NEWSನಮ್ಮರಾಜ್ಯರಾಜಕೀಯಲೇಖನಗಳು

ದೊಡ್ಡ ಗೌಡರ ಕುಟುಂಬದ ಮೇಲೆ ಹೆಗಡೆಯವರ ಕೆಟ್ಟ ದೃಷ್ಟಿಯೇ ಬಿದ್ದಿರಬಹುದಾ?

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ತ್ತೀಚೆಗೆ ಒಂದು ದಿನ ನಮ್ಮ ಮನೆಗೆ ವಿಜಯವಾಣಿ ಪತ್ರಿಕೆ ಬಂದಿರಲಿಲ್ಲ. ಮೊನ್ನೆ ನನ್ನ ಸ್ನೇಹಿತರೊಬ್ಬರ ಮನೆಗೆ ಹೋಗಿದ್ದಾಗ ಟೀಪಾಯಿ ಮೇಲೆ ಅದೇ ದಿನದ ಪತ್ರಿಕೆ ಇತ್ತು. ಹಾಗೇ ಕಣ್ಣು ಹಾಯಿಸುತ್ತಿದ್ದಾಗ ಸುದ್ದಿಯೊಂದನ್ನು ನೋಡಿದೆ. ಹಳೆಯ ನೆನಪಿನ ಸುರುಳಿಯೊಂದು ಬಿಚ್ಚಿಕೊಂಡಿತು. ಅದನ್ನೇ ನಿಮ್ಮ ಮುಂದಿಡುತ್ತಿದ್ದೇನೆ.

ಮಾನ್ಯ ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕಮಾರ ಸ್ವಾಮಿಯವರು ತಮ್ಮ ತಂದೆಯವರ ಮೇಲೆ ಯಾರದ್ದೋ ಕೆಟ್ಟ ದೃಷ್ಟಿ ಬಿದ್ದಿದೆ. ಅವರು ಓಡಾಡದಂತಾಗಿದ್ದಾರೆ ಎಂದು ಅಲವತ್ತುಕೊಂಡು ಕಣ್ಣೀರಿಟ್ಟಿದ್ದಾರೆ.

ಅವರ ಕಣ್ಣೀರು ನೋಡಿದ ಸೋದರ ರೇವಣ್ಣನವರ ಕಣ್ಣಲ್ಲೂ ನೀರು ಬಂದಿದೆ. ಕಣ್ಣೀರು ಗೌಡರ ಹಾಗೂ ಕುಟುಂಬಕ್ಕೊಂದು ಬಳುವಳಿ. ಇರಲಿ. ದೊಡ್ಡ ಗೌಡರಿಗೇನೂ ಚಿಕ್ಕಪುಟ್ಟ ವಯಸ್ಸಲ್ಲ. ಅಲ್ಲದೇ ಮನಸ್ಸಿಗೆ ಮುಪ್ಪು ಬರದಿರಬಹುದು. ಆದರೆ ದೇಹಕ್ಕೆ ಮುಪ್ಪು ಬರುವುದು ಸಹಜ.

ಕುಮಾರಸ್ವಾಮಿ ಅವರ ಯೋಚನಾ ಲಹರಿ ಸ್ವಲ್ಪ ಮಟ್ಟಿಗೆ ನಿಜವೂ ಇರಬಹುದು. 1989ರ ಮುನ್ನ ಜನತಾದಳ ಅಧಿಕಾರದಲ್ಲಿದ್ದು ರಾಮಕೃಷ್ಣ ಹೆಗಡೆಯವರು ಮುಖ್ಯ ಮಂತ್ರಿ ಆಗಿದ್ದರು. ದೊಡ್ಡಗೌಡರೂ ಅವರ ಸಚಿವ ಸಂಪುಟದಲ್ಲಿದ್ದರು. ಅವರ ನಡುವೆ ಒಡಕು ಮೂಡಿ ದೊಡ್ಡ ಗೌಡರು ಪಕ್ಷಕ್ಕೆ ರಾಜಿನಾಮೆಯಿತ್ತು ಹೊರಬಂದು ಸಮಾಜವಾದಿ ಜನತಾ ದಳ ಎಂಬ ಪಕ್ಷ ಹುಟ್ಟು ಹಾಕಿದರು. 1989ರ ಚುನಾವಣೆಯಲ್ಲಿ ಎಲ್ಲ 224 ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಹಾಕಿ ಹೆಗಡೆಯವರನ್ನೂ ಜನತಾದಳವನ್ನೂ ಸೋಲಿಸಿದರು. ಅವರ ಪಕ್ಷವೂ ಅತ್ಯಂತ ಹೀನಾಯ ರೀತಿಯಲ್ಲಿ ಸೋತಿತು.

ಆ ಸಂದರ್ಭದಲ್ಲಿ ಖ್ಯಾತ ಭವಿಷ್ಯಕಾರರೂ ಜ್ಯೋತಿಷಿಗಳೂ ಆದವರೊಬ್ಬರ (ಅವರ ಹೆಸರು ಬೇಡ) ಮನೆಗೆ ಹೋದ ದೊಡ್ಡಗೌಡ್ರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಅಲವತ್ತುಕೊಂಡರು. ಆಗ ಆ ಭವಿಷ್ಯಕಾರರು ಹೆಗಡೆಯವರ ಜೊತೆ ಹಗೆತನ ಬೇಡ. ನಿಮಗೆ ಶಾಪ ತಟ್ಟುತ್ತದೆ. ಜೊತೆಗೆ ನೀವು ಯಾವುದೇ ಅಧಿಕಾರ ಪಡೆದರೂ ಪೂರ್ಣ ಅವಧಿ ಮುಗಿಸುವುದಿಲ್ಲ. ಜಾರು ಬಂಡೆಯ ತುದಿಯಲ್ಲಿ ಕುಳಿತಂತೆ ಕೆಳಕ್ಕೆ ಜಾರಿಬಿಡುತ್ತೀರಿ ಎಂದು ಹೇಳಿದರು.

ಆದರೆ ದೊಡ್ಡಗೌಡರು ಆ ಸಲಹೆಯನ್ನು ತಕ್ಷಣಕ್ಕೆ ಸ್ವೀಕರಿಸಲಿಲ್ಲ. ಹಾಗಾಗಿ ಅವರು ಯಾವ ಅಧಿಕಾರವನ್ನೂ ಪೂರ್ಣಾವಧಿ ಮುಗಿಸಲಿಲ್ಲ. ಆದರೆ ಎಷ್ಟೋ ಸಮಯದ ನಂತರ ಅವರು ಆತ್ಮೀಯ ಮತ್ತು ಗೌರವಾನ್ವಿತ ಹಿರಿಯ ಪತ್ರಕರ್ತರೊಬ್ಬರ ಸತತ ಮನವೊಲಿಕೆಯ ನಂತರ ಹೆಗಡೆಯವರ ಜೊತೆ ರಾಜಿಯಾದರು. ತತ್ಫಲವಾಗಿ 1994ರಲ್ಲಿ ಮುಖ್ಯಮಂತ್ರಿಯಾದರು. ಪ್ರಧಾನಿ ಸ್ಥಾನಕ್ಕೆ ಆಯ್ಕೆ ಆದುದರಿಂದ ಅವಧಿಗೆ ಮುಂಚೆಯೇ ಮುಖ್ಯ ಮಂತ್ರಿ ಸ್ಥಾನ ತ್ಯಜಿಸಿದರು. ಅಲ್ಲಿಯೂ ಪೂರ್ಣಾವಧಿ ಇರಲಿಲ್ಲ.

ಈ ಪರಂಪರೆ ಅವರ ಪುತ್ರ ಕುಮಾರಸ್ವಾಮಿ ಅವರ ಕಾಲಕ್ಕೂ ಮುಂದುವರಿಯಿತು. ಮುಖ್ಯ ಮಂತ್ರಿ ಎಸ್. ಎಂ. ಕೃಷ್ಣ ಅವರು ವಿಧಾನ ಸಭೆ ವಿಸರ್ಜಿಸಿ ಚುನಾವಣೆಗೆ ಹೋದಾಗ ಯಾವ ಪಕ್ಷಕ್ಕೂ ಬಹುಮತ ಬರಲಿಲ್ಲ. (ಇದೇ ಭವಿಷ್ಯಕಾರರು ವಿಧಾನ ಸಭೆ ವಿಸರ್ಜಿಸದಂತೆ ಕೃಷ್ಣ ಅವರಿಗೂ ಸಲಹೆ ಮಾಡಿದ್ದರು. ಈ ಬಗ್ಗೆ ಮುಂದೆ ಬರೆಯುತ್ತೇನೆ.) ಆಗ ಕಾಂಗ್ರೆಸ್ ಜೊತೆ ಕೃಜೋಡಿಸಿದ ದೊಡ್ಡ ಗೌಡರು ಮಗನನ್ನು ಉಪ ಮುಖ್ಯ ಮಂತ್ರಿ ಮಾಡಿದರು. ಆಗಲೂ ಕುಮಾರ ಸ್ವಾಮಿಯವರು ಅವಧಿ ಪೂರೈಸಲಿಲ್ಲ.

ಮುಖ್ಯ ಮಂತ್ರಿಯಾಗುವ ಆಸೆಯಿಂದ 40 ಜನ ಜೆಡಿಎಸ್ ಶಾಸಕರ ಜೊತೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಬೆಂಬಲ ನೀಡಿ ಬಿಜೆಪಿ ಜೊತೆ ಸಮ್ಮಿಶ್ರ ಸರ್ಕಾರ ರಚಿಸಿದರು. ಆಗಲೂ ಸಂಪೂರ್ಣ ಅವಧಿ ಅಧಿಕಾರದಲ್ಲಿರಲಿಲ್ಲ. ಕಳೆದ ಚುನಾವಣೆಯಲ್ಲೂ ಮುಖ್ಯ ಮಂತ್ರಿ ಪದವಿ ಕುಮಾರ ಸ್ವಾಮಿಯವರನ್ನು ಹುಡುಕಿಕೊಂಡು ಬಂದಿತು ಆದರೂ ಪೂರ್ಣಾವಧಿ ಮುಗಿಸಲಾಗಲಿಲ್ಲ.

ಈ ಎಲ್ಲ ಬೆಳವಣಿಗೆಗಳನ್ನೂ ವಿಶ್ಲೇಷಿಸಿದಾಗ ಕುಮಾರ ಸ್ವಾಮಿಯವರು ಭಾವಿಸಿದಂತೆ ದೊಡ್ಡ ಗೌಡರು ಕುಟುಂಬದ ಮೇಲೆ ಹೆಗಡೆಯವರ ಕೆಟ್ಟ ದೃಷ್ಟಿಯೇ ಬಿದ್ದಿರಬಹುದಾ?

l ವೆಂಕಟನಾರಾಯಣ,
ಹಿರಿಯ ಪತ್ರಕರ್ತ

Leave a Reply

error: Content is protected !!
LATEST
ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ...