NEWSನಮ್ಮಜಿಲ್ಲೆ

BMTC: ಶೀಘ್ರದಲ್ಲೇ ರಾಜ್ಯದ ರಾಜಧಾನಿ ರಸ್ತೆಗಿಳಿಯಲಿವೆ ಮತ್ತೆ 921 ಎಲೆಕ್ಟ್ರಿಕ್ ಬಸ್‌ಗಳು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರನ್ನು ಹೊಗೆ ರಹಿತಮಾಡಲು ಬಿಎಂಟಿಸಿ ಮತ್ತಷ್ಟು ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಲು ಮುಂದಾಗಿದೆ.

ಈಗಾಲೇ 400ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳು ಸಿಲಿಕಾನ್ ಸಿಟಿಯ ರಸ್ತೆಯಲ್ಲಿ ಓಡಾಡುತ್ತಿವೆ. ಇವುಗಳ ಜತೆಗೆ ಅತೀ ಶೀಘ್ರದಲ್ಲೇ ಇನ್ನಷ್ಟು ಎಲೆಕ್ಟ್ರಿಕ್ ಬಸ್‌ಗಳನ್ನು ಬಿಎಂಟಿಸಿ ಪರಿಚಯಿಸಲಿದೆ.

ಆ ಎಲೆಕ್ಟ್ರಿಕ್ ಬಸ್‌ಗಳ ಉದ್ದ 12 ಮೀಟರ್ ಇರಲಿದ್ದು, ಸದ್ಯದಲ್ಲೇ 921 ಬಸ್‌ಗಳನ್ನು ಒದಗಿಸುವ ಗುತ್ತಿಗೆಯೂ ಟಾಟಾ ಮೋಟರ್ಸ್ ಕಂಪನಿಗೆ ದೊರೆತಿದೆ. ಅತಿ ಕಡಿಮೆ ಬಿಡ್‌ ದಾಖಲಿಸಿದ್ದಕ್ಕೆ ಟಾಟಾ ಮೋಟರ್ಸ್ ಈ ಗುತ್ತಿಗೆ ಸಿಕ್ಕಿದೆ. ಹೀಗಾಗಿ ವಿವಿಧ ಹಂತಗಳಲ್ಲಿ ಬಸ್‌ಗಳ ಪೂರೈಕೆ ಮಾಡಲಿದೆ.

ಇನ್ನು ಚಾಲಕ ಮತ್ತು ನಿರ್ವಹಣೆ ಜವಾಬ್ದಾರಿಯನ್ನು ಟಾಟಾ ಮೋಟರ್ಸ್ ಕಂಪನಿಯೇ ನೋಡಿಕೊಳ್ಳಲಿದೆ. ಆದರೆ ನಿರ್ವಾಹಕರು ಮಾತ್ರ ಬಿಎಂಟಿಸಿ ಸಿಬ್ಬಂದಿ. ಈ ಬಸ್‌ಗಳ ವಿನ್ಯಾಸವನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿ ನಿರ್ಮಿಸಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಟಾಟಾ ಮೋಟಾರ್ಸ್ ಉಪಾಧ್ಯಕ್ಷ (ಬಸ್ ತಯಾರಿಕೆ) ರೋಹಿತ್ ಶ್ರೀವಾತ್ಸವ್, ಇ-ಬಸ್ ಪೂರೈಸಲು ಗುತ್ತಿಗೆ ಸಿಕ್ಕಿರುವುದು ಸಂತಸದ ವಿಷಯ ಎಂದು ಖುಷಿ ಹಂಚಿಕೊಂಡಿದ್ದಾರೆ.

ಇನ್ನು ನಮ್ಮ ಕಂಪನಿಗೆ ದೆಹಲಿ ಸಾರಿಗೆ ನಿಗಮದಿಂದ 1,500 ಬಸ್‌ಗಳು, ಪಶ್ಚಿಮ ಬಂಗಾಳದಿಂದ 1,180 ಬಸ್‌ಗಳ ಪೂರೈಕೆಗೆ ಗುತ್ತಿಗೆ ದೊರತಿದೆ. 30 ದಿನಗಳ ಅಂತರದಲ್ಲಿ ಒಟ್ಟಾರೆ 3,600 ಇ-ಬಸ್‌ಗಳನ್ನು ಪೂರೈಸಲು ಕಾರ್ಯಾದೇಶ ಸಿಕ್ಕಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ, ಜಾಗತಿಕ ಟೆಂಡರ್‌ನಲ್ಲಿ ಭಾಗವಹಿಸಿದ್ದ ಟಾಟಾ ಮೋಟಾರ್ಸ್ ಕಂಪನಿಗೆ ಈ ಗುತ್ತಿಗೆ ದೊರೆತಿದ್ದು, 921 ಎಲೆಕ್ಟ್ರಿಕ್ ಬಸ್‌ಗಳನ್ನು ವಿವಿಧ ಹಂತಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿ ಪೂರೈಸಲಿದೆ ಎಂದು ವಿವರಿಸಿದರು.

Leave a Reply

error: Content is protected !!
LATEST
ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ...