರಾಜು, ಮಹೇಶ್, ಪಾಳ್ಯ ಚಂದ್ರು, ಬರಡನಪುರ ನಾಗರಾಜು, ಕಿರಗಸುರು ಶಂಕರ್, ಸಿದ್ದೇಶ್, ಮುಂತಾದವರಿದ್ದರು.

ಬೆಳಗ್ಗೆ 11ರಿಂದ ಮೂರು ಗಂಟೆ ತನಕ ಮುನ್ನೂರಕ್ಕೂ ಹೆಚ್ಚು ಜನರಿಗೆ ಹಾಗೂ ಶಾಲಾ ಮಕ್ಕಳಿಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು.

Leave a Reply

error: Content is protected !!
LATEST
KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC